It pains me to mourn the sudden passing of our beloved leader, Dhruvanarayan. May his soul rest in peace., 11/03/2023

ನೆನ್ನೆ ಮೊನ್ನೆವರೆಗೂ ನಗುನಗುತ್ತಾ ಮಾತನಾಡುತ್ತಿದ್ದ ,ನಮಗೆಲ್ಲ‌ ಹುರುಪುತುಂಬಿ ವೈಯಕ್ತಿಕವಾಗಿ ಹಾಗೂ ನಮ್ಮೆಲ್ಲ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುತ್ತಿದ್ದ ನಮ್ಮೆಲ್ಲರ ನೆಚ್ಚಿನ ನಾಯಕ ಧ್ರುವನಾರಾಯಣ್ ಅವರು ಹಠಾತ್ ಕಣ್ಮರೆಯಾಗಿದ್ದಾರೆ. ಅವರ ಅಗಲಿಕೆ ಇಡೀ ರಾಜ್ಯದ ಜನತೆಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
 
It pains me to mourn the sudden passing of our beloved leader, Dhruvanarayan. He was encouraging and inspiring all of us and our workers and his loss is irreparable to the people and to the state. May his soul rest in peace.
 
 
 
img
 

I was grateful to be invited for the event by the photographers' Welfare Association and show my support for incredible work and discipline of photographers., 10/03/2023

ನಮ್ಮ ಜೀವನದ ವಿದ್ಯಮಾನಗಳನ್ನು, ಸಂತೋಷದ ಕ್ಷಣಗಳನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದು ಮುಂದೊಂದು ದಿನ ಅದನ್ನು ನೋಡಿ ನೆನಪುಗಳನ್ನು ಮೆಲಕು ಹಾಕುವಂತೆ ಮಾಡುವ ನಮ್ಮ ಛಾಯಾಗ್ರಾಹಕರು ನಮ್ಮ ಕೊಡಗು ಜಿಲ್ಲೆಯಲ್ಲಿ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಸಂಘದಿಂದ ನಡೆದ ಛಾಯಾಗ್ರಹಕರ ಸಮ್ಮಿಲನದಲ್ಲಿ ನನ್ನನ್ನು ಆಹ್ವಾನ ನೀಡಿ ಅಪಾರ ಪ್ರೀತಿ ತೋರಿದರು .ತಮ್ಮ ಪ್ರೀತಿಗೆ ನಾನು ಸದಾ ಚಿರಋಣಿ.
 
Our photographers in Kodagu district are hard at work always, capturing the various events of public and cultural life in our community. I was grateful to be invited for this event by the photographers' Welfare Association and show my support for their incredible work and discipline!
 
 
 
img
 

I was excited to be a part of this great initiative, where Dr. Babu Jagjivan Ram Organization distributed sewing machines and certificates to women, 10/03/2023

ಮಹಿಳೆಯರನ್ನು ಸ್ವಾವಲಂಬಿಯಾಗಿ ಮಾಡುವ ನಿಟ್ಟಿನಲ್ಲಿ ಡಾಕ್ಟರ್ ಬಾಬು ಜಗಜೀವನ್ ರಾಮ್ ಸಂಸ್ಥೆ ವತಿಯಿಂದ ಹೊಲಿಗೆ ಯಂತ್ರ ಮತ್ತು ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು. ಇದೊಂದು ಅದ್ಭುತ ನಡೆ. ಈ ಕಾರ್ಯಕ್ರಮವನ್ನು ಆಯೋಜಿಸಿದ ಮತ್ತು ಭಾಗವಹಿಸಿದ ಸಹೋದರಿಯರಿಗೆ ನನ್ನ ಅಭಿನಂದನೆಗಳು.
 
I was excited to be a part of this great initiative, where Dr. Babu Jagjivan Ram Organization distributed sewing machines and certificates to women, promoting self-reliance and self-confidence for them. My hearty congratulations to the sisters who organized and participated in this event!
 
 
 
img
 

My best wishes to all students appearing for the secondary PUC exams, 09/03/2023

ಇಂದು ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಎಲ್ಲ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು. ಯಾವುದೇ ಒತ್ತಡದಲ್ಲಿ ಬರದೆ ನಿಮ್ಮ ಭವಿಷ್ಯದ ಅತಿ‌ ಮುಖ್ಯ ಘಟ್ಟದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ. ಶುಭವಾಗಲಿ.
 
My best wishes to all students appearing for the secondary PUC exams from today. Face these exams without stress and emerge successful. All the best!
 
 
 
img
 

The closing ceremony of Kodava family sports, 09/03/2023

ಕೊಡವ ಕುಟುಂಬದ ಕ್ರೀಡೆಗಳ ಸಮಾರೋಪ ಸಮಾರಂಭ ಅಭೂತ ಪೂರ್ವ ಯಶಸ್ಸು ಕಂಡಿತು . ಈ ಯಶಸ್ಸಿಗೆ ಕಾರಣರಾದ ox ಸ್ಪೋರ್ಟ್ಸ್ ಮತ್ತು entertainment ಸಂಸ್ಥೆಯ ಎಲ್ಲ ಸದಸ್ಯರಿಗೆ ನನ್ನ ಅಭಿನಂದನೆಗಳು . ಕ್ರೀಡಾ ಕೂಟ ದಲ್ಲಿ ಫುಟ್ಬಾಲ್ ಫೈನಲ್ ಪಂದ್ಯದದಲ್ಲಿ ವಿಜೇತರಾದ ಬಲ್ಲಚಂಡ ಕುಟುಂಬ ಮತ್ತು ತ್ರೋಬಾಲ್ ಪಂದ್ಯ ಗೆದ್ದ ಅದೆಂಗಡ ಕುಟುಂಬಕ್ಕೆ ನನ್ನ ಅಭಿನಂದನೆಗಳು . ಕ್ರೀಡಾ ಕೂಟದಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾಪಟುಗಳಿಗೂ ನನ್ನ ಅಭಿನಂದನೆಗಳು .
 
ಸಮಾರಂಭಕ್ಕೆ ಆಗಮಿಸಿ ಮೆರಗು ತಂದ ಎಲ್ಲ ಗಣ್ಯರಿಗೆ ನನ್ನ ಮನದಾಳದ ಧನ್ಯವಾದಗಳು .
 
The closing ceremony of Kodava family sports was an unprecedented success! I offer my gratitude to all the members of the OX sports and entertainment organization who are responsible for organising this event. Congratulations to the Ballachanda family who won the football final match and the Adengada family who won the throwball match. My congratulations to all the athletes who participated in the sports event.
 
My heartfelt thanks to all the dignitaries who came and cheered the ceremony.
 
img