Lokamanya Shri Bal Gangadhara Tilak Remembering with respect, a genuine nationalist, social reformer, freedom fighter, Bal Gangadhara Tilak, known as 'Lokamanya' to the common people, on his birthday, let us take a pledge to follow his ideals., 23/07/2025
ಲೋಕಮಾನ್ಯ ಶ್ರೀ ಬಾಲ ಗಂಗಾಧರ ತಿಲಕ್ ರವರನ್ನು ಗೌರವ ಪೂರ್ವಕ ಸ್ಮರಿಸುತ್ತಾ ಅಪ್ಪಟ ರಾಷ್ಟ್ರೀಯವಾದಿ, ಸಮಾಜ ಸುಧಾರಕ, ಸ್ವಾತಂತ್ರ್ಯ ಸೇನಾನಿ, ಜನಸಾಮಾನ್ಯರಿಗೆ 'ಲೋಕಮಾನ್ಯ' ಎಂದೇ ಚಿರಪರಿಚಿತರಾಗಿದ್ದ ಬಾಲ ಗಂಗಾಧರ ತಿಲಕ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಆದರ್ಶಗಳನ್ನು ಪಾಲಿಸುವ ಪಣ ತೊಡೋಣ.
Paying tributes to the revolutionary patriot Shri Chandrashekhar Azad on his birth anniversary, 23/07/2025
ಅಪ್ರತಿಮ ದೇಶಪ್ರೇಮಿ ಶ್ರೀ ಚಂದ್ರಶೇಖರ ಅಜಾದ್ ಅವರ ಜಯಂತಿಯಂದು ನನ್ನ ಗೌರವಪೂರ್ವಕ ನಮನಗಳು
State government has given financial assistance to bring the body of Girish Pale Babu, Madenadu village, Virajpet assembly constituency, who died in Guyana, America. Heartfelt thanks to the Honorable Chief Minister who responded to our request., 23/07/2025
ಅಮೆರಿಕದ ಗಯಾನ ದೇಶದಲ್ಲಿ ನಿಧನರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದೆನಾಡು ಗ್ರಾಮದ, ಗಿರೀಶ್ ಪಾಲೆ ಬಾಬು ರವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗಿದೆ. ನಮ್ಮ ಮನವಿಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು.
At my office in Bangalore Vidhana Soudha, the leaders of Kodagu Half language Gowda community met and thanked them for the assurance of granting the construction of Bhagamandala Half Gowda community. Meanwhile submitted a request letter of many important , 22/07/2025
ಬೆಂಗಳೂರಿನ ವಿಧಾನಸೌಧದ ನನ್ನ ಕಚೇರಿಯಲ್ಲಿ, ಕೊಡಗು ಅರೆಭಾಷೆ ಗೌಡ ಸಮಾಜದ ಮುಖಂಡರು ಭೇಟಿಯಾಗಿ, ಭಾಗಮಂಡಲ ಅರೆಭಾಷೆ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವ ಭರವಸೆ ನೀಡಿರುವುದಕ್ಕೆ ಧನ್ಯವಾದಗಳು ಅರ್ಪಿಸಿದರು. ಇದೇ ವೇಳೆ ಸಮಾಜದ ಅಭಿವೃದ್ಧಿಗೆ ಹಲವು ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲಾಯಿತು.

Our tricolor flag, a symbol of freedom, equality, diversity and fraternity was received as the National Flag of India on July 22, 1947, 22/07/2025
ಸ್ವಾತಂತ್ರ್ಯ,ಸಮಾನತೆ, ವೈವಿಧ್ಯತೆ ಹಾಗೂ ಭ್ರಾತೃತ್ವದ ಸಂಕೇತವಾದ ನಮ್ಮ ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರೀಯ ಧ್ವಜವನ್ನಾಗಿ ಜುಲೈ 22, 1947 ರಂದು ಸ್ವೀಕರಿಸಲಾಯಿತು



