Visited Balyamandur village in Ponnampet taluk, participated in a Congress workers' meeting, and later performed ground-breaking ceremonies for various road projects, 10/05/2025

ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮಕ್ಕೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ತದನಂತರ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
 
img
 

Key Meeting with KSRTC Officials at MPCS Premises, Mysuru, 09/05/2025

ಮೈಸೂರು ಜಿಲ್ಲೆಯ ಯಾದವಗಿರಿಯ ಎಂಪಿಸಿಎಸ್ ಕಟ್ಟಡದ ಆವರಣದಲ್ಲಿ ಕೆ.ಎಸ್.ಆರ್.ಟಿ.ಸಿ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಮುಖ್ಯ ಸಭೆ ನಡೆಸಿದ ಸಂದರ್ಭ.
 
img
 

Annual Meeting of Mysore Coffee Cooperative Held, 09/05/2025

ಮೈಸೂರು ಜಿಲ್ಲೆ ಯಾದವಗಿರಿಯ ದಿ ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘ ನಿಯಮಿತ ಇದರ 2024-25 ರ ಸಾಲಿನ ವಾರ್ಷಿಕ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
 
img
 

CM Siddaramaiah Inaugurates Patalaamma Devi Rathotsava, 07/05/2025

ಮೂರು ವರ್ಷಗಳಿಗೊಮ್ಮೆ ನಡೆಯುವ ಊರ ಹಬ್ಬ ಪಟಲಾಮ್ಮ ದೇವಿಯ ರಥೋತ್ಸವವನ್ನು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಉದ್ಘಾಟಿಸಿದರು.
ಸಿದ್ದಾಪುರ, ಕನಕನ ಪಾಳ್ಯ, ಯಡಿಯೂರು, ಬೈರಸಂದ್ರ ನಾಗಸಂದ್ರ ಗ್ರಾಮಗಳ ಆದಿ ದೇವತೆಯಾದ ಶ್ರೀ ಪಟಾಲಮ್ಮ ದೇವಿ ರಥೋತ್ಸವದ ಅಂಗವಾಗಿ ಸಾಂಸ್ಕೃತಿಕ ತಂಡಗಳ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು.
ಈ ಪ್ರದರ್ಶನದಲ್ಲಿ ಕೊಡಗು ಸಾಂಸ್ಕೃತಿಕ ತಂಡವು ಭಾಗವಹಿಸಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಶ್ರೀ ಮುನೇಶ್ವರ ಸ್ವಾಮಿ ದೇವಾಲಯಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಸಚಿವರಾದ ಶ್ರೀ ಬೈರತಿ ಸುರೇಶ್ ಮತ್ತ್ತು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಹೆಚ್ ಎಂ ರೇವಣ್ಣ ರವರ ಜೊತೆ ಭೇಟಿ ನೀಡಿ ದೇವರ ಆಶೀರ್ವಾದವನ್ನು ಕೋರಿದೆ.
 
img
 

Our CM Sri Siddaramaiah Congratulates Indian Army for Operation Sindoor Strike, 07/05/2025

ನಮ್ಮ ದೇಶದ ಸೈನಿಕರು ಪಾಕಿಸ್ತಾನದ ವಿರುದ್ಧ ಕೈಗೊಂಡ ದಾಳಿಗೆ ಹಾಗೂ ದಿಟ್ಟ ಉತ್ತರಕ್ಕೆ ಶ್ರೀ ಸಿದ್ಧರಾಮಯ್ಯ ರವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ದೇಶದ ರಕ್ಷಣಾ ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿದ ಸಂದರ್ಭದಲ್ಲಿ ದೇಶದ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಭಾರತದ ಸೈನ್ಯ ಸಿಂಧೂರ್ ಆಪರೇಷನ್ ಮುಖಾಂತರ ಸುಮಾರು 9 ಉಗ್ರಗಾಮಿಗಳ ನೆಲೆಯನ್ನು ನಾಶಪಡಿಸಿದ ಭಾರತದ ನಡೆಯನ್ನು ಬೆಂಬಲಿಸಿದರು .
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಬೈರತಿ ಸುರೇಶ್ ,ಶ್ರೀ ಪ್ರಿಯಾಂಕ ಖರ್ಗೆ ರವರು ಉಪಸ್ಥಿತರಿದ್ದರು.
 
img