Visit to homes of accident victims of Pollibetta, 24/04/2022

ಕಲ್ಲಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಪಾಲಿಬೆಟ್ಟದ ಏಳು ಜನ ನಿವಾಸಿಗಳ ಮನೆಗಳಿಗೆ ಶನಿವಾರ ಭೇಟಿ ಕೊಟ್ಟು ಅವರ ಕುಟುಂಬಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಲಾಯಿತು.  

ದುರಂತದಲ್ಲಿ ಸಾವನ್ನಪ್ಪಿದವರ ಬಡ ಕುಟುಂಬಗಳಿಗೆ ಸರಕಾರ ವಿಶೇಷ ಪ್ರಕರಣದಡಿ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೇನೆ.

ಈ ಭೇಟಿಯ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಡಿಸಿಸಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಎ.ಎಸ್.ನರೇನ್ ಕಾರ್ಯಪ್ಪ, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಎ. ಎಸ್. ಟಾಟು ಮೊಣ್ಣಪ್ಪ, ಡಿಸಿಸಿ ಸದಸ್ಯರಾದ ಮುಕ್ಕಾಟಿರ ಸಂದೀಪ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಎನ್. ಪ್ರತ್ಯು, ಕೆ.ಎಂ. ಬಾಲಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಚ್. ವಿ. ರಾಮದಾಸ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಮಾಳೇಟಿರ ಸಾಬ ಕಾಳಪ್ಪ, ವಿಜೇಶ್, ಪಕ್ಷದ ಮಾಲ್ದಾರೆ ವಲಯ ಸಮಿತಿ ಅಧ್ಯಕ್ಷರಾದ ಸಜಿ ಥೋಮಸ್ ಮೊದಲಾದವರು ಉಪಸ್ಥಿತರಿದ್ದರು.

#Kodagu #Coorg #Pollibetta #Madikeri #Ponnampet #Virajpet #Kushalnagar

 
 

Kodagu's talents in Khelo Masters National Games, 23/04/2022

Dhamayanthi and Vasanthi PT from Kodagu are selected to represent Karnataka in the Khelo Masters National Games.. A.S. Ponnanna offered his support to these ladies from Kodagu who are representing Karnataka

ಕೊಡಗಿನ ಕ್ರೀಡಾಪಟುಗಳಾದ ದಮಯಂತಿ ಮತ್ತು ಪಿ.ಟಿ.ವಾಸಂತಿ ಖೇಲೋ ಮಾಸ್ಟರ್ಸ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ಹೆಮ್ಮಯ ಮತ್ತು ಸಂತಸದ ವಿಷಯ.

ಅವರಿಗೆ ಅಭಿನಂದಿಸಿ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ಬೆಂಬಲ ನೀಡಲಾಯಿತು. ಕ್ರೀಡೆಗೆ ಹೆಸರಾದ ಕೊಡಗಿಗೆ ಅವರು ಕೀರ್ತಿತರಲೆಂದು ಹಾರೈಸಿದೆ.

#Kodagu #Coorg #Madikeri #Ponnampet #Virajpet #Karnataka #Sports

 
 

Interview in Samyukta Karnataka, 23/04/2022

ಕೊಡವರಿಗೆ ಬುಡಕಟ್ಟು ಸ್ಥಾನಮಾನ ಪಡೆಯುವ ಬಗ್ಗೆ ನಡೆಯುತ್ತಿರುವ ಕಾನೂನು ಹೋರಾಟದ ಬಗ್ಗೆ ಕೆಲ ತಿಂಗಳ ಹಿಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಯು-ಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನ.

ಉಚ್ಚ ನ್ಯಾಯಾಲಯದ ತೀರ್ಪು ಹೋರಾಟದಲ್ಲಿ ಮೊದಲ ಹೆಜ್ಜೆ ಮಾತ್ರ. ಈ ವಿಷಯದಲ್ಲಿ ಮಾಡಬೇಕಾದ ಕೆಲಸ ಸಾಕಷ್ಟು ಇದೆ. ಇದರ ಜೊತೆಗೆ ಕೊಡಗಿನ ಜನತೆ ಎದುರಿಸುತ್ತಿರುವ ಇತರೇ ಸಮಸ್ಯೆಗಳ ಬಗ್ಗೆ ಕೂಡ ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ.

#Coorg #Kodagu #Madikeri #Virajpet #Ponnampet #Memories

 

Condolences to families of accident victims, 21/04/2022

ಪಾಲಿಬೆಟ್ಟದ ಆರು ಮಂದಿ ಪ್ರಯಾಣಿಕರು ಹುಣಸೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಸುದ್ದಿ ತೀವ್ರ ಆಘಾತ ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ಆ ದೇವರು ಕರುಣಿಸಲೆಂದು ಬೇಡಿಕೊಳ್ಳುತ್ತೇನೆ. ಅವರ ಈ ನೋವ್ವಿನಲ್ಲಿ ನಾನು ಭಾಗಿಯಾಗಿದ್ದೇನೆ.


Visit to Mooteri Sri Bhagavathi temple, 20/04/2022

ಮೂಟೇರಿ ಶ್ರೀ ಭಗವತಿ ದೇವಸ್ಥಾನ, ಈಸ್ಟ್ ಕೊಳಕೇರಿ ನಾಪೋಕ್ಲುಯ ಇಲ್ಲಿನ ಮೂಟೇರಿ ಭಗವತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಮತ್ತು ಆಡಳಿತ ಮಂಡಳಿ ಪುನರ್ ಪ್ರತಿಷ್ಟೆ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಹಮ್ಮಿಕೊಂಡಿದ್ದು, ಆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿಗೆ ನನ್ನ ಧನ್ಯವಾದಗಳು. ಶ್ರೀ ಭಗವತಿ ದೇವರ ಆಶೀರ್ವಾದ ಎಲ್ಲರ ಮೇಲು ಇರಲಿ ಎಂದು ಬೇಡಿಕೊಳ್ಳುತ್ತೇನೆ.

#Kodagu #Coorg #Napoklu #Ponnampet #Virajpet #Madikeri #Kushalnagar