Attended the National Advisory Committee meeting of All India National Congress Party Backward Classes Unit held at Bharat Jodo Bhavan of Bangalore KPCC office., 16/07/2025

ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಸಲಹಾ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ..
 
 
 
 

Today, along with the commission of Bhagamandala Nadagowda society, Kudpaje P Palangappa, met Honorable Chief Minister Shri Siddaramaiah and appealed for many important demands. Mainly, the Gowda Community Bhavan built in 1983 in Bhagamandala village has , 15/07/2025

ಇಂದು ಭಾಗಮಂಡಲ ನಾಡಗೌಡ ಸಮಾಜದ ಅಧ್ಯಕ್ಷರಾದ ಕುದ್ಪಾಜೆ ಪಿ ಪಳಂಗಪ್ಪರವರ ನಿಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಹಲವು ಪ್ರಮುಖ ಬೇಡಿಕೆಗಳಿಗೆ ಮನವಿ ಸಲ್ಲಿಸಲಾಯಿತು.ಪ್ರಮುಖವಾಗಿ, ಭಾಗಮಂಡಲ ಗ್ರಾಮದಲ್ಲಿ 1983 ರಲ್ಲಿ ನಿರ್ಮಿಸಿರುವ ಗೌಡ ಸಮುದಾಯ ಭವನದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದ್ದು, ಭಾಗಮಂಡಲ ಭಾಗದಲ್ಲಿ ಏಕೈಕ ಸಮುದಾಯ ಭವನ ಇದಾಗಿದೆ. ಗೌಡ ಸಮಾಜ ಮತ್ತು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನವಾಗಿ ಸಮುದಾಯ ಭವನದ ನಿರ್ಮಿಸಲು ಅನುದಾನ ಮಂಜೂರು ಮಾಡಲು ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಅನುದಾನ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದರು. ಈ ನಿಯೋಗದಲ್ಲಿ, ಗೌಡ ಸಮಾಜದ ಪ್ರಮುಖರಾದ ಹೊಸೂರು ಸತೀಶ್ ಜೋಯಪ್ಪ, ಪ್ರಕಾಶ್ ಕುದ್ಪಾಜೆ, ದೇವಂಗೋಡಿ ಹರ್ಷ, ಕುಯ್ಯಮುಡಿ ರಂಜು ನಿಡ್ಯಮಲೆ ರವಿ, ಕುದ್ಪಾಜೆ ಗಗನ್, ನಿಡ್ಯಮಲೆ ದಾಮೋದರ, ಅಮೆ ಹರೀಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
 
 
 
 
 

Met the Honorable Revenue Minister of Karnataka State Government Shri Krishna Biregowda and requested to bring amendment to some bills of the Revenue Department, 14/07/2025

ಕರ್ನಾಟಕ ರಾಜ್ಯ ಸರಕಾರದ ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರನ್ನು ಭೇಟಿ ಮಾಡಿ ಕಂದಾಯ ಇಲಾಖೆಯ ಕೆಲವು ಮಸೂದೆಗಳಿಗೆ ತಿದ್ದುಪಡಿ ತರುವಂತೆ ಮನವಿ ಸಲ್ಲಿಸಲಾಯಿತು.ವಿಶೇಷವಾಗಿ, ಕೊಡಗಿನವರ ಜಮ್ಮಬಾಣೆಗೆ ಕಂದಾಯ ನಿಗದಿ, ಪಟ್ಟೇದಾರರ ಸಮಸ್ಯೆ ಮತ್ತು ಪಹಣಿ ಪತ್ರದಲ್ಲಿ P ನಂಬರ್ ಗಳ ಸಮಸ್ಯೆಯನ್ನ ನಿವಾರಣೆ ಮಾಡಲು ಸೂಕ್ತ ತಿದ್ದುಪಡಿಯನ್ನು ಕರ್ನಾಟಕ ಕಂದಾಯ ಕಾಯ್ದೆ 1964 ಕ್ಕೆ ತರಬೇಕೆಂದು ಮಾನ್ಯ ಕಂದಾಯ ಸಚಿವರಲ್ಲಿ ಮನವಿ ಮಾಡಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಕಂದಾಯ ಸಚಿವರು, ಮುಂಬರುವ ಮುಂಗಾರು ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿಯನ್ನು ತರಲಾಗುವುದೆಂಬ ಭರವಸೆಯನ್ನು ನೀಡಿದರು
 
 
 
 
 

Today, took the final darshan of Shri Kalyatanda B Ganapathi, the editor of Star of Mysore newspaper and consoled his family, 13/07/2025

ಇಂದು ದೈವಾಧೀನರಾದ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಸಂಪಾದಕರಾದ ಶ್ರೀ ಕಲ್ಯಾಟಂಡ ಬಿ ಗಣಪತಿಯವರ ಅಂತಿಮ ದರ್ಶನ ಪಡೆದು, ಅವರ ಮನೆಯವರಿಗೆ ಸಾಂತ್ವನ ಹೇಳಲಾಯಿತು
 
 
 
 
 

Famous journalist, Mysore Mitra and Editor of Star of Mysore newspaper, our Kodagu district who served excellent service in journalism The news of Kalyatanda B Ganapathi's demise is very sad. May the Lord rest his soul in eternal peace, 13/07/2025

ಪತ್ರಿಕಾರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಹೆಸರಾಂತ ಪತ್ರಕರ್ತರು, ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಸಂಪಾದಕರು, ನಮ್ಮ ಕೊಡಗು ಜಿಲ್ಲೆಯವರಾದ ಕಲ್ಯಾಟಂಡ ಬಿ ಗಣಪತಿ ಯವರ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಕೋರುತ್ತೇನೆ.
ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಅವರ ಕುಟುಂಬ ವರ್ಗಕ್ಕೆ ಹಾಗೂ ಅಪಾರ ಬಂಧು– ಮಿತ್ರರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ