KOdagu Virajpete Big Bash Cricket League and Ponnampete Juniors Champion Cricket League tournament was electrified and wished good luck.!!!, 16/04/2026

ವಿರಾಜಪೇಟೆ ಬಿಗ್ ಬ್ಯಾಶ್ ಕ್ರಿಕೆಟ್ ಲೀಗ್ ಹಾಗೂ ಪೊನ್ನಂಪೇಟೆ ಜೂನಿಯರ್ಸ್ ಚಾಂಪಿಯನ್ ಕ್ರಿಕೆಟ್ ಲೀಗ್ ಪಂದ್ಯಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಶುಭ ಕೋರಲಾಯಿತು.

 


The school grounds of Hakattoor village of Madikeri taluk has been developed and participated in its inauguration program. At the same occasion, the first year Youth Spandana Cricket Champions Trophy 2026 tournament which is happening for the first time a, 16/04/2026

ಮಡಿಕೇರಿ ತಾಲೂಕು ಹಾಕತ್ತೂರು ಗ್ರಾಮದ ಶಾಲಾ ಮೈದಾನ ಅಭಿವೃದ್ಧಿಗೊಂಡಿದ್ದು, ಇದರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಇದೇ ಸಂದರ್ಭದಲ್ಲಿ, ಸದರಿ ಅಭಿವೃದ್ಧಿ ಹೊಂದಿದ ಮೈದಾನದಲ್ಲಿ ಮೊದಲನೇ ಬಾರಿಗೆ ನಡೆಯುತ್ತಿರುವ ಪ್ರಥಮ ವರ್ಷದ ಯುವ ಸ್ಪಂದನ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ 2026 ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭ ಕೋರಿದ ಸಂದರ್ಭ.


Attended the inauguration ceremony of 41 works named 'Kannada Harmony Nelegal' representing Karnataka's multifaceted heritage organized by Kannada Development Authority at Vidhana Soudha Banquet Hall today with Honorable Chief Minister Sri Siddaramaiah. S, 15/04/2026

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಕರ್ನಾಟಕದ ಬಹುಮುಖ ಪರಂಪರೆಯನ್ನು ಪ್ರತಿನಿಧಿಸುವ 'ಕನ್ನಡ ಸಾಮರಸ್ಯ ನೆಲೆಗಳು' ಎಂಬ 41ಕೃತಿಗಳನ್ನು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರೊಂದಿಗೆ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಶಾಸಕರಾದ ಶ್ರೀ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ಶ್ರೀ ಬೋಜೆಗೌಡ, ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಹಾಗೂ ಇನ್ನಿತರರು‌ ಉಪಸ್ಥಿತರಿದ್ದರು.
 

Land pooja was conducted at Virajpet Taluk Arameri residence for the new hall and assembly building of Kodagu Iri society., 15/04/2026

ಕೊಡಗು ಐರಿ ಸಮಾಜದ ನೂತನ ಸಭಾಂಗಣ ಹಾಗೂ ಸಭಾಭವನ ಕಟ್ಟಡಕ್ಕೆ ವಿರಾಜಪೇಟೆ ತಾಲೂಕು ಅರಮೇರಿಯ ನಿವೇಶನದಲ್ಲಿ ಭೂಮಿ ಪೂಜೆ ನೆರವೇರಿಸಿದ ಸಂದರ್ಭ.


On the occasion of visiting the annual divine festival program of Kalyatajjappa Tere of Hudikeri village, Ponnampete taluk and getting blessings of the divine., 15/04/2026

ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾಮದ ಪ್ರಸಿದ್ಧ ಕಲ್ಯಾಟಜ್ಜಪ್ಪ ತೆರೆ, ವಾರ್ಷಿಕ ದೈವೋತ್ಸವದ ಕಾರ್ಯಕ್ರಮಕ್ಕೆ ಭೇಟಿ ನೀಡಿ ದೈವದ ಆಶೀರ್ವಾದ ಪಡೆದ ಸಂದರ್ಭ.