Kodava Premier League is a commendable attempt. ಕೊಡವ ಪ್ರೀಮಿಯರ್ ಲೀಗ್ ಪಂದ್ಯಾವಳಿ
ನಾನಾ ರೀತಿಯ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನ ಕ್ರೀಡಾಪಟುಗಳು ಗುರುತಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಕ್ರೀಡೆ ನಮ್ಮ ಸಂಸ್ಕೃತಿ, ಆಚರಣೆ, ಆಚಾರ ವಿಚಾರಗಳಲ್ಲಿ ಬೆರೆತಿರುವುದು.
ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಐ.ಪಿ.ಎಲ್ ಮಾದರಿಯಲ್ಲಿ ನಡೆಸುತ್ತಿರುವುದು ಗಮನಾರ್ಹ ಮತ್ತು ಹೆಮ್ಮೆಯ ವಿಚಾರ. ಬದಲಾಗುತ್ತಿರುವ ಕ್ರೀಡೆಯ ಸ್ವರೂಪವನ್ನು ಮನಗೊಂಡು ಸ್ಪರ್ದಿಗಳಿಗೆ ಬೇಕಾದ ರೀತಿಯಲ್ಲಿ ಪಂದ್ಯಾವಳಿಯನ್ನು ನಡೆಸುವುದರಿಂದ ನಮ್ಮ ಕ್ರೀಡಾಪಟುಗಳ ಪ್ರತಿಭೆ ಇನ್ನಷ್ಟು ಬೆಳಗಲು ಸಹಾಯಕವಾಗಲಿದೆ.
ಪಂದ್ಯಾವಳಿಯನ್ನು ಬಹಳ ಯಶಸ್ವಿಯಾಗಿ ಸಂಘಟಿಸಿದ ಆಯೋಜಕರಿಗೂ, ಕ್ರೀಡಾ ಮನೋಭಾವದಿಂದ ಪಾಲ್ಗೊಂಡ ಎಲ್ಲಾ ಸ್ಪರ್ದಿಗಳಿಗೂ, ಪ್ರೋತ್ಸಾಹಿಸಿದ ಎಲ್ಲರಿಗೂ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಕೊಡಗಿನ ಹೆಮ್ಮೆಯ ಪ್ರತೀಕವಾಗಿ ಈ ಲೀಗ್ ಬೆಳೆಯಲಿ ಎಂದು ಹಾರೈಸುತ್ತೇನೆ.
#Kodagu #Madikeri #Virajpet #Ponnampet #Coorg #Thithimathi #Somwarpet #KodavaPremierLeague #Parane #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
Forests are part of Kodagu's culture. ಕಾಡುಗಳು ನಮ್ಮ ಜೀವನದ ಅವಿಭಾಜ್ಯ ಭಾಗ
ಇಲಾಖೆಗಳು, ಅರಣ್ಯದ ಕಾನೂನುಗಳು ಬರುವುದಕ್ಕೂ ಮೊದಲೇ ಕೊಡಗಿನ ಜನ ಸಾವಿರಾರು ವರ್ಷಗಳಿಂದ ಕಾಡುಗಳನ್ನು ರಕ್ಷಿಸುತ್ತ, ಪೂಜಿಸುತ್ತ ಬಂದಿದ್ದೇವೆ. ಅರಣ್ಯ ಇಲಾಖೆಯ ಕರ್ತವ್ಯ ನಿರ್ವಹಣೆ ಜನರ ಹಿತವನ್ನೂ ಒಳಗೊಂಡಿದೆ. ಇಬ್ಬರೂ ಜೊತೆಯಾಗಿ ಹೆಜ್ಜೆಯಿಟ್ಟರೆ ಮಾತ್ರ ಪರಿಹಾರ ಸಾಧ್ಯ.
ಅರಣ್ಯ ಭವನ ಚಲೋ ನಡಿಗೆಯಲ್ಲಿ ಪಾಲ್ಗೊಂಡು ಕೊಡಗಿನ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗೆ ಅರಣ್ಯಇಲಾಖೆಯಿಂದ ಸಮರ್ಪಕ ಪರಿಹಾರಕ್ಕೆ ಹಕ್ಕೊತ್ತಾಯ ಮಾಡಿದೆ. ಕೊಡಗಿನ ಜನರ ಜೀವನದಲ್ಲೇ ಕಾಡು ಬೆರೆತುಹೋಗಿದೆ.
ಕಾಡುಪ್ರಾಣಿಗಳಿಂದ ಜನರನ್ನು, ಜನರ ಬೆಳೆಗಳನ್ನು ರಕ್ಷಿಸುವುದು ಈಗಿನ ತುರ್ತು ಅವಶ್ಯಕತೆ. ಇದಕ್ಕೆ ಕಾನೂನಿನ ನೆರವು ಅಥವಾ ಹೋರಾಟಕ್ಕೆ ನಾನು ಸದಾ ಸಿದ್ದ. ಸಂತಸ್ತ್ರರಿಗೆ ಪರಿಹಾರ ಹಾಗೂ ನೆರವು ಕೂಡ ಇಲಾಖೆಯಿಂದ ಸಮರ್ಪಕವಾಗಿ ದೊರಕಬೇಕಿದೆ. ಕನೂನಿನಲ್ಲೇ ಇದಕ್ಕೆ ಅವಕಾಶವಿದ್ದು ಈ ಎಲ್ಲಾ ರೀತಿಯ ಹಕ್ಕುಗಳ ಹೋರಾಟಕ್ಕೆ ನನ್ನ ಬೆಂಬಲವಿದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Wildlife #Forests #Parane #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
Cricket tournament in Ponnampet. ಪೊನ್ನಂಪೇಟೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಪೊನ್ನಂಪೇಟೆಯಲ್ಲಿ ಟೆನ್ ಸ್ಟಾರ್ ಕ್ರಿಕೆಟರ್ಸ್ ಅವರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದೆ. ನಮ್ಮ ಕೊಡಗಿನಲ್ಲಿ ನಮ್ಮ ಜೀವನದ ಮತ್ತು ಸಂಸ್ಕೃತಿಯ ಭಾಗವೇ ಆಗಿರುವ ಕ್ರೀಡೆಯನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಕ್ರೀಡಾ ಮನೋಭಾವ ಬೆಳೆಸಿಕೊಂಡ ವ್ಯಕ್ತಿ ತನ್ನ ಜೀವನದ ಯಾವುದೇ ಕಷ್ಟವನ್ನೂ ಎದುರಿಸಲು ಶಕ್ತನಾಗಿರುತ್ತಾನೆ. ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಶಯಗಳು. ಹೊಸದೊಂದು ಪಂದ್ಯಾವಳಿಯನ್ನು ಸಂಘಟಿಸಿರುವ ಟೆನ್ ಸ್ಟಾರ್ ಕ್ರಿಕೆಟರ್ಸ್ ಆಯೋಜಕರಿಗೂ ಅಭಿನಂದನೆಗಳು. ಮುಂದಿನ ವರ್ಷಗಳಲ್ಲಿ ಇನ್ನು ದೊಡ್ಡದಾಗಿ ಪಂದ್ಯಾವಳಿಗಳು ಬೆಳೆಯಲಿ ಎಂದು ಹಾರೈಸುತ್ತೇನೆ. #Kodagu #Madikeri #Virajpet #Ponnampet #Coorg #Thithimathi #Somwarpet #Skiing #Molkebeedu #Parane #Cricket #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
Aid for Skiing talent. ಅಂತಾರಾಷ್ಟ್ರೀಯ ಸ್ಕೀಯಿಂಗ್ ಪಟುವಿಗೆ ನೆರವು
ಅಂತಾರಾಷ್ಟ್ರೀಯ ಸ್ಕೀಯಿಂಗ್ ಸ್ಪರ್ಧೆಗೆ ಆಯ್ಕೆಯಾಗಿರುವ ಕೊಡಗಿನ ಪ್ರತಿಭೆ ತೆಕ್ಕಡ ಭವಾನಿ ಯುರೋಪ್ ನಲ್ಲಿ ತರಬೇತಿ ಪಡೆಯಲು ನೆರವು ಒದಗಿಸಲಾಗಿದೆ. ಭವಾನಿ ರಷ್ಯಾದ ಅತಿ ಎತ್ತರದ ಮೌಂಟ್ ಎಲ್ ಬ್ರಸ್ ನಲ್ಲಿ ಭಾರತ ಧ್ವಜ ನೆಟ್ಟು ಕೊಡಗಿಗೆ ಕೀರ್ತಿಯನ್ನು ತಂದಿರುವಳು.
ಯುರೋಪಿನಲ್ಲಿ ನಡೆಯುವ ತರಬೇತಿಗೆ ಭವಾನಿ ಅವರು ಸದ್ಯದಲ್ಲಿಯೇ ತೆರಳಲಿದ್ದು ಅವರು ಕೊಡಗಿಗೆ ಮತ್ತು ನಮ್ಮ ದೇಶಕ್ಕೆ ಇನ್ನಷ್ಟು ಕೀರ್ತಿ ತರಲಿ ಎಂದು ಹಾರೈಸಿದೆ. ಸ್ಕೀಯಿಂಗ್ ನಮ್ಮಲ್ಲಿ ಪಾರಂಪರಿಕ ಕ್ರೀಡೆಯಲ್ಲ. ಆದ್ದರಿಂದ ಅದರಲ್ಲಿ ಸಾಧನೆ ಮಾಡುವುದು ಬೇರೆ ಕ್ರೀಡೆಗಳಿಗಿಂತ ಕಷ್ಟದ ವಿಷಯ. ಆದ್ದರಿಂದ ಭಾವನಿಯವರ ಸಾಧನೆಗೆ ಮಹತ್ವ ಇದೆ.
ಭವಾನಿ ಅವರ ಪೋಷಕರಾದ ನಾಪೋಕ್ಲುವಿನ ತೆಕ್ಕಡ ನಂಜುಂಡ (ಶಂಭು)-ಪಾರ್ವತಿ (ದಿವ್ಯ)ಅವರಿಗೆ ನೆರವು ಹಸ್ತಾಂತರ ಮಾಡಲಾಯಿತು.
#Kodagu #Madikeri #Virajpet #Ponnampet #Coorg #Thithimathi #Somwarpet #Skiing #Molkebeedu #Parane #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
Rs.3 Lakh for Backward Classes Community Centre. ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ ರೂ.3 ಲಕ್ಷ ಪೊನ್ನಂಪೇಟೆ ತಾಲ್ಲೂಕಿನ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ ಸಹಾಯಹಸ್ತವಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ನಾಗರಾಜು ಯಾದವ್ ಅವರ ಶಾಸಕರ ನಿಧಿಯಿಂದ ರೂ.3 ಲಕ್ಷ ಅನುದಾನಕ್ಕೆ ಕೋರಿಕೆ ಸಲ್ಲಿಸಿದ್ದೆ. ಮಾನ್ಯ ಶಾಸಕರು ನನ್ನ ಕೋರಿಕೆಗೆ ಸ್ಪಂದಿಸಿ, ರೂ.3 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ವಿರಾಜಪೇಟೆ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ಈ ಅನುದಾನದ ಚೆಕ್ ಅನ್ನು ಸಮುದಾಯದ ಮುಖಂಡರಿಗೆ ಹಸ್ತಾಂತರ ಮಾಡಿ ಅವರ ಕಾರ್ಯಕ್ಕೆ ಶುಭಕೋರಿದೆ. ಕೊಡಗಿನ ಹಿಂದುಳಿದ ವರ್ಗಗಳ ಅಭಿವೃದ್ದಿ ಕೆಲಸಕ್ಕೆ ಕೈಜೋಡಿಸಿದ ಶಾಸಕರಿಗೆ ನನ್ನ ಧನ್ಯವಾದಗಳು. ಆದಷ್ಟು ಬೇಗ ಭವನದ ಕೆಲಸ ಪೂರ್ಣಗೊಂಡು ಅಲ್ಲಿ ಸಮುದಾಯದ ಚಟುವಟಿಕೆಗಳು ಕಾರ್ಯಾರಂಭ ಮಾಡಲಿ ಎಂದು ಹಾರೈಸುತ್ತೇನೆ. #Kodagu #Madikeri #Virajpet #Ponnampet #Coorg #Thithimathi #Somwarpet #Molkebeedu #Parane #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura