Virajpet Government College Development Committee meeting was conducted and checked reports about the progress in the college, 11/10/2025

ವಿರಾಜಪೇಟೆ ಸರಕಾರಿ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ನಡೆಸಿ ಕಾಲೇಜಿನಲ್ಲಿ ನಡೆಯುತ್ತಿರುವ ಪ್ರಗತಿಯ ಬಗ್ಗೆ ವರದಿಗಳನ್ನು ಪರಿಶೀಲಿಸಲಾಯಿತು.


Visit Birunani village of Ponnampete taluk Inaugurated the new 11 KVHT electric route works and inaugurated several new electric conversions, 11/10/2025

ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮಕ್ಕೆ ಭೇಟಿ ನೀಡಿ
ನೂತನ 11 ಕೆವಿ ಹೆಚ್ ಟಿ ವಿದ್ಯುತ್ ಮಾರ್ಗ ಕಾಮಗಾರಿಗೆ ಚಾಲನೆ ನೀಡಿ ಹಲವು ನೂತನ ವಿದ್ಯುತ್ ಪರಿವರ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
 

Visited the famous Mrityunjaya temple of Badagarkeri village of Ponnampete taluk with my wife Mrs. Kanchan Ponnanna and offered special pooja., 10/10/2025

ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿ ಗ್ರಾಮದ ಪ್ರಸಿದ್ಧ ಮೃತ್ಯುಂಜಯ ದೇವಸ್ಥಾನಕ್ಕೆ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ.


As part of the government nutrition program, participated in the program organized by the women and children welfare department at Hudikeri Kodava society with my wife Kanchan Ponnanna and congratulated me, 10/10/2025

ಸರ್ಕಾರದ ಪೋಷಣ್ ಕಾರ್ಯಕ್ರಮದ ಭಾಗವಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಅಂಗವಾಗಿ ಹುದಿಕೇರಿಯ ಕೊಡವ ಸಮಾಜದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ನನ್ನ ಧರ್ಮ ಪತ್ನಿ ಕಾಂಚನ್ ಪೊನ್ನಣ್ಣ ಅವರ ಜೊತೆ ಪಾಲ್ಗೊಂಡು ಶುಭ ಕೋರಿದೆ.


A student died in a fire accident today at a non-government service organization called Katakeri Har Mandir, Madikeri taluk, met two students who were injured and consoled them. Visited the house of a deceased student in Chettimani and consoled the family, 09/10/2025

ಮಡಿಕೇರಿ ತಾಲೂಕು ಕಾಟಕೇರಿಯ ಹರ್ ಮಂದಿರ್ ಎಂಬ ಸರಕಾರೇತರ ಸೇವಾ ಸಂಸ್ಥೆಯಲ್ಲಿ ಇಂದು ಬೆಂಕಿ ಅವಘಡದಲ್ಲಿ ಓರ್ವ ವಿದ್ಯಾರ್ಥಿ ಮೃತ ಪಟ್ಟಿದ್ದು ,ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ವಿದ್ಯಾರ್ಥಿಗಳಿಗೆ ಭೇಟಿ ಮಾಡಿ ಸಾಂತ್ವನ ಹೇಳಿದೆ.
ಚೆಟ್ಟಿಮಾನಿಯಲ್ಲಿರುವ ಮೃತ ಪಟ್ಟ ವಿದ್ಯಾರ್ಥಿಯ‌ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಇನ್ನು ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿದೆ. ಬಳಿಕ ಬೆಂಕಿ ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.