Recently, I visited Mr. Vignesh Bhat, an injured person in the Moornadu attack case, and his mother at the Madikeri District Hospital and inquired about their health, which filled me with courage, 30/01/2025
ಇತ್ತೀಚೆಗೆ ಮೂರ್ನಾಡು ಹಲ್ಲೆ ಪ್ರಕರಣದ ಗಾಯಾಳು ಶ್ರೀ ವಿಘ್ನೇಶ್ ಭಟ್ ಹಾಗೂ ಅವರ ತಾಯಿಯವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಆಗಿ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದೆ.

On the occasion of participating in an important meeting of the State Wildlife Board held under the chairmanship of the Honorable Chief Minister Shri Siddaramaiah, 29/01/2025
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಮಹತ್ವದ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.

Tributes to Field Marshal K.M. Cariappa, the proud son of Kodagu, who was the first commander-in-chief of the Indian Army and the first to be awarded the rank of Field Marshal, 28/01/2025
ಭಾರತ ಸೇನೆಯ ಪ್ರಥಮ ದಂಡನಾಯಕರಾಗಿ, ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲಿಗರು, ಎರಡನೇ ಮಹಾಯುದ್ಧ, 1947ರ ಪಾಕಿಸ್ಥಾನದ ವಿರುದ್ಧದ ಯುದ್ಧದಲ್ಲಿ ಅದ್ವಿತೀಯ ಶೌರ್ಯ ಪ್ರದರ್ಶಿಸಿದ ಕೊಡಗಿನ ಹೆಮ್ಮೆಯ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

At the unveiling of the bronze statue of Mother Bhuvaneshwari held in the Vidhana Soudha premises, an art exhibition was organized from different parts of the state, languages, cultures and ethnicities, 28/01/2025
ವಿಧಾನಸೌಧದ ಆವರಣದಲ್ಲಿ ನಡೆದ ತಾಯಿ ಭುವನೇಶ್ವರಿಯ ಕಂಚಿನ ಪುತ್ತಳಿ ಅನಾವರಣ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗ, ಭಾಷೆ, ಸಂಸ್ಕೃತಿ ಹಾಗೂ ಜನಾಂಗದ ಕಲಾ ಪ್ರದರ್ಶನ ಏರ್ಪಾಡು ಆಗಿತ್ತು. ಇಡೀ ಕಾರ್ಯಕ್ರಮದ ಆಕರ್ಷಣೆಯಾಗಿ ಕೊಡಗಿನ ಕೊಡವ ಮತ್ತು ಅರೆಭಾಷೆ ಸಮುದಾಯದವರು ಜೊತೆಯಾಗಿ ವೇದಿಕೆ ಮೇಲೆ ತಮ್ಮ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ್ದು ಆನಂದ ಹಾಗೂ ಮಾನಸಿಕ ತೃಪ್ತಿ ನೀಡಿತು.
ಸಮಾಜದಲ್ಲಿ ಕೆಲವು ಕಿಡಿಗೇಡಿಗಳು ಅನ್ಯೋನ್ಯತೆ ಕೆಡಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಭೀತಾಯಿತು. ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಮತ್ತು ಸಾಮರಸ್ಯ ನೆಲೆ ಮಾಡಲಿ. #ASPonnanna
ಸಮಾಜದಲ್ಲಿ ಕೆಲವು ಕಿಡಿಗೇಡಿಗಳು ಅನ್ಯೋನ್ಯತೆ ಕೆಡಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಭೀತಾಯಿತು. ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ಸೌಹಾರ್ದತೆ ಮತ್ತು ಸಾಮರಸ್ಯ ನೆಲೆ ಮಾಡಲಿ. #ASPonnanna

I accompanied the Honorable Chief Minister to inquire about the health of Dr. Shivaraj Kumar, a renowned actor of the Karnataka film industry, who returned to his homeland after receiving treatment abroad, and wished him a speedy recovery, 28/01/2025
ವಿದೇಶದಲ್ಲಿ ಚಿಕಿತ್ಸೆ ಪಡೆದ ಬಳಿಕ ತಾಯಿನಾಡಿಗೆ ಮರಳಿದ ಕರ್ನಾಟಕ ಚಲನಚಿತ್ರರಂಗದ ಪ್ರಖ್ಯಾತ ನಟರಾದ ಡಾ. ಶಿವರಾಜ್ ಕುಮಾರ್ ರವರ ಆರೋಗ್ಯವನ್ನು ವಿಚಾರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ತೆರಳಿ ಅವರು ಅತಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದೆ.
