We hold the key to shaping our lives and building our future, 29/08/2022
ನಮ್ಮ ಜೀವನವನ್ನು ರೂಪಿಸುವ ಶಕ್ತಿ ಇರುವುದು ಬೇರೆಯವರ ಕೈಯಲಲ್ಲ. ನಮ್ಮ ಭವಿಷ್ಯ ರೂಪಿಸುವ ಶಕ್ತಿ ಇರುವುದು ನಮಗೆ ಮಾತ್ರ. ಅದಕ್ಕೆ ನಾವು ವ್ಯಯಿಸಬೇಕಿರುವುದು ನಮ್ಮ ಶ್ರಮ.
ನಮ್ಮ ತಂದೆ-ತಾಯಿ ಹೆಸರಿನಲ್ಲಿ ಶ್ರೀ ಎ.ಕೆ.ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್ ಸ್ಥಾಪಿಸಿ, ಎರಡನೇ ವರ್ಷ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮದಲ್ಲಿ ಅವರನ್ನು ಉದ್ದೇಶಿಸಿ ಈ ಮೇಲಿನ ಮಾತುಗಳನ್ನು ಹೇಳಿದೆ. ಈ ವರ್ಷ ಟ್ರಸ್ಟ್ ನ ವತಿಯಿಂದ ಮತ್ತು ಪ್ರಯೋಜಕರ ಸಹಭಾಗಿತ್ವದಲ್ಲಿ 67 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾಲೇಜಿಗೆ ಹೋಗಿ ಉತ್ತಮ ಶಿಕ್ಷಣ ಪಡೆಯುವುದು ಎಷ್ಟು ಮುಖ್ಯವೋ, ಸಮಾಜದ ಆಗುಹೋಗುಗಳನ್ನು ಅರಿತು, ರಾಜಕೀಯ, ಸಾಮಾಜಿಕ ವಿಷಯಗಳನ್ನು ತಿಳಿದುಕೊಳ್ಳುವುದು ಕೂಡ ಮುಖ್ಯ. ಮಹಾತ್ಮ ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರ ಜೀವನದ ಬಗ್ಗೆ ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಆದರ್ಶಗಳನ್ನು ತಿಳಿಯಬೇಕು, ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ತಿಳಿಹೇಳಿದೆ.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Students #Scholarship

Scholarships distributed to 67 girl students in Kodagu, 28/08/2022
ಶ್ರೀ ಎ. ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್ ವತಿಯಿಂದ ಕೊಡಗಿನ 67 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮದ ವಿವರಗಳು ಪತ್ರಿಕೆಗಳಲ್ಲಿ ವರದಿಯಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಈ ಕಾರ್ಯಕ್ರಮಕ್ಕೆ ನಮ್ಮ ಟ್ರಸ್ಟ್ ಜೊತೆ ಕೈಜೋಡಿಸಿದ ಕೊಡಗಿನ ಮುಖ್ಯ ದಿನಪತ್ರಿಕೆಯಾದ ಶಕ್ತಿ ದಿನಪತ್ರಿಕೆಗೆ ನನ್ನ ಧನ್ಯವಾದಗಳು. ಇ-ವಿಧ್ಯಾ ಮತ್ತು ದಿ ಭಟ್ಸ್ ಡೆಂಟಲ್ ಪ್ರಾಕ್ಟೀಸ್ ಸಂಸ್ಥೆಗಳು ಕೂಡ ನಮ್ಮ ಜೊತೆ ಭಾಗಿಯಾಗಿದ್ದರು. ಅವರುಗಳಿಗೂ ಧನ್ಯವಾದಗಳು.
ಈಗಾಗಲೇ ಪಿಯುಸಿ ಮುಗಿಸಿ ಡಿಗ್ರಿ ಸೇರಿರುವ, ಶಿಕ್ಷಣ ಪಡೆಯಲು ಆರ್ಥಿಕ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಮೂರು ವರ್ಷಗಳ ಕಾಲ ವರ್ಷಕ್ಕೆ ತಲಾ ರೂ.10,000 ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ನಮ್ಮ ಟ್ರಸ್ಟ್ ನ ಈ ಕೆಲಸದಲ್ಲಿ ನೇರವಾಗಿ, ಪರೋಕ್ಷವಾಗಿ ಸಹಕರಿಸಿದ ಮತ್ತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Students #Scholarship

AS Ponnanna to distribute scholarship through AK Subbaiah - Ponnamma Trust today, 27/08/2022
ಇಂದು, ಶ್ರೀ ಎ. ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್ ವತಿಯಿಂದ ಕೊಡಗಿನ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ತಂದೆ ಎ.ಕೆ.ಸುಬ್ಬಯ್ಯ ಅವರ ಪುಣ್ಯ ಸ್ಮರಣೆಯ ದಿನ ಈ ಕಾರ್ಯಕ್ರಮ ಜರಗುತ್ತಿದೆ.
ಈ ಸದುದ್ದೇಶದ ಕಾರ್ಯಕ್ಕೆ ನಮ್ಮ ಜೊತೆ ಕೈಜೋಡಿಸಿದ ಶಕ್ತಿ ದಿನಪತ್ರಿಕೆ, ಇ-ವಿಧ್ಯಾ ಮತ್ತು ದಿ ಭಟ್ಸ್ ಡೆಂಟಲ್ ಪ್ರಾಕ್ಟೀಸ್ ಅವರುಗಳಿಗೆ ಧನ್ಯವಾದಗಳು. ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಶ್ರಮ ವಹಿಸಿದ ಶಕ್ತಿ ದಿನಪತ್ರಿಕೆ ಬಳಗಕ್ಕೆ ವಿಶೇಷ ಧನ್ಯವಾದಗಳು.
ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Students #Scholarship

Visit to Sri Kadapalappa Swamy temple in Cherambane, 25/08/2022
ಚೇರಂಬಾಣೆ ಬಳಿಯ ಶ್ರೀ ಕಡಪಾಲಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ. ದೇವರಲ್ಲಿ ಸಮಸ್ತ ಜನತೆಯ ಕ್ಷೇಮಕ್ಕೆ ಪ್ರಾರ್ಥಿಸಿದೆ.
ಸುಂದರ ಪರಿಸರದಲ್ಲಿ ನೆಲೆ ನಿಂತಿರುವ ಸ್ವಾಮಿಯ ದರ್ಶನ ಪಡೆದಿದ್ದು ನನ್ನ ಸೌಭಾಗ್ಯ.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Temple #Cherambane

Inspection of the poorly constructed flyover at Bhagamandala, 23/08/2022
ಕೆಲ ದಿನಗಳ ಹಿಂದೆ ಭಾಗಮಂಡಲದಲ್ಲಿ ತೀರ ಕಳಪೆ ಕಾಮಗಾರಿ ಉಪಯೋಗಿಸಿ ಮೇಲ್ಸೇತುವೆ ನಿರ್ಮಾಣ ಮಾಡಿರುವ ವಿಚಾರ ತಿಳಿದು ಅದನ್ನು ಪರಿಶೀಲಿಸಿದೆ. ಜಿಲ್ಲೆಯ ಜನರ ಹಿತಕ್ಕಿಂತ 40% ಕಮಿಷನ್ ತಿನ್ನುವುದೇ ಉದ್ದೇಶವಾಗಿರುವುದರಿಂದ ಈ ರೀತಿಯ ಕಾಮಗಾರಿ ನಡೆದಿದೆ.
ಆಡಳಿತ ಮಾಡುತ್ತಿರುವವರ ಸ್ವ-ಹಿತಾಸಕ್ತಿ ಎಲ್ಲೆಲ್ಲೂ ಜನರ ಬದುಕಿಗೆ ತೊಂದರೆ ಕೊಡುತ್ತಿದೆ. ಮೇಲ್ಸೇತುವೆ ಕಾಮಗಾರಿ ಒಂದೇ ಅಲ್ಲ. ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿಯುವ ಎಲ್ಲಾ ಸರ್ಕಾರಿ ಕೆಲಸಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಇದರ ಜೊತೆಗೆ ಜಿಲ್ಲೆಗೆ ಮಲತಾಯಿ ಧೋರಣೆ ತೋರಿಸಿ ಮಳೆ ಮತ್ತು ಪ್ರವಾಹದಿಂದ ತೊಂದರೆಯಾದವರಿಗೆ ಪರಿಹಾರ ಕೊಡುವುದಕ್ಕು ಸರ್ಕಾರ ಮುಂದಾಗುತ್ತಿಲ್ಲ. ಇದನ್ನು ಕೇಳಲು ಇಲ್ಲಿನ ಶಾಸಕರಿಗೆ ಬಾಯಿಲ್ಲ. ಕೊಡಗಿಗೆ ಇವರಿಂದ ಮುಕ್ತಿ ಕೊಡಿಸಬೇಕಿದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Floods #Rains #Landslides #Bhagamandala #Flyover
