The local leader Joachim of Virajpet and his supporters joined the party, 18/03/2023

ದಿನಾಂಕ 16-03-2023ರಂದು ವಿರಾಜಪೇಟೆಯ ನಮ್ಮ ಕಛೇರಿಯಲ್ಲಿ ಸ್ಥಳೀಯ ನಾಯಕರಾದ ಶ್ರೀ ಜೋಕಿಂ ರಾಡ್ರಿಗಸ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಪಕ್ಷಕ್ಕೆ ಸೇರಿದರು. ಈ ಸಂದರ್ಭದಲ್ಲಿ ಕೊಡಗು ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷರು, ಇತರೆ ಬ್ಲಾಕಿನ ಪದಾಧಿಕಾರಿಗಳು, ಅಪಾರ ಕಾರ್ಯಾಕರ್ತರೂ ಉಪಸ್ಥಿತರಿದ್ದರು. ಈ ಬೆಳವಣಿಗೆ ನಮ್ಮ ಪಕ್ಷಕ್ಕೆ ನವಚೈತನ್ಯ ತುಂಬಿದ್ದು, ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಅನುಕೂಲವಾಗಲಿದೆ.
 
On 16-03-2023, at my residence office in Virajpet, the local leader Joachim and his supporters joined the party. Kodagu Congress district president, office-bearers of other blocks and a large number of party workers were present on the occasion. This development has given a new lease of life to our party and will enable the Karyakartas to work enthusiastically.
 
 
 
img
 

Free Dental Check-up Camp by Coorg Institute of Dental Sciences advocating the importance of dental health, 17/03/2023

ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರಕ್ಕೆ ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ಮಾತನಾಡಿ, ಸಾಮಾನ್ಯ ಆರೋಗ್ಯದೊಂದಿಗೆ ನಮ್ಮ ಹಲ್ಲಿನ ಆರೋಗ್ಯವೂ ಪ್ರಮುಖವಾದುದು, ಅದರ ಬಗ್ಗೆ ನಿರ್ಲಕ್ಷ್ಯ ತೋರದೆ, ಹಲ್ಲಿನ ಬಗ್ಗೆ ಕಾಳಜಿವಹಿಸಿಕೊಳ್ಳಬೇಕು ಎಂದು ಅಲ್ಲಿ ನೆರೆದಿದ್ದ ಸಭಿಕರಿಗೆ ಹೇಳಿದೆ. ಪ್ರತಿ ವರ್ಷವೂ ಜನಪರ ಸೇವೆಗಳನ್ನು ಹಮ್ಮಿಕೊಳ್ಳುತ್ತಿರುವ ಈ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭಕೋರಿದೆ.
 
I was honored to be the chief guest at the Free Dental Check-up Camp by Coorg Institute of Dental Sciences advocating the importance of dental health. Let's prioritize our dental health as much as our general health. A healthy smile leads to a healthy life! Wishing the Institute all the success in their endeavors to provide pro-people services every year.
 
 
 
img
 

Visit to the Government Higher Primary School in K-Badaga village and donated 15 benches and 5 chairs to the school, 16/03/2023

ಕೆ. ಬಾಡಗ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿ ಕೊರತೆಯಿದ್ದ 15 ಬೆಂಚುಗಳನ್ನು ಹಾಗೂ 5 ಖುರ್ಚಿಗಳನ್ನು ಕೊಡುಗೆ ನೀಡಿದೆನು. ಈ ನನ್ನ ಅಲ್ಪ ಕಾಣಿಕೆಯು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿದ್ದೇನೆ. ಹಾಗೆಯೇ ಶಾಲಾಪಠ್ಯಗಳಲ್ಲಿ ಕನ್ನಡ ಭಾಷೆಯ ಮಹತ್ವದ ಬಗ್ಗೆಕೂಡ ಮನವರಿಕೆ ಮಾಡಿಸಿದೆನು..
 
I visited the Government Higher Primary School in K-Badaga village and donated 15 benches and 5 chairs to the school to provide for their lack of adequate facilities. I hope that this meagre contribution of mine will benefit the students. I also discussed the importance of Kannada language in school textbooks.
 
 
 
img
 

Held meetings and consultations with party workers in Gonikoppa, Hudikeri and Arji Panchayat villages, 15/03/2023

ಗೋಣಿಕೊಪ್ಪ, ಹುದಿಕೇರಿ ಮತ್ತು ಅರ್ಜಿ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿಯಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆಗಳನ್ನ ನಡೆಸಿದ ಕ್ಷಣಗಳು.
 
I had an eventful evening recently when we held meetings and consultations with party workers in Gonikoppa, Hudikeri and Arji Panchayat villages. I eagerly look forward to doing some good work with our dedicated party workers in the coming future.
 
 
 
img
 

Visit to Brahmagiri colony and listened to the concerns of the people, 15/03/2023

ಇತ್ತೀಚೆಗೆ ನಾನು ಬ್ರಹ್ಮಗಿರಿ ಕಾಲೋನಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದೆನು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳ ಬಗ್ಗೆ ಅವರಿಗೆ ತಿಳುವಳಿಕೆ ನೀಡಿ, ಉಜ್ವಲ ಭವಿಷ್ಯವನ್ನು ನಿರ್ಮಿಸಲು ನಮ್ಮೊಂದಿಗೆ ಕೈಜೋಡಿಸಿ ಎಂದು ಬೆಂಬಲ ಕೇಳಿದೆನು!
 
Recently I visited the Brahmagiri colony and listened to the concerns of the people. I assured them that we are dedicated to making a positive difference in their lives.
 
They were informed about the Congress Guarantee Cards and they were invited to join their hands with us to build a brighter future!
 
 
 
img