Cricket tournament in Ponnampet, 17/02/2022

ಪೊನ್ನಂಪೇಟೆಯಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯವನ್ನು ಉದ್ಘಾಟಿಸಿ, ಕ್ರೀಡಾಪಟುಗಳನ್ನು ಮತ್ತು ಅಲ್ಲಿ ಸೇರಿದ್ದ ಎಲ್ಲಾ ವೀಕ್ಷಕರನ್ನು ಭೇಟಿಮಾಡಿ ನನ್ನ ಕೆಲವು ಅನಿಸಿಕೆಗಳನ್ನು ಅವರ ಜೊತೆ ಹಂಚಿಕೊಂಡ ಸಂದರ್ಭ.
 
 
img
img
img
 

Visit to Sri Durga Bhagavati Temple in Madikeri , 13/02/2022

ಮಡಿಕೇರಿಯ ಕಾಟಗೇರಿಯಲ್ಲಿರುವ ಶ್ರೀ ದುರ್ಗಾಭಗವತಿ ದೇವಸ್ಥಾನಕ್ಕೆ ನನ್ನ ಧರ್ಮಪತ್ನಿ ಜೊತೆ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದೆವು.
ದೇವಸ್ಥಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನಮ್ಮನ್ನು ಬರಮಾಡಿಕೊಂಡು ನಮಗೆ ಶ್ರೀಕ್ಷೇತ್ರದ ಮಹತ್ವದ ಬಗ್ಗೆ ವಿವರಿಸಿದರು.
 
 
 

Honoured by Kodava Samaja Bengaluru, 12/02/2022

ಬಂದೂಕು ಪರವಾನಗಿ ವಿನಾಯಿತಿ ಪ್ರಕರಣದಲ್ಲಿ, ಉಚ್ಚ ನ್ಯಾಯಾಲಯದ ಮುಂದೆ ನಾನು ಮಂಡಿಸಿದ ವಾದ ಹಾಗೂ ಪ್ರಕರಣದಲ್ಲಿ ನಾನು ವಹಿಸಿದ ಪಾತ್ರವನ್ನು ಗುರುತಿಸಿ, ಕೊಡವ ಸಮಾಜ ಬೆಂಗಳೂರು ಅವರು, ಕೊಡವರ ಹೆಮ್ಮೆಯ ಪ್ರತೀಕವಾದ ಒಡಿ ಕತ್ತಿಯನ್ನು ನನಗೆ ಕಾಣಿಕೆಯ ರೂಪದಲ್ಲಿ ನೀಡಿ ಸನ್ಮಾನಿಸಿದ್ದಾರೆ. ನನ್ನ ಎಲ್ಲಾ ಪೂರ್ವಜರಿಗೆ, ಹಿರಿಯರಿಗೆ, ಕೊಡವ ಸಮಾಜ ಬೆಂಗಳೂರಿನ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ, ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಮತ್ತು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದೇ ಸಂದರ್ಭದಲ್ಲಿ, ಈ ಪ್ರಕರಣದಲ್ಲಿ ವಕಾಲತ್ತು ನಡೆಸಿದ ಎಲ್ಲಾ ವಕೀಲರನ್ನು ಸಮಾಜ ಗೌರವಿಸಿದೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು. ತಾಯಿ ಕಾವೇರಿಯ ಆಶೀರ್ವಾದ ಮತ್ತು ರಕ್ಷಣೆ ಎಲ್ಲರ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ.
 
 
img
 

God Koragajja gave me the fortune to cooperate with the construction of the barrier of Sri Koragajja Temple in Sampaje, 11/02/2022

ಸಂಪಾಜೆಯಲ್ಲಿ ಶ್ರೀ ಕೊರಗಜ್ಜ ದೇವಾಲಯದ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡುವ ಭಾಗ್ಯ ಕೊರಗಜ್ಜ ದೇವರು ನನಗೆ ಕಲ್ಪಿಸಿದರು. ಇತ್ತೀಚೆಗೆ ತಡೆಗೋಡೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
 
 
img
img
img
img
img
img
 

Glad to participate in the concluding ceremony of the Cricket tournament conducted by the Kaikeri Youth Club, 10/02/2022

I am glad to have participated in the concluding ceremony of the Cricket tournament conducted by the Kaikeri Youth Club. Only sports have the ability to unite people across all sections. It was a wonderfully organised and a very successful event. It is time to celebrate every form of diversity in our society.
 
ಕೈಕೇರಿ ಯೂತ್ ಕ್ಲಬ್ ಅವರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯ ವೀಕ್ಷಣೆಯಲ್ಲಿ ಪಾಲ್ಗೊಂಡು, ವಿಜೇತ ತಂಡ ಹಾಗೂ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಣೆ ಮಾಡಿದ ಸಂದರ್ಭ. ಎಲ್ಲಾ ಜನಾಂಗದ ಜನರನ್ನು ಒಟ್ಟುಗೂಡಿಸುವ ಶಕ್ತಿ ಇರುವುದು ಕ್ರೀಡೆಗೆ ಮಾತ್ರ. ನಮ್ಮಲ್ಲಿರುವ ವೈವಿಧ್ಯತೆಯನ್ನು ನಾವು ಮರೆಯಬಾರದು. ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಆಯೋಜಿಸಿದ್ದ ಕ್ಲಬ್'ಗು, ಕ್ರೀಡಾ ಮನೋಭಾವದಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆಗಳು.
 
img
img
img
img
img
img