Visited rain damaged areas and taluk offices in the constituency along with Honorable Revenue Minister Shri Krishna Bairegowda., 26/07/2025
ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡರ ಜೊತೆ ಕ್ಷೇತ್ರದ ಮಳೆ ಹಾನಿ ಪ್ರದೇಶಗಳು ಹಾಗೂ ತಾಲೂಕು ಕಚೇರಿಗಳಿಗೆ ಭೇಟಿ ನೀಡಲಾಯಿತು.
In the premises of Virajpet Municipality Office, a newly purchased backhole loader machine was launched for municipality works., 25/07/2025
ವಿರಾಜಪೇಟೆಯ ಪುರಸಭೆ ಕಚೇರಿ ಆವರಣದಲ್ಲಿ, ಪುರಸಭೆ ಕಾಮಗಾರಿಗಳಿಗೆ ನೂತನವಾಗಿ ಖರೀದಿಸಿದ ಬ್ಯಾಕ್ ಹೋಲ್ ಲೋಡರ್ ಯಂತ್ರಕ್ಕೆ ಚಾಲನೆಯನ್ನು ನೀಡಲಾಯಿತು.
The closing ceremony of the Basava culture campaign which will be held monthly from September 1st will be held on October 5th at the Palace grounds in Bangalore. Thanks to the warm invitation given by the Lingayat Mathadipati Association for this function, 25/07/2025
ಸೆಪ್ಟೆಂಬರ್ ಒಂದರಿಂದ ತಿಂಗಳಾವಧಿಗೆ ಜರುಗಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಅಕ್ಟೋಬರ್ ಐದರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು ಈ ಸಮಾರಂಭಕ್ಕೆ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ನೀಡಿದ ಆತ್ಮೀಯ ಆಹ್ವಾನಕ್ಕೆ ಧನ್ಯವಾದಗಳು..
Hon'ble Chief Minister attended a meeting with the Ambassador of Belgium H.E. Mr Didyar Vander Hasselt at his official residence Cauvery., 25/07/2025
ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಬೆಲ್ಜಿಯಂ ದೇಶದ ರಾಯಭಾರಿಯವರಾದ H.E. Mr ಡಿಡ್ಯಾರ್ ವ್ಯಾಂಡೆರ್ ಹಾಸ್ಸೇಲ್ಟ್ ರವರೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಲಾಯಿತು.
Participated in a precautionary meeting on social and educational survey chaired by Hon'ble Chief Minister Shri Siddaramaiah at Bangalore, 25/07/2025
ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಾದ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.




