We are always ready to respond to the problems of our party workers and common people, 09/02/2022

ಕೊಡಗಿನಲ್ಲಿ ಜನಪ್ರತಿನಿಧಿಗಳಿಗೆ ಆಮಿಷವೊಡ್ಡಿ ಬಿಜೆಪಿಗೆ ಸೆಳೆದುಕೊಳ್ಳುವ ಕೆಲಸ ಆ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಕಳೆದ ಫೆಬ್ರವರಿ 4ನೇ ತಾರೀಕು ಚೆಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಶಿಕಲಾ ಕಟ್ಟೆಪಾರೆ ರವರು ಆ ಅಮೀಷಗಳನ್ನು ತಿರಸ್ಕರಿಸಿ ಮಾತೃಪಕ್ಷ ಕಾಂಗ್ರೆಸ್'ಗೆ ಮರಳಿದ್ದಾರೆ.ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಯಾವುದೇ ರೀತಿಯ ಒತ್ತಡಕ್ಕೆ ಮಣಿಯುವ ಅವಶ್ಯಕತೆ ಇಲ್ಲ. ಈ ಘಟನೆ ಬಿಜೆಪಿಯವರ ಕುತಂತ್ರವನ್ನು ಮತ್ತೊಮ್ಮೆ ಜಗಜ್ಜಾಹೀರಾಗಿಸಿದೆ. ನಮ್ಮ ಪಕ್ಷದ ಕಾರ್ಯಕರ್ತರ ಹಾಗೂ ಜನಸಾಮಾನ್ಯರ ತೊಂದರೆಗಳಿಗೆ ಸ್ಪಂದಿಸಲು ನಾವುಗಳು ಸದಾ ಸಿದ್ಧರಿರುತ್ತೇವೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಇಸ್ಮಾಯಿಲ್, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ಗೌಡ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸೂರಜ್ ಹೊಸೂರು, ಚಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮಾ ಯೋಗೀಶ್ವರ್, ನಾಪೋಕ್ಲು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರಾದ ಶ್ರೀಧರನ್ ನಾಯರ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹನೀಫ್ ಸಂಪಾಜೆ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮುತ್ತು ರಶೀದ್, ಸಾಮಾಜಿಕ ಜಾಲತಾಣ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಶೇಖರ್, ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್ ದೋಳ್ಪಾಡಿ, ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಹೊಸೂರು, ಚೆಂಬು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾರತಿ, ಯುವ ಕಾಂಗ್ರೆಸ್ ವಲಯಾಧ್ಯಕ್ಷ ಭರತ್ ಕೆದಂಬಾಡಿ, ಯುವ ಮುಖಂಡರಾದ ಮನು ಏಣಿಯರ, ಮಧು ಹೊಸೂರು, ಲೋಕೇಶ್ ಹೊದ್ದೆಟ್ಟಿ, ಚನಿಯಪ್ಪ ಕುದುರೆ ಪಾಯ, ಕೆಸಿ ಸುರೇಶ್ ಹಾಗೂ ಇತರರ  ಸಮ್ಮುಖದಲ್ಲಿ ಶ್ರೀಮತಿ ಶಶಿಕಲಾ ಕಟ್ಟೆಪಾರೆ ಅವರು ಮರಳಿ ಕಾಂಗ್ರೆಸ್ ಸೇರ್ಪಡೆಯಾದರು.

 
 

Condolence meet for senior leader K.C Raja, 08/02/2022

Condolence meet for senior leader K.C Raja ಕೆಲವು ದಿನಗಳ ಹಿಂದೆ ನಮ್ಮನ್ನು ಅಗಲಿದ, ಕೆ.ಸಿ ರಾಜ ಎಂದು ಎಲ್ಲರಿಗೂ ಚಿರಪರಿಚಿತರಾದಂತಹ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಂತಾಪ ಸಭೆಯಲ್ಲಿ ಭಾಗವಹಿಸಿ, ಪಕ್ಷಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಮತ್ತು ಅವರ ಅಕಾಲಿಗ ಅಗಲಿಕೆಯಿಂದ ಪಕ್ಷಕ್ಕೆ ಆಗಿರುವ ನಷ್ಟವನ್ನು ಸ್ಮರಿಸಿದೆ. ಅವರ ಕುಟುಂಬಕ್ಕೆ, ಅವರ ಸ್ನೇಹಿತರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಬೆಂಬಲಿಗರಿಗೆ ಅವರ ಅಕಾಲಿಕ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಕಾವೇರಿ ಹಾಗೂ ಇಗ್ಗುತಪ್ಪ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದೆ.
 
 
img
img
img
img
 

Madanda Thimmaiah assuming office as Virajpet town president of the party, 07/02/2022

Madanda Thimmaiah assuming office as Virajpet town president of the party ನೂತನವಾಗಿ ವಿರಾಜಪೇಟೆ ಪಟ್ಟಣ ಅಧ್ಯಕ್ಷರಾಗಿ ಮಾದಂಡ ತಿಮ್ಮಯ್ಯ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ, ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡಿ, ಅವರಿಗೆ ಸಂಪೂರ್ಣ ಬೆಂಬಲ ಹಾಗೂ ಸಹಕಾರದ ಆಶ್ವಾಸನೆಯನ್ನು ಕೊಟ್ಟು, ಪಕ್ಷವನ್ನು ಸದೃಢವಾಗಿ ಕಟ್ಟುವಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎನ್ನುವ ಸಲಹೆಯನ್ನು ಕೂಡ ನೀಡಿದೆ. ಹದಿನಾಲ್ಕು ಅಂತಾರಾಷ್ಟ್ರೀಯ ರಗ್ಬಿ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ ತಿಮ್ಮಯ್ಯ ಅವರು ತಮ್ಮ ಎಲ್ಲಾ ಕೌಶಲ್ಯ ಹಾಗೂ ಅನುಭವಗಳನ್ನು ಬಳಸಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತಾರೆ ಎನ್ನುವ ಭರವಸೆ ಇದೆ.
 
 
img
img
img
img
 

Humble tributes to India's nightingale, Bharat Ratna LataMangeshkar, 06/02/2022

ಗಾನ ಕೋಗಿಲೆ #ಲತಾಮಂಗೇಶ್ಕರ್ ಅವರ ನಿಧನದ ಸುದ್ದಿ ಆಘಾತ ತಂದಿದೆ. ಹಲವು ಪೀಳಿಗೆಗಳ ಸಂಗೀತ ರಸಿಕರಿಗೆ ತಮ್ಮ ಹಾಡುಗಳ ಮಾಂತ್ರಿಕತೆಯಿಂದ ಮೋಡಿಮಾಡಿದ ಭಾರತ ರತ್ನಕ್ಕೆ ನನ್ನ ಅಶ್ರುನಮನಗಳು. My humble tributes to India's nightingale, Bharat Ratna #LataMangeshkar. She will forever live in our hearts through her songs ????????
 
 
img
 

Inauguration of the new party office in Ponnampet, Kodagu, 06/02/2022

Inauguration of the new party office in Ponnampet, Kodagu, on Saturday.
 
ಹೊಸದಾಗಿ ಕಾಂಗ್ರೆಸ್ ಪಕ್ಷದ ಪೊನ್ನಂಪೇಟ್ ಬ್ಲಾಕ್'ನ ವಲಯ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಭಾಗವಹಿಸಿದ ಸಂದರ್ಭ. ಈ ಭಾಗದ ಕಾಂಗ್ರೆಸ್ ಪಕ್ಷದ ಅತಿ ಹಿರಿಯ ನಾಯಕರಾದಂತಹ ಮನೆಯಪಂಡ ವಿಠಲ್ ಅಪ್ಪಯ್ಯ ಉದ್ಘಾಟಿಸಿದರು.
ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯರು, ಹಿರಿಯ ನಾಯಕರು, ಈ ಕಾರ್ಯಕ್ರಮದಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಿದರು. ಕಾಂಗ್ರೆಸ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಎಲ್ಲರು ಜೊತೆ ಸೇರಿ, ಹಿರಿಯರ ಮಾರ್ಗದರ್ಶನದಲ್ಲಿ, ಯುವಕರ ಸಹಯೋಗದೊಂದಿಗೆ, ಕಟ್ಟುವಂತ ದೃಢ ನಿರ್ಧಾರಗಳನ್ನು ಕೈಗೊಳ್ಳಲಾಯಿತು.