My wife Mrs. Kanchan participated as the chief guest in the Kakkada Namme program held at Madikeri Kodava Samaja Pommakkada Koota and Madikeri Kodava Samaja. Kodava Samaja Pommakkada Kuttam symbol broch (decorative jewellery used to strip saree) jewellery, 04/08/2025
ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಮಡಿಕೇರಿ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ನಡೆದ, ಕಕ್ಕಡ ನಮ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ರವರು ಭಾಗವಹಿಸಿದರು. ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಚಿಹ್ನೆ ಇರುವ ಬ್ರೋಚ್ (ಸೀರೆ ಸಿಕ್ಕಿಸಲು ಬಳಸುವ ಅಲಂಕಾರಿಕ ಆಭರಣ) ಆಭರಣವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ನನ್ನ ಶ್ರೀಮತಿ ರವರು , ನಮ್ಮ ಪೂರ್ವಿಕರು ನಮಗೆ ಬದುಕಿನ ಶಿಸ್ತಿನ ಜೊತೆಗೆ ಆಹಾರ ಪದ್ದತಿಯಲ್ಲಿಯೂ ಕೂಡ ಶಿಸ್ತನ್ನು ಬಳುವಳಿಯಾಗಿ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನ ಪರಿಸರ ಹಾಗೂ ಹವಾಗುಣಕ್ಕನ್ನುಸಾರವಾಗಿ, ಕಾಲಕಾಲಕ್ಕೆ ವಿವಿಧ ಬಗೆಯ ಆಹಾರ ಬಳಕೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ತಿಳಿದುಕೊಂಡಿದ್ದರು ಎಂದರೆ, ಅವರ ಜಾಣ್ಮೆ ಹಾಗೂ ವೈಜ್ಞಾನಿಕ ಚಿಂತನೆಯನ್ನು ನಾವು ಮೆಚ್ಚಲೇ ಬೇಕು. ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ವೈವಿಧ್ಯಮಯ ಆಹಾರ ಬಳಕೆ ಮಾಡುತ್ತಿದ್ದು, ಇವುಗಳನ್ನು ಕಕ್ಕಡ ನಮ್ಮೆಯಲ್ಲಿ ಪ್ರದರ್ಶನಮಾಡಿ ನಮ್ಮ ಪರಂಪರೆಯನ್ನು ಮುಂದಿನ ಪೀಳಗೆಗೆ ಶಾಶ್ವತವಾಗಿ ಉಳಿಸಲು ಪೊಮ್ಮಕ್ಕಡ ಕೂಟದ ಪ್ರಯತ್ನ ಶ್ಲಾಘನೀಯ ಹಾಗೂ ಅತ್ಯಂತ ಸಮಯೋಚಿತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
