The moment I met the CM of Tamil Nadu Hon. Shri M. K. Stalin at the Fair Delimitation Meeting held in Chennai today, 22/03/2025

ಇಂದು ಚೆನ್ನೈನಲ್ಲಿ ನಡೆದ ಫೇರ್ ಡಿಲಿಮಿಟೇಶನ್ ಸಭೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ M. K. Stalin ಅವರನ್ನು ಭೇಟಿಯಾದ ಸಂದರ್ಭ
 
img
 

Participated with Hon. Dpty CM Shri D K Shivakumar in the "Fair Delimitation" meeting held in Chennai led by Tamil Nadu CM Hon. Shri Stalin, 22/03/2025

ತಮಿಳುನಾಡಿನ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಸ್ಟಾಲಿನ್ ಅವರ ನೇತೃತ್ವದಲ್ಲಿ ಚೆನ್ನೈನಲ್ಲಿ ನಡೆದ " ಫೇರ್ ಡಿಲಿಮಿಟೇಶನ್ "ಸಭೆಯಲ್ಲಿ ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ಜೊತೆ ಭಾಗವಹಿಸಿದೆ.
 
img
 

World water day - Come let us all pledge together to conserve water, 22/03/2025

ವಿಶ್ವ ಜಲ ದಿನ
ಬನ್ನಿ ನಾವೆಲ್ಲರೂ ಒಟ್ಟಾಗಿ ಜಲ ಸಂರಕ್ಷಿಸುವಂತೆ ಶಪಥ ಮಾಡೋಣ.
 
img
 

Heartfelt salutations to the immortal martyrs of the freedom struggle - Bhagat Singh, Rajguru, and Sukhdev - who sacrificed their lives at the feet of Mother India. Your sacrifice, struggle, and ideals continue to inspire us, 21/03/2025

ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟದ ಅಮರಸೇನಾನಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಿಗೆ ನನ್ನ ಕೋಟಿ ಕೋಟಿ ನಮನಗಳು. ನಿಮ್ಮ ತ್ಯಾಗ, ಹೋರಾಟ ಮತ್ತು ಆದರ್ಶಗಳು ನಮಗೆ ಸ್ಫೂರ್ತಿ.
 
img
 

Hon. deputy CM D.K. Shivakumar Visits Talacauvery for Cauvery Aarti Event, 21/03/2025

ಕರ್ನಾಟಕ ರಾಜ್ಯ ಸರಕಾರ ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮದ ಸಲುವಾಗಿ, ಇಂದು ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ರವರು ತಲಕಾವೇರಿಯ ತಾಯಿ ಕಾವೇರಿ ಮಾತೆ ಸನ್ನಿಧಿಗೆ ಭೇಟಿ ನೀಡಿದರು.
ಮಾನ್ಯ ಉಪ ಮುಖ್ಯಮಂತ್ರಿಗಳೊಂದಿಗೆ, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಮತ್ತಿತರ ಪ್ರಮುಖರು ಉಪಸಿತರಿದ್ದರು. ಜಿಲ್ಲಾಡಳಿತ ವತಿಯಿಂದ ಮಾನ್ಯ ಉಪ ಮುಖ್ಯಮಂತ್ರಿಗಳಿಗೆ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು.
ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ, ತಹಶೀಲ್ದಾರ್ ಮತ್ತಿತರ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ನೇರ ಭಾಗಮಂಡಲಕ್ಕೆ ಬಂದಿಳಿದಿರುವ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಪ್ರಮುಖರನ್ನು ಹೆಲಿಪ್ಯಾಡ್ ನಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ ರವರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕ/ಸೆಲ್ ಅಧ್ಯಕ್ಷರುಗಳು, ಡಿಸಿಸಿ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮೊದಲಿಗೆ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ತೆರಳಿ ಅಲ್ಲಿ ಪವಿತ್ರ ಸ್ನಾನ ಮುಗಿಸಿದ ಮಾನ್ಯ ಉಪ ಮುಖ್ಯಮಂತ್ರಿಗಳು, ಬಳಿಕ ಶ್ರೀ ಭಗಂಡೇಶ್ವರ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರು.
ಅಲ್ಲಿಂದ ನೇರವಾಗಿ ತಾಯಿ ಕಾವೇರಿ ಸನ್ನಿದಿಗೆ ತೆರಳಿದ ಮಾನ್ಯ ಉಪಮುಖ್ಯಮಂತ್ರಿಗಳು, ಕಾವೇರಿ ತಾಯಿಗೆ ಪೂಜೆ ಸಲ್ಲಿಸಿದ ಬಳಿಕ, ಶಾಸ್ತ್ರೋತ್ರವಾಗಿ ತಾಯಿ ಕಾವೇರಿ ಮಾತೆಯ ಉಗಮ ಸ್ಥಾನವಾದ ಕುಂಡಲಿಯಿಂದ, ಪವಿತ್ರ ಜಲವನ್ನು ಶೇಖರಿಸಿಕೊಂಡು ನೇರವಾಗಿ ಬೆಂಗಳೂರಿಗೆ ತೆರಳಿದರು.
 
img
img
img
img
img
img
img
img
img
img
img
img
img
img
img
img
img
img
img
img
img
img