Bengaluru Police Recover Hockey Legend M.M. Somaiah’s 1980 Olympic Gold Medal and Seven Other Precious Heirlooms., 13/11/2026
1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಹಾಕಿ ದಂತಕಥೆ ಎಂ.ಎಂ. ಸೋಮಯ್ಯ ಅವರ ಚಿನ್ನದ ಪದಕ ಸೇರಿದಂತೆ, ಕಳವಾಗಿದ್ದ ಏಳು ಅಮೂಲ್ಯ ಕ್ರೀಡಾ ಪದಕಗಳು ಹಾಗೂ ಕುಟುಂಬದ ಬೆಲೆಬಾಳುವ ಸ್ಮರಣಿಕೆಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ ವಶಪಡಿಸಿಕೊಂಡ ಬೆಂಗಳೂರು ನಗರ ಪೊಲೀಸ್ ಮತ್ತು ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ಇವು ಕೇವಲ ವೈಯಕ್ತಿಕ ಅಮೂಲ್ಯ ವಸ್ತುಗಳಲ್ಲ, ಬದಲಾಗಿ ಭಾರತದ ಕ್ರೀಡಾ ಇತಿಹಾಸದ ಹೆಮ್ಮೆಯ ಪರಂಪರೆಯಾಗಿವೆ. ತ್ವರಿತ ಕಾರ್ಯಾಚರಣೆಯ ಮೂಲಕ ದೇಶದ ಕ್ರೀಡಾ ಪರಂಪರೆಯನ್ನು ಸಂರಕ್ಷಿಸಿದ ನಮ್ಮ ಪೊಲೀಸ್ ಇಲಾಖೆ ಮತ್ತು ರಾಜ್ಯ ಆಡಳಿತದ ಕಾರ್ಯ ಶ್ಲಾಘನೀಯ.
