Mr. India Universe 2025 award winner congratulates Karineravanda Bishan Madappa of Palangala village Virajpet Taluk and wish him all the best in future, 29/10/2025

ಮಿಸ್ಟರ್ ಇಂಡಿಯಾ ಯೂನಿವರ್ಸ್ 2025ರ ಪ್ರಶಸ್ತಿ ವಿಜೇತರಾದ ವಿರಾಜಪೇಟೆ ತಾಲೂಕು ಪಾಲಂಗಾಲ ಗ್ರಾಮದ ಕರಿನೇರವಂಡ ಬಿಷನ್ ಮಾದಪ್ಪ ರವರಿಗೆ ಅಭಿನಂದಿಸಿ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಶುಭ ಹಾರೈಸಿದೆ.


Received public reports at Ponnampete Taluk MLA's office today and given immediate compensation to many reports on the spot and rest of the applications were assured to be resolved soon, 28/10/2025

ಇಂದು ಪೊನ್ನಂಪೇಟೆ ತಾಲ್ಲೂಕಿನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಅನೇಕ ಅಹವಾಲುಗಳಿಗೆ ತಕ್ಷಣದ ಪರಿಹಾರ ನೀಡಲಾಯಿತು ಹಾಗೂ ಉಳಿದ ಅರ್ಜಿಗಳನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಲಾಯಿತು.


Participated in the second meeting of the review committee regarding Karnataka Land Revenue (Second Amendment) Obedience-2025 held at Vidhana Soudha under the chairmanship of Revenue Minister Shri Krishna Bhairegowda, presented explanations and opinions r, 27/10/2025

ಕಂದಾಯ ಸಚಿವ ಶ್ರೀ ಕೃಷ್ಣ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ–2025 ಕುರಿತು,ಕೊಡಗು ಜಿಲ್ಲೆಗೆ ಸಂಬಂಧಿಸಿದ ಪರಿಶೀಲನಾ ಸಮಿತಿಯ ಎರಡನೇ ಸಭೆಯಲ್ಲಿ ಭಾಗವಹಿಸಿ ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ವಿವರಣೆ ಹಾಗೂ ಅಭಿಪ್ರಾಯಗಳನ್ನು ಮಂಡಿಸಲಾಯಿತು.


Ponnampete Bar Association lawyers met, appealed to set up an e-library. Request was accepted and responded in compliment, 27/10/2025

ಪೊನ್ನಂಪೇಟೆ ಬಾರ್ ಅಸೋಸಿಯೇಶನ್ ವಕೀಲರು ಭೇಟಿ ಮಾಡಿ, ಇ -ಲೈಬ್ರರಿ ಸ್ಥಾಪಿಸಲು ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿ ಪೂರಕವಾಗಿ ಸ್ಪಂದಿಸಲಾಯಿತು..
 

Hindu Malayali association participated in the 7th year football tournament organized on the occasion of Onam celebration at Ammathi alone shop area of Virajpet taluk, 27/10/2025

ವಿರಾಜಪೇಟೆ ತಾಲೂಕು ಅಮ್ಮತ್ತಿ ಒಂಟಿ ಅಂಗಡಿ ಭಾಗದಲ್ಲಿ ಹಿಂದೂ ಮಲಯಾಳಿ ಸಂಘದವರು, ಓಣಂ ಆಚರಣೆ ಪ್ರಯುಕ್ತ ಆಯೋಜಿಸಿದ 7ನೇ ವರ್ಷದ ಫುಟ್ಬಾಲ್ ಪಂದ್ಯಾವಳಿಯ ಭಾಗವಹಿಸಿ ಶುಭ ಕೋರಲಾಯಿತು.