Kodagu loves sports, in rain or shine or mud, 24/07/2022
ಕಗ್ಗೋಡ್ಲುವಿನಲ್ಲಿ ಜಿಲ್ಲಾ ಆಡಳಿತ, ಕೊಡಗು ಜಿಲ್ಲಾ ಯುವ ಒಕ್ಕೂಟ, ಕೊಡಗಿನ ಯುವಕರ ಸಂಘ ಸೇರಿ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ.
ಕಳೆದ ಮೂವತ್ತು ವರ್ಷಗಳಿಂದಲೂ ಈ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿರುವುದು ಆಯೋಜಕರ ಕ್ರೀಡಾಪ್ರೇಮ ಮತ್ತು ಬದ್ಧತೆಯನ್ನು ತೋರಿಸುತ್ತದೆ. ಈ ರೀತಿಯ ಬದ್ಧತೆಯೇ ಕೊಡಗಿನಿಂದ ಸಾಕಷ್ಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಹೊರಹೊಮ್ಮಲು ಸಾಧ್ಯವಾಗಿರುವುದು.
ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದ ಆಯೋಜಕರಿಗೆ ಅಭಿನಂದನೆ ಸಲ್ಲಿಸಿ, ಕ್ರೀಡಾಪಟುಗಳಿಗೆ ಶುಭ ಕೋರುತ್ತಾ ಮುಂದಿನ ವರ್ಷಗಳಲ್ಲಿ ಇನ್ನು ಹೆಚ್ಚಿನ ಮಹತ್ವ ಈ ಕ್ರೀಡಾಕೂಟಕ್ಕೆ ಬರಲಿ ಎಂದು ಹಾರೈಸಿದೆ. ಮುಂದಿನ ದಿನಗಳಲ್ಲೂ ಕ್ರೀಡಾಕೂಟಕ್ಕೆ ಬೆಂಬಲವಾಗಿ ನಿಲ್ಲುವ ಭರವಸೆ ಕೊಟ್ಟಿದ್ದೇನೆ. ನಮ್ಮ ಪಕ್ಷದ ಯುವ ಮುಖಂಡರಾದ ಮಂಥರ್ ಗೌಡ ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje #Sports
DCC Kodagu protest in support of democracy, 23/07/2022
ನಮ್ಮ ಪಕ್ಷವನ್ನು ದುರ್ಬಲ ಮಾಡುವ ಏಕೈಕ ಉದ್ದೇಶದಿಂದ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರ ಮೇಲೆ ಜಾರಿ ನಿರ್ದೇಶನಾಲಯವನ್ನು ಬಳಸಿ ಕಿರುಕುಳ ಕೊಡಲಾಗುತ್ತಿದೆ.
ಆಡಳಿತ ಪಕ್ಷದ ಈ ಹುನ್ನಾರವನ್ನು ಮಣಿಸಲು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘಟಿತವಾಗಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ನಾವು ಆಡಳಿತ ಪಕ್ಷದ ಷಡ್ಯಂತ್ರ ಮತ್ತು ಬೆದರಿಕೆ ತಂತ್ರಗಳಿಗೆ ಅವಕಾಶ ಕೊಡುವುದಿಲ್ಲ.
ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕವಾಗಿ ಕೆಲಸಗಳು ನಡೆಯಬೇಕು. ಷಡ್ಯಂತ್ರಗಳು ಬಹಳ ದಿನ ನಡೆಯುವುದಿಲ್ಲ. ಈ ಹೋರಾಟದಲ್ಲಿ ನಮ್ಮ ಪಕ್ಷ ಮತ್ತಷ್ಟು ಬಲಶಾಲಿಯಾಗಿ ಹೊರಹೊಮ್ಮಲಿದೆ.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje
Best wishes to Indian contingent to CWG 2022, 22/07/2022
ಮುಂಬರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿರುವ ಕೊಡಗಿನ ಕ್ರೀಡಾಪಟುಗಳಾದ ಜೋಶ್ನಾ ಚಿನ್ನಪ್ಪ, ಅಶ್ವಿನಿ ಪೊನ್ನಪ್ಪ ಮತ್ತು ಎ.ಬಿ.ಬೆಳ್ಳಿಯಪ್ಪ ಅವರುಗಳಿಗೆ ಅಭಿನಂದನೆಗಳು.
ಈಗಾಗಲೇ ಕ್ರೀಡಾಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಇವರುಗಳು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲೂ ಉತ್ತಮ ಪ್ರದರ್ಶನ ನೀಡಿ ಇನ್ನಷ್ಟು ಯುವಕರಿಗೆ ಮಾದರಿಯಾಗಲಿ ಎಂದು ಹಾರೈಸುತ್ತೇನೆ.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಎಲ್ಲಾ ಕ್ರೀಡಾಪಟುಗಳಿಗೂ ಶುಭಾಶಯಗಳು.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje #Sports #CWG2022
HC notice on delay in Virajpet town Panchayat election, 20/07/2022
ವಿರಾಜಪೇಟೆ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಚುನಾವಣೆಯನ್ನು ವಿನಾಕಾರಣ ಮುಂದೂಡುತ್ತಾ ಬಂದಿರುವ ಸಿ.ಎಂ.ಸಿ ಕಮಿಷನರ್ ಅವರ ಕ್ರಮವನ್ನು ಪ್ರಶ್ನಿಸಿ ಪಂಚಾಯಿತಿ ಸದಸ್ಯರಾದ ರಂಜಿತ್ ಪೂಣಚ್ಚ ಮತ್ತು ಇತರರು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ ಅರ್ಜಿ ಮಂಗಳವಾರ ವಿಚಾರಣೆಗೆ ಬಂದಿತ್ತು.
ಪ್ರತಿವಾದಿಗಳಾದ ವಿರಾಜಪೇಟೆ ಪಟ್ಟಣ ಪಂಚಾಯಿತಿ ಕಮಿಷನರ್, ಕೊಡಗು ಜಿಲ್ಲೆ ಜಿಲ್ಲಾಧಿಕಾರಿಗಳು ಮತ್ತು ಇತರರಿಗೆ ಉಚ್ಚ ನ್ಯಾಯಾಲಯ ತುರ್ತು ನೋಟಿಸನ್ನು ಜಾರಿಮಾಡಿದೆ.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje
Ajjikuttira family gathering in Bengaluru, 18/07/2022
ಅಜ್ಜಿಕುಟ್ಟೀರ ಕುಟುಂಬದ ಬೆಂಗಳೂರು ಭಾಗದವರು ತಮ್ಮ ವಾರ್ಷಿಕ ಉತ್ಸವವನ್ನು ಆಚರಣೆ ಮಾಡಿದರು. ಕುಟುಂಬದ ಎಲ್ಲಾ ಹಿರಿಯ ಸದಸ್ಯರು, ಅಧ್ಯಕ್ಷರು, ಮಕ್ಕಳು, ಎಲ್ಲರೂ ಸೇರಿ ಭಾರಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನಡೆಸಿದರು.
ನನ್ನ ಒಂದು ಕಿರು ಪರಿಚಯವನ್ನು ಎಲ್ಲರಿಗೂ ಮಾಡಿದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ, ಕುಟುಂಬದ ಹಿರಿಯರಿಗೆ ಮತ್ತು ಕಾರ್ಯಕ್ರಮದಲ್ಲಿ ಸೇರಿ ಭಾಗವಹಿಸಿದಂತ ಎಲ್ಲಾ ನನ್ನ ಬಂಧು-ಬಳಗದವರಿಗೆ ನನ್ನ ವಂದನೆಗಳು.
ಬಹಿರಂಗವಾಗಿ ನೀವು ನನಗೆ ಸೂಚಿಸಿದ ಬೆಂಬಲಕ್ಕೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ಈ ಪ್ರೀತಿ ವಿಶ್ವಾಸ, ಸಹಕಾರ, ನೆರವು, ಆಶೀರ್ವಾದ ಸದಾಕಾಲ ಇದೇ ರೀತಿ ಇರಲಿ ಎಂದು ಕೂಡ ಆಶಿಸುತ್ತೇನೆ.
ಕುಟುಂಬದ ಅಧ್ಯಕ್ಷರಾದ ಶ್ರೀ ಅಜ್ಜಿಕುಟ್ಟೀರ ಕೇಶು, ಕಾರ್ಯಾಧ್ಯಕ್ಷರಾದ ಡಾ.ಗಣಪತಿ, ಕಾರ್ಯದರ್ಶಿಗಳಾದ ಶ್ರೀ ಸುನಿಲ್ ಸುಬ್ಬಯ್ಯ, ಖಜಾಂಜಿಗಳಾದ ಶ್ರೀ ಎ. ಪಿ.ಕಾರಿಯಪ್ಪ, ಸಮಿತಿಯ ಸದಸ್ಯರುಗಳಾದ ಶ್ರೀ ಸುಧೀರ್, ಶ್ರೀ ಮಧು, ಶೀ ದಿಲನ್, ಶ್ರೀ ರೋಹನ್ ಮತ್ತು ಶ್ರೀಮತಿ ಸಂಧ್ಯಾ ಹಾಗೂ ಕುಟುಂಬದ ಎಲ್ಲಾ ಹಿರಿಯರು ಹಾಗೂ ಸದಸ್ಯರಿಗೆ ನಾನು ಆಭಾರಿ.
#Ajjikuttira #Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje