Visited Sri Govindaswamy Temple in Nadikeri, 06/11/2021
ನಡಿಕೇರಿಯ ಶ್ರೀ ಗೋವಿಂದಸ್ವಾಮಿ ದೇವಸ್ಥಾನಕ್ಕೆ ಭೇಟಿಕೊಟ್ಟು ನಾಡಿನ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯವಾದ ಕೆಲವು ಸಾಮಗ್ರಿಗಳನ್ನೂ ಸನ್ನಿಧಾನಕ್ಕೆ ಅರ್ಪಿಸುವ ಅವಕಾಶ ನನಗೆ ಒದಗಿ ಬಂದದ್ದು ಸೌಭಾಗ್ಯವೇ ಸರಿ. ????????????













Hearty congratulations to Rohan Bopanna, proud tennis of Kodagu, 31/10/2021
ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಕೊಡಗಿನ ಹೆಮ್ಮೆಯ ಟೆನ್ನಿಸ್ ಪಟು ರೋಹನ್ ಬೋಪಣ್ಣ ಅವರಿಗೆ ಹಾರ್ದಿಕ ಶುಭಾಶಯಗಳು. ಇತರ ಎಲ್ಲಾ ಪ್ರಶಸ್ತಿ ವಿಜೇತರಿಗೂ ಅಭಿನಂದನೆಗಳು. #ರಾಜ್ಯೋತ್ಸವ #RajyotsavaAward

RIP Puneeth Rajkumar, 29/10/2021
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಪುನೀತ್ ರಾಜಕುಮಾರ್ ನಿಧನದ ಸುದ್ದಿ ಆಘಾತ ತಂದಿದೆ. ಅವರ ಮನೆಯವರು, ಸ್ನೇಹಿತರು ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ. I am extremely saddened by the death of actor Puneeth Rajkumar, a great actor and a humble human being. I pray for his soul to rest in peace.

Met the Kodagu District Collector to discuss the court order to transfer revenue department lands and revenue entries to the forest department, 24/10/2021
ಶನಿವಾರ ಒಂದು ನಿಯೋಗದೊಂದಿಗೆ ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಈಗ ನಡೆಯುತ್ತಿರುವಕಂದಾಯ ಇಲಾಖೆಯ ಜಾಗಗಳ ಸರ್ವೇ ಕಾರ್ಯ ಹಾಗೂ ರೆವೆನ್ಯೂ ನಮೂದನೆಗಳನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಬೇಕು ಎನ್ನುವ ನ್ಯಾಯಾಲಯದ ಆದೇಶದ ಬಗ್ಗೆ ಚರ್ಚೆ ನಡೆಸಿದೆವು. ಈ ವಿಷಯದಲ್ಲಿ ನ್ಯಾಯಾಲಯದ ತೀರ್ಪು ಜನರ ಹಿತದಲ್ಲಿ ಇಲ್ಲ. ಇದಕ್ಕೆ ಕಾರಣ ಸರ್ಕಾರ ವಿಷಯದ ಎಲ್ಲಾ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸದೆ ಇರುವುದು. ಆದ ಕಾರಣ, ಸರ್ಕಾರ ವಿಷಯವಾಗಿ ಪುನರ್-ಪರಿಶೀಲನಾ ಅರ್ಜಿ (Review Petition) ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ಕೂಡ ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕಾರಣ ಅವರು ಸರ್ಕಾರಕ್ಕೆ ಮನವರಿಕೆ ಮಾಡಿ ಪುನರ್-ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು ಎಂದು ಒತ್ತಾಯ ಮಾಡಿದ್ದೇವೆ. C ಮತ್ತು D ಜಾಗಗಳನ್ನು ಅರಣ್ಯ ಇಲಾಖೆಗೆ ವರ್ಗಾವಣೆಯಾಗಿದ್ದನ್ನು ಹಿಂಪಡೆದು ಆದೇಶ ಮಾಡಲಾಗಿತ್ತು. ಇದನ್ನು ಕೋರ್ಟ್ ಮುಂದೆ ಪ್ರಸ್ತಾಪಿಸಿಲ್ಲ. ಎರಡನೆಯದಾಗಿ ಈ ಹಿಂದಿನ ಜಿಲ್ಲಾಧಿಕಾರಿಗಳು ಲ್ಯಾಂಡ್ ರೆವೆನ್ಯೂ ಕಾಯ್ದೆ ಪ್ರಕಾರ ಈ ಜಮೀನುಗಳನ್ನು ಅರಣ್ಯ ಎಂದು ನಮೂದಿಸುವ ಬದಲು ಲ್ಯಾಂಡ್ ಬ್ಯಾಂಕ್ ಎಂದು ನಮೂದಿಸಬೇಕೆಂದು ಆದೇಶ ಮಾಡಿದ್ದರು. ಇದನ್ನೂ ಕೂಡ ಸರ್ಕಾರ ನ್ಯಾಯಾಲಯದ ಮುಂದೆ ತಿಳಿಸಲು ವಿಫಲವಾಗಿದೆ. ಇದರೊಂದಿಗೆ ಸಾವಿರಾರು ಸಣ್ಣ ಹಿಡುವಳಿದಾರರಿಗೆ ಒಂದು ನೋಟಿಸ್ ಕೂಡ ಜಾರಿಮಾಡದೆ, ಕಾನೂನಿನ ಅನೇಕ ಅಂಶಗಳನ್ನು ಕೋರ್ಟ್ ಗಮನಕ್ಕೆ ತರದೆ, ಅವರೆಲ್ಲರನ್ನೂ ಸಂಕಷ್ಟಕ್ಕೆ ದೂಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ನಮ್ಮ ಅರ್ಜಿಯಲ್ಲಿ ಇನ್ನು ಹಲವು ವಿಷಯಗಳನ್ನು ಮನವರಿಕೆ ಮಾಡಿ ಪುನರ್-ಪರಿಶೀಲನಾ ಅರ್ಜಿ ಶೀಘ್ರ ಸಲ್ಲಿಸುವಂತೆ ಒತ್ತಾಯ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಈ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ಧನ್ಯವಾದಗಳು. ನಮ್ಮ ನಿಯೋಗದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜಾ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್, ಸೂರಜ್ ಹೊಸೂರ್, ಸ್ಥಳೀಯ ಹಿರಿಯರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಎಲ್ಲರಿಗೂ ಧನ್ಯವಾದಗಳು.

Participated in the state level coconut shooting competition organised by Nalnad Planters Recreation Association in Napoklu, 24/10/2021
ನಾಲ್ನಾಡ್ ಪ್ಲಾಂಟರ್ಸ್ ರೇಕ್ರಿಯೇಷನ್ ಅಸ್ಸೊಸಿಯೇಶನ್ ಅವರು ನಪೋಕ್ಲು ವಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡಿದ್ದೆ. ನಮ್ಮ ಕೊಡಗಿನ ಸಾಂಪ್ರದಾಯಿಕ ಕ್ರೀಡೆಗಳನ್ನು ಪ್ರೋತ್ಸಾಹ ಮಾಡುತ್ತಿರುವ ಆಯೋಜಕರಿಗೂ, ಸ್ಪರ್ಧೆಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೂ, ವಿಜೇತರಿಗೂ ಅಭಿನಂದನೆಗಳು.








