I met with the Kelapanda family to discuss and propose a vision for a clean and efficient government that puts the people first, 14/03/2023

ನಿನ್ನೆ ಕೇಲ್ಪಂಡ ಕುಟುಂಬವನ್ನು ಭೇಟಿ ಮಾಡಿ, ಜನರಿಗೆ ಮೊದಲ ಆದ್ಯತೆ ಕೊಡುವ ಸ್ವಚ್ಛ ಮತ್ತು ದಕ್ಷ ಸರ್ಕಾರದ ಕಲ್ಪನೆಯನ್ನು ನೀಡಿದೆ.ಸ್ಥಳೀಯನಾಗಿ,ಇಲ್ಲಿನ ಎಲ್ಲ ಸಮುದಾಯಗಳಿಗೆ ಸೇವೆ ಸಲ್ಲಿಸಲು ಮತ್ತು ಸಕಾರಾತ್ಮಕ ಸಾಮಾಜಿಕ ಬದಲಾವಣೆಗಳನ್ನು ಮಾಡಲು ನಾನು ಬದ್ಧನಾಗಿದ್ದೇನೆ.ರಾಜಕೀಯಕ್ಕೆ ಬರುವುದಕ್ಕೂ ಮುಂಚೆಯಿಂದಲೂ ಜನರ ಸೇವೆ ಮಾಡಬೇಕೆಂಬುದೇ ಸದಾ ನನ್ನ ಪ್ರೇರಕ ಶಕ್ತಿಯಾಗಿತ್ತು.ಕೋವಿಡ್-19 ಮಹಾಮಾರಿ ಅಪ್ಪಳಿಸಿದಾಗ,ನಾನು ನನ್ನನ್ನು ಸಾಮಾಜಿಕ ಕಾರ್ಯಗಳಿಗೆ ಸಮರ್ಪಿಸಿಕೊಂಡು,ಸಂತ್ರಸ್ತರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ನನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಿದ್ದೇನೆ.ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ್ದೇನೆ ಎಂದು ವಿವರಿಸಿದೆ.
 
I met with the Kelapanda family yesterday, where I discussed and proposed a vision for a clean and efficient government that puts the people first.
 
As a local, I'm committed to serving my community and making a positive impact for all.
 
 
 
img
 

Congratulations to the 3 senior athletes of Kodagu, Mr. Palekanda Bopaiah, Mr. Palekanda Belliappa and Smt. Machamma for representing India at the Master Games Championship in Sydney, Australia from 10th March to 15th March, 14/03/2023

ಕೊಡಗಿನ 3 ಹಿರಿಯ ಕ್ರೀಡಾಪಟುಗಳಾದ ಶ್ರೀ. ಪಾಲೆಕಂಡ ಬೋಪಯ್ಯ, ಶ್ರೀ. ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಕರ್ನಾಟಕ ಮಾಸ್ಟರ್ ಗೇಮ್ ಅಸೋಸಿಯೇಷನ್ನಿನ ಅಧ್ಯಕ್ಷೆ ಶ್ರೀಮತಿ. ಮಾಚಮ್ಮ ಅವರು 10ನೇ ಮಾರ್ಚ್ ರಿಂದ 15ನೇ ಮಾರ್ಚ್ ವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಮಾಸ್ಟರ್ ಗೇಮ್ ಚಾಂಪಿಯನ್ಷಿಪ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
 
ಶ್ರೀ. ಪಾಲೆಕಂಡ ಬೋಪಯ್ಯನವರು 100ಮೀ. ಓಟದಲ್ಲಿ ಚಿನ್ನ, ಜಾವೆಲಿನ್ ಎಸತದಲ್ಲಿ ಬೆಳ್ಳಿಯ ಪದಕವನ್ನೂ, ಹಾಗೂ ಶ್ರೀ. ಪಾಲೆಕಂಡ ಬೆಳ್ಳಿಯಪ್ಪ 1500ಮೀ. ನಡಿಗೆಯಲ್ಲಿ ಚಿನ್ನ ಮತ್ತು 100ಮೀ. ಓಟದಲ್ಲಿ ಕಂಚಿನ ಪದಕ ಗೆದ್ದು ಕೊಡವ ನಾಡಿನ ಕೀರ್ತಿಪತಾಕೆಯನ್ನು ವಿದೇಶಿ ನೆಲದಲ್ಲಿ ಹಾರಿಸಿದ್ದಾರೆ ಇವರಿಗೆ ತುಂಬು ಹೃದಯದ ಅಭಿನಂದನೆಗಳು.
 
Hearty congratulations to the 3 senior athletes of Kodagu, namely Mr. Palekanda Bopaiah, Mr. Palekanda Belliappa and President of Karnataka Master Games Association Smt. Machamma. They are representing India at the Master Games Championship in Sydney, Australia from 10th March to 15th March.
 
They have made all of Kodagu proud with their accomplishments - Mr. Palekanda Bopaiah won Gold medal in 100 Meter Running, Silver Medal in Javelin throw, and Mr. Palekanda Beliappa won Gold Medal in 1500 Meter Walking and Bronze in 100 Meter Running. I wish them all the best.
 
 
 
img
 

16th Kodagu Kannada Sahitya Sammelana 2023, 13/03/2023

ಮಾರ್ಚ್ 4 ಮತ್ತು 5ರಂದು "16ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 2023" ನಮ್ಮ ಗೋಣಿಕೊಪ್ಪದಲ್ಲಿ ನಡೆದಾಗ ನಾನು ಕೂಡ ಭಾಗಿಯಾಗಿದ್ದೆ. ಕನ್ನಡದ ಕಂಪನ್ನ ಕನ್ನಡದ ಅಸ್ಮಿತೆಯನ್ನ ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತಿಗಳನ್ನ ಹೋರಾಟಗಾರರನ್ನು ಸತ್ಕರಿಸಿಕೊಂಡು ಬರುತ್ತಿದೆ.
 
ಕಾವೇರಮ್ಮನ ಮಡಿಲಲ್ಲಿ ಕನ್ನಡದ ಕಂಪು ಮೊಳಗಲಿ.
 
ಕನ್ನಡ ಉಳಿಸೋಣ, ಬೆಳೆಸೋಣ. ಜೈ ಕನ್ನಡಾಂಬೆ
 
An honor to have participated in the cultural extravaganza that was the "16th Kodagu Kannada Sahitya Sammelana 2023" celebrating the richness of Kannada literature and its heritage which was held at Gonikoppa. The Kannada Sahitya Parishath paid tribute to the language and its writers & authors. Let's keep the flame of Kannada burning bright! Jai Kannadambe.
 
 
 
img
 

Visit to some charming villages in the rural areas of Gonikoppa, Hudikeri, and Arji Panchayat, 13/03/2023

ಗೋಣಿಕೊಪ್ಪ, ಹುದಿಕೇರಿ ಮತ್ತು ಅರ್ಜಿ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿಯಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಬೆರೆತು ಹೊಸ ಬದಲಾವಣೆಗೆ ಮುನ್ನುಡಿ ಬರೆಯಲು ಸಮಾಲೋಚನೆಗಳನ್ನ ನಡೆಸಿದೆ. ಕಾರ್ಯಕರ್ತರ ಉತ್ಸಾಹ ಸದಾ ಹೀಗೆ ಇದ್ದು ಮುಂಬರುವ ದಿನಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ ಹೊಸಪರ್ವಕ್ಕೆ ನಾಂದಿ ಹಾಡೋಣ.
 
I recently had the pleasure of visiting some charming villages in the rural areas of Gonikoppa, Hudikeri, and Arji Panchayat. I was fortunate to spend time with the local party workers, discussing new ideas and brainstorming ways to bring about positive change. The enthusiasm of these dedicated individuals was contagious, and together we worked tirelessly to make progress towards a brighter future.
 
 
 
img
 

I was blessed to attend the annual festival of Mayamudi Sri Mahadev, 12/03/2023

ಮಾಯಮುಡಿ ಶ್ರೀ ಮಹಾದೇವರ ವಾರ್ಷಿಕ ಉತ್ಸವ ಈ ಬಾರಿ ಅದ್ದೂರಿಯಾಗಿ ನಡೆದಿದ್ದು ಈ ಸಂದರ್ಭದಲ್ಲಿ ಸ್ವಾಮಿಯ ದರ್ಶನ ಪಡೆದು ಧನ್ಯನಾದೆನು.
 
I was blessed to attend the annual festival of Mayamudi Sri Mahadev, which was held in grand style and celebration. On this occasion, I was grateful to have the darshan of the Swami and offer my prayers for my family and my people.
 
 
 
img