BJP Leader B.N. Prakash Joins Congress, 14/09/2026

ಪೊನ್ನಂಪೇಟೆ ಭಾಗದ ಬಿಜೆಪಿ ಮುಖಂಡ ಹಾಗು ಗೋಣಿಕೊಪ್ಪ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಬಿ.ಎನ್ ಪ್ರಕಾಶ್ ರವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಅವರನ್ನು ನನ್ನ ಗೃಹ ಕಚೇರಿಯಲ್ಲಿ ಪಕ್ಷದ ಬಾವುಟ ನೀಡಿ ಶಲ್ಯ ಹೊದಿಸುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡ ಸಂದರ್ಭ.

 


Special Pooja at Sri Siddhi Vinayaka Temple, 14/09/2026

ವಿರಾಜಪೇಟೆ ತಾಲೂಕು ಚೆನ್ನಯ್ಯನ ಕೋಟೆಯ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ಗಣೇಶ ಉತ್ಸವದ ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ ಸಂದರ್ಭ.


Ganesha Chaturthi to all the people of the state, 14/09/2026

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು

 


Ponnanna Inaugurates Concrete Road to Jammada Ain House in Kaikeri, 13/09/2026

ಪೊನ್ನಂಪೇಟೆ ತಾಲೂಕು ಕೈಕೇರಿಯಲ್ಲಿರುವ ಜಮ್ಮಡ ಐನ್ ಮನೆಗೆ ತೆರಳಲು ನಿರ್ಮಾಣಗೊಂಡ ನೂತನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟನೆ ನೆರವೇರಿಸಿದ ಸಂದರ್ಭ.
ಬಳಿಕ ಶುಭ ಕೋರಿ ಮಾತನಾಡುತ್ತಾ, ಕೊಡಗಿನಲ್ಲಿ ಐನ್ ಮನೆ ಸಂಸ್ಕೃತಿಯು, ನಮ್ಮೆಲ್ಲರ ಭಾವನೆಗಳೊಂದಿಗೆ ಹೊಂದಿಕೊಂಡಿದೆ. ಪುರಾತನವಾದ ಈ ಸಂಸ್ಕೃತಿಯನ್ನು ಉಳಿಸಲು ಐನ್ ಮನೆಗೆ ಪ್ರತಿಯೊಬ್ಬರೂ ಬಂದು, ನಮ್ಮ ಪದ್ಧತಿ, ಸಂಪ್ರದಾಯಗಳನ್ನು,ಆಚರಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಕೊಡುವಂತಾಗಬೇಕೆಂದು ತಿಳಿಸಿದೆ.
 

Ponnampet Women Congress Leaders Take Charge, 13/09/2026

 

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಮಹಿಳಾ ಕಾಂಗ್ರೆಸ್ ಘಟಕದ ವಲಯ ಅಧ್ಯಕ್ಷರುಗಳಿಗೆ ಹಾಗೂ ಪದಾಧಿಕಾರಿಗಳಿಗೆ, ಅಧಿಕಾರ ಪತ್ರ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿ, ಪಕ್ಷದ ಬೆಳವಣಿಗೆಗೆ ಮಹಿಳಾ ಪದಾಧಿಕಾರಿಗಳ ಕೊಡುಗೆಯ ಮಹತ್ವದ ಬಗ್ಗೆ ತಿಳಿಸಿ ಶುಭ ಕೋರಿದ ಸಂದರ್ಭ.