Land Pooja Held for Road Development at Chepekolli, 14/09/2026
ಪೊನ್ನಂಪೇಟೆ ತಾಲೂಕು ಟಿ ಶೆಟ್ಟಿಗೇರಿ ಗ್ರಾಮದ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿ, ಚೀಪೆಕೊಲ್ಲಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

Ponnanna Attends Grand Ganeshotsava Celebrations in Ponnampete, 14/09/2026
ಪೊನ್ನಂಪೇಟೆ ತಾಲೂಕು ಟಿ ಶೆಟ್ಟಿಗೇರಿ, ಚೀಪೆಕೊಲ್ಲಿ, ಶ್ರೀಮಂಗಲ ಭಾಗಗಳಲ್ಲಿ ಅದ್ದೂರಿಯಿಂದ ಹಾಗೂ ಅತ್ಯಂತ ಭಕ್ತಿ ಭಾವದಿಂದ ಆಚರಿಸುತ್ತಿರುವ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ ನಾಡಿನ ಶಾಂತಿ ಸುಭಿಕ್ಷೆಗಾಗಿ ಬೇಡಿಕೊಳ್ಳಲಾಯಿತು.

New Bolero Vehicle Handed Over to Beneficiary in Virajpet, 14/09/2026
ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಫಲಾನುಭವಿಗಳಿಗೆ ನೀಡುವ ಹೊಸ ಬೊಲೆರೊ ವಾಹನದ ಕೀಯನ್ನು ವಿರಾಜಪೇಟೆ ತಾಲೂಕು ಕೆದಮುಳ್ಳೂರು ಭಾಗದ ಬಾರಿಕಾಡು ನಿವಾಸಿ ಗುರುರಾಜು ರವರಿಗೆ ಹಸ್ತಾಂತರಿಸಲಾಯಿತು.

Bhoomi Pooja Held for Development Works in Virajpet Hobli, 14/09/2026
ವಿರಾಜಪೇಟೆ ತಾಲೂಕು ಅಮ್ಮತಿ ಹೋಬಳಿಯ ಅಮ್ಮತ್ತಿ ಹೋಬಳಿಯ ಪುಲಿಯೇರಿ, ಇಂಜಲಗೆರೆ, ಕಲ್ಲುಕೋರೆ ಭಾಗಗಳಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರಕಾರದಿಂದ ನೀಡಿದ ಕೊಳವೆಭಾವಿ ಯೋಜನೆಯನ್ನು ಅನುಷ್ಠಾನಗೊಳಿಸಲು ಭೂಮಿ ಪೂಜೆ ನೆರವೇರಿಸಿದ ಸಂದರ್ಭ.

BJP Leader B.N. Prakash Joins Congress, 14/09/2026
ಪೊನ್ನಂಪೇಟೆ ಭಾಗದ ಬಿಜೆಪಿ ಮುಖಂಡ ಹಾಗು ಗೋಣಿಕೊಪ್ಪ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಬಿ.ಎನ್ ಪ್ರಕಾಶ್ ರವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಅವರನ್ನು ನನ್ನ ಗೃಹ ಕಚೇರಿಯಲ್ಲಿ ಪಕ್ಷದ ಬಾವುಟ ನೀಡಿ ಶಲ್ಯ ಹೊದಿಸುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡ ಸಂದರ್ಭ.
