The 25th-year prestigious Muddanda Hockey Festival 2025 was inaugurated at the Field Marshal K.M. Cariappa College ground in Madikeri, and best wishes were extended for the sports event, 29/03/2025
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ, 25ನೇ ವರ್ಷದ ಪ್ರತಿಷ್ಠಿತ ಮುದ್ದಂಡ ಹಾಕಿ ಹಬ್ಬ 2025ರ ಉದ್ಘಾಟನೆಯನ್ನು ನೆರವೇರಿಸಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.

Various electrically operated tools approved for the 2024-25 financial year were distributed free of cost to rural artisans under the initiative of the Government of Karnataka, Kodagu Zilla Panchayat, and the Rural Industries Department, 28/03/2025
ಕರ್ನಾಟಕ ರಾಜ್ಯ ಸರ್ಕಾರ, ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕೈಗಾರಿಕಾ ವಿಭಾಗ ವತಿಯಿಂದ 2024-25 ನೇ ಸಾಲಿಗೆ ಮಂಜೂರಾದ, ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ವಿವಿಧ ವಿದ್ಯುತ್ ಚಾಲಿತ ಉಪಕರಣಗಳನ್ನು ವಿತರಣೆ ಮಾಡಲಾಯಿತು.

Participated in the inauguration and foundation stone laying ceremonies for various development projects in the Ponnampet and Virajpet regions of the Virajpet Assembly Constituency, 28/03/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ಹಾಗೂ ವಿರಾಜಪೇಟೆ ಭಾಗದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಯಿತು.

A visit was made to the Government Valmiki Ashrama School located in the Nagarahole Tiger Reserve, Ponnampet Taluk, to assess the current situation, 27/03/2025
ಪೊನ್ನಂಪೇಟೆ ತಾಲೂಕು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಸರ್ಕಾರಿ ವಾಲ್ಮೀಕಿ ಆಶ್ರಮದ ಶಾಲೆಗೆ ಇಂದು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಚರ್ಚೆ ನಡೆಸಿ, ಅವರಿಗೆ ಶೀಘ್ರವಾಗಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವಂತೆಯೂ ಹಾಗೂ ಹೊಸ ಕಟ್ಟಡವನ್ನು ಪೂರ್ಣಗೊಳಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಯಿತು.

Participated in the Science and Technology for Sustainable Development program, organized by Kodagu University in collaboration with the Karnataka Science and Technology Academy and the Government of Karnataka, and extended best wishes for its success, 27/03/2025
ಕೊಡಗು ವಿಶ್ವವಿದ್ಯಾಲಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಸರಕಾರದ ಸಹಯೋಗದೊಂದಿಗೆ ಆಯೋಜಿತಗೊಂಡಿರುವ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.
