Advocacy is the noblest of professions., 03/12/2022

Advocacy is the noblest of professions. ವಕೀಲಿ ವೃತ್ತಿ ಸಾಮಾಜಿಕ ಕಳಕಳಿಯಿಂದ ಕೂಡಿದೆ

Advocates enable the voice of the voiceless to be heard. By championing for a cause and the truth, advocates act as a catalyst for change. Without advocacy the voices of multitudes would remain silenced. Advocacy is the noblest of professions where every counsel you give, every case you handle, every law you quote is in the service of real human beings. My heartiest greetings and best wishes for all those who have chosen to be Advocates. Happy Advocates Day.

ಸಮಸ್ತ ವಕೀಲರಿಗೂ ವಕೀಲರ ದಿನಾಚರಣೆಯ ಶುಭಾಶಯಗಳು. ಸದಾ ಸಮಾಜಮುಖಿಯಾಗಿ ಕೆಲಸಮಾಡಲು ನಮ್ಮನ್ನು ಪ್ರೇರೇಪಿಸುವ ಈ ಶ್ರೇಷ್ಟ ವೃತ್ತಿಯನ್ನು ಆಯ್ಕೆ ಮಾಡಿರುವ ಪ್ರತಿಯೊಬ್ಬರಿಗೂ ಮನಪೂರ್ವಕ ಅಭಿನಂದನೆಗಳು.

#AdvocatesDay #Kodagu #Madikeri #Virajpet #Ponnampet #Coorg #Thithimathi #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
 
 
img
 

Met Suttur Mutt Seer Sri Shivarathri Deshikendra Swamiji., 03/12/2022

Met Suttur Mutt Seer Sri Shivarathri Deshikendra Swamiji. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಭೇಟಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳನ್ನು ಬೆಳಗಾವಿಯ ವಿಮಾನ ನಿಲ್ದಾಣದ VIP ಲಾಂಜಿನಲ್ಲಿ ಎದುರಾದ ಸಂದರ್ಭ. ಸುತ್ತೂರು ಮಠದ ಪೂಜ್ಯರ ಹಿತನುಡಿ ಹಾಗೂ ಆಶೀರ್ವಾದ ಪಡೆದೆ. ಸುತ್ತೂರು ಮಠದ ಮೂಲಕ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ ಸಾವಿರಾರು ಜನರ ಬಾಳಿಗೆ ಬೆಳಕು ತಂದಿರುವ ಜಗದ್ಗುರು ಗಳನ್ನು ಅನಿರೀಕ್ಷಿತವಾಗಿ ಭೇಟಿ ಮಾಡಿದ್ದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ಈ ಸಂಧರ್ಭದಲ್ಲಿ ವಕೀಲ ಮಿತ್ರರಾದ ಮತ್ತು ವಕೀಲರ ಸಂಘ ಬೆಂಗಳೂರು, ಮಾಜಿ ಅಧ್ಯಕ್ಷರಾದ ಶ್ರೀ ಎ. ಪಿ.ರಂಗನಾಥ್ ಕೂಡ ಅದೇ ಲಾಂಜಿನಲ್ಲಿ ಉಪಸ್ಥಿತರಿದ್ದರು. #Kodagu #Madikeri #Virajpet #Ponnampet #Coorg #Thithimathi #Somwarpet #Murnad #MBadaga #Parane #Sutturu #ShivaratriDeshikendra #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
 
 
img
 

Hockey Tournament by M Badaga Sports and Cultural Club, 02/12/2022

Hockey Tournament by M Badaga Sports and Cultural Club. ಗ್ರಾಮಗಳ ನಡುವೆ ಹಾಕಿ ಪಂದ್ಯಾವಳಿ.
 
ಮೂರ್ನಾಡ್ ನಲ್ಲಿ ಎಂ.ಬಡಗ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ ನಡೆಸಿದ ಹಳ್ಳಿಗಳ ನಡುವಿನ ಹಿಂದೂ ಹಾಕಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಕ್ರೀಡಾಪಟುಗಳನ್ನು ಮಾತನಾಡಿಸಿ ಹುರಿದುಂಬಿಸುವ ಅವಕಾಶ ಓದಗಿಬಂತು.
 
ಗ್ರಾಮೀಣ ಮಟ್ಟದಿಂದಲೇ ಈ ರೀತಿಯ ಪಂದ್ಯಾವಳಿಗಳನ್ನು ಆಯೋಜಿಸುವುದರಿಂದ ಕ್ರೀಡೆಗಳಲ್ಲಿ ಕೊಡಗಿಗೆ ಇರುವ ವಿಶಿಷ್ಟ ಸ್ಥಾನಮಾನವನ್ನು ಕಾಪಾಡಿ ಬೆಳೆಸಲು ಸಾಧ್ಯ. ಪಂದ್ಯಾವಳಿಯನ್ನು ಬಹಳ ಶಿಸ್ತಿನಿಂದ ಆಯೋಜಿಸಿದ್ದ ಎಂ.ಬಡಗ ಕ್ಲಬ್'ನ ಪದಾಧಿಕಾರಿಗಳಿಗೂ, ಪಂದ್ಯಾವಳಿಯಲ್ಲಿ ಕ್ರೀಡಾಮನೋಭಾವದಿಂದ ಪಾಲ್ಗೊಂಡ ಎಲ್ಲಾ ತಂಡಗಳು ಮತ್ತು ಅದರ ಸದಸ್ಯರಿಗೂ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.
 
#Kodagu #Madikeri #Virajpet #Ponnampet #Coorg #Thithimathi #Somwarpet #Murnad #MBadaga #Parane #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
 
 
img
img
 

Thanks to Bar Association, Virajpet, 30/11/2022

Thanks to Bar Association, Virajpet. ವಿರಾಜಪೇಟೆಯ ವಕೀಲರ ಸಂಘಕ್ಕೆ ಧನ್ಯವಾದಗಳು
 
ವಿರಾಜಪೇಟೆಯ ಬಾರ್ ಅಸ್ಸೋಸಿಯೇಷನ್ ಅವರು ಹೊರತಂದಿರುವ 'ನಮ್ಮ ಸಾಧಕರು' (Our Achievers) ಹೊತ್ತಿಗೆಯಲ್ಲಿ ನನ್ನನು ಸೇರಿ ನಮ್ಮ ಕುಟುಂಬದ ಮೂವರ ಬಗ್ಗೆ ಲೇಖನಗಳನ್ನು ಸೇರಿಸಿ ಸನ್ಮಾನಿಸಿರುವ ವಕೀಲ ವೃಂದಕ್ಕೆ ನನ್ನ ಅನಂತಾನಂತ ಧನ್ಯವಾದಗಳು.
 
1932ರಲ್ಲೇ ವಿರಾಜಪೇಟೆಯಲ್ಲಿ ವಕೀಲಿ ವೃತ್ತಿ ಆರಂಭಿಸಿದ ನನ್ನ ಅಜ್ಜನವರು (ತಾಯಿಯ ತಂದೆ) ಶ್ರೀ ಸಿ.ಎಂ.ಭೀಮಯ್ಯ (ಚೀಯಕಪೂವಂಡ) ಅವರ ಸಾಧನೆ ಬಗ್ಗೆ ಈ ವಿಶಿಷ್ಟ ಪುಸ್ತಕ ಬೆಳಕು ಚೆಲ್ಲಿದೆ. ವಕೀಲರಾಗಿ, ನಾಲ್ಕು ಬಾರಿ ಎಂ.ಎಲ್.ಸಿಯಾಗಿ, ವಿರೋಧ ಪಕ್ಷದ ನಾಯಕರಾಗಿದ್ದ ನನ್ನ ತಂದೆ ಅಜ್ಜಿಕುಟ್ಟೀರ ಕಾರ್ಯಪ್ಪ ಸುಬ್ಬಯ್ಯ ಅವರ ಬಗ್ಗೆ ಆತ್ಮೀಯವಾದ ಲೇಖನ ಪ್ರಕಟಿಸಿದ್ದೀರಿ.
 
ಇನ್ನು ಅನೇಕ ಸಾಧಕರ ಜೊತೆ ನನ್ನ ಬಗ್ಗೆ ಲೇಖನ ಪ್ರಕಟಿಸಿ ನನ್ನ ವಕೀಲಿ ವೃತ್ತಿ ಜೀವನದ ಬಗ್ಗೆ ತಿಳಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ವಿರಾಜಪೇಟೆ, ಮತ್ತು ಕೊಡಗಿನ ಎಲ್ಲಾ ವೃತ್ತಿ ಭಾಂದವರಿಗೂ ನನ್ನ ಧನ್ಯವಾದಗಳು ಮತ್ತು ಶುಭ ಹಾರೈಕೆಗಳು.
 
#Kodagu #Madikeri #Virajpet #Ponnampet #Coorg #Thithimathi #Somwarpet #BarAssociation #Advocate #Lawyer #Parane #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
 
 
 

Unnecessary harassment over gun license exemption, 29/11/2022

Unnecessary harassment over gun license exemption. ಬಂದೂಕು ಪರವಾನಗಿ ಹೊಸ ವಿವಾದಕ್ಕೆ ನನ್ನ ಪ್ರತಿಕ್ರಿಯೆ
 
ಕೊಡಗಿನಲ್ಲಿ ಬಂದೂಕು ಪರವಾನಗಿ ವಿನಾಯಿತಿ ಇದ್ದರೂ ಬಂದುಕನ್ನು ಪೊಲೀಸ್ ಠಾಣೆಯಲ್ಲಿ ಇಡುವಂತೆ ನೋಟಿಸ್ ಜಾರಿ ಮಾಡಿರುವುದು ಅನಾವಶ್ಯಕ ವಿವಾದ ಮತ್ತು ಜನರಿಗೆ ಕಿರುಕುಳ ಕೊಡುವ ಕ್ರಮವಾಗಿದೆ. ಜನರನ್ನು ಪದೇ ಪದೇ ಕಾನೂನಿನ ಮೊರೆಹೋಗುವಂತೆ ಮಾಡುವುದರಲ್ಲಿ ಯಾವುದೇ ಮಾನವೀಯ ಉದ್ದೇಶವೂ ಇಲ್ಲ.
 
ಇಂತಹ ಕ್ರಮ ಜರುಗಿಸುವ ಮುನ್ನ ಸ್ಥಳೀಯ ಕಾನೂನು ನಿಯಮಗಳನ್ನು ಪರಿಶೀಲಿಸದೆ ಇರುವುದು ಅಚ್ಚರಿಯ ಸಂಗತಿ. ಆಡಳಿತಕ್ಕೆ ಜನರ ಬಗ್ಗೆ ಕಾಳಜಿ ಇರುವುದು ಅವಶ್ಯಕ. ವಿನಾಕಾರಣ ಇಲ್ಲದ ರಗಳೆ ಸೃಷ್ಟಿಸಿರುವುದು ಖೇದಕರ.
 
#Kodagu #Madikeri #Virajpet #Ponnampet #Coorg #Thithimathi #Somwarpet #GunLicense #Parane #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
 
 
img