Eid Mubarak, 02/05/2022
Wishing a prosperous and blessed #Ramzan #EidAlFitr to all. May this festival spread joy and hope among everyone.
ಸಮಸ್ತ ಮುಸ್ಲಿಂ ಸಮುದಾಯದವರಿಗೂ ಈದ್-ಉಲ್-ಫಿತರ್ (ರಂಜಾನ್) ಹಬ್ಬದ ಶುಭಾಶಯಗಳು. ಈ ಹಬ್ಬವು ಎಲ್ಲರ ನಡುವೆ ಸಹೋದರತ್ವ ಮತ್ತು ಪ್ರೀತಿಯನ್ನು ಹೆಚ್ಚಿಸಲಿ.
#Ramzan2022 #EidAlFitr
Happy labour day, 01/05/2022

Naalnaad Cup Hockey Tournament, 28/04/2022
ಕೊಡಗಿನ ನಾಪೋಕ್ಲುವಿನ ನಾಲ್ನಾಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಯೋಜಿಸಿದ್ದ ನಾಲ್ನಾಡ್ ಕೊಡವ ಕಪ್ ಹಾಕಿ ಪಂದ್ಯಾವಳಿಯ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಒದಗಿಬಂತು. ಚೇರಿಯಪರಂಬು ಜೆನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬಹಳ ಸುಸಜ್ಜಿತವಾಗಿ ಹಾಗೂ ಅಚ್ಚುಕಟ್ಟಾಗಿ ಪಂದ್ಯಾವಳಿಗಳನ್ನು ಆಯೋಜಿಸಿದ ಆಯೋಜಕರಿಗೆ ಅಭಿನಂದನೆಗಳು.
ಕ್ರೀಡಾ ಮನೋಭಾವದಿಂದ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆಗಳು. ಕೊಡಗಿನ ಕ್ರೀಡಾ ಪರಂಪರೆಗೆ ಈ ರೀತಿಯ ಪಂದ್ಯಾವಳಿಗಳ ಕೊಡುಗೆ ಅಪಾರ. ಕೊಡಗಿನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಅನೇಕ ಕ್ರೀಡಾಪಟುಗಳು ಇಲ್ಲಿಂದಲೇ ಬೆಳೆದವರು. ಕಾರ್ಯಕ್ರಮಕ್ಕೆ ನನ್ನನ್ನು ಪ್ರೀತಿಯಿಂದ ಆಹ್ವಾನಿಸಿದ ಆಯೋಜಕರಿಗೆ ಧನ್ಯವಾದಗಳು. ಗೆದ್ದ ತಂಡಗಳಿಗೂ, ಭಾಗವಹಿಸಿದ ಕ್ರೀಡಾಪಟುಗಳಿಗೂ ಮತ್ತೊಮ್ಮೆ ಅಭಿನಂದನೆ ಮತ್ತು ಶುಭ ಹಾರೈಕೆಗಳು.
#Kodagu #Coorg #Madikeri #Virajpet #Ponnampet #Kushalnagar #Naalnaad #Hockey #Sports
Party meeting in Siddapur, 26/04/2022
ಸಿದ್ದಾಪುರ ವಲಯದ ಪಕ್ಷದ ಸಭೆಯಲ್ಲಿ ಪಾಲ್ಗೊಂಡು, ಪಕ್ಷ ಸಂಘಟನೆ, ಸ್ಥಳೀಯ ಸಮಸ್ಯೆಗಳು, ಪರಿಹಾರ ಕ್ರಮಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸ್ಥಳೀಯ ಮುಖಂಡರಿಂದ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಹಾಗೂ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಪಕ್ಷದ ಸಂಘಟನೆಗೆ ಸಂಪರ್ಕ ಕಾರ್ಯಕ್ರಮಗಳು, ಹೊಸ ಸದಸ್ಯರ ನೊಂದಣಿ ಬಗ್ಗೆ ಕೂಡ ಚರ್ಚಿಸಾಲಾಯಿತು.
#Coorg #Kodagu #Madikeri #Virajpet #Ponnampet #Siddapura
Helping hand to specially-abled woman, 26/04/2022
ಗೋಣಿಕೊಪ್ಪಲು ಸಮೀಪದ ಬಿ.ಶೆಟ್ಟಿಗೇರಿಯಲ್ಲಿ ವಾಸವಿರುವ ಓರ್ವ ವಿಶೇಷ ಚೇತನ ಮಹಿಳೆಯ ಸಂಕಷ್ಟದ ಬಗ್ಗೆ ನನ್ನ ಗಮನಕ್ಕೆ ತರಲಾಗಿತ್ತು. ಅವರ ಮನೆಗೆ ಭೇಟಿ ನೀಡಿ ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು. ಇದೇ ಸಂಧರ್ಭದಲ್ಲಿ ಅವರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿಲಾಯಿತು.
#Kodagu #Coorg #Gonikoppa #Madikeri #Ponnampet #Kushalnagar #Virajpet #BShettigeri