Participated as a chief guest in the coconut shooting competition held in Kadanga village, 12/11/2021
ಕಡಂಗ ಗ್ರಾಮದಲ್ಲಿ ನಡೆದ ತೆಂಗಿನಕಾಯಿ ಶೂಟಿಂಗ್ ಸ್ಪರ್ದೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಸಂತಸ ತಂದಿದೆ. ಈ ಸಂದರ್ಭದಲೀ ಗ್ರಾಮಸ್ಥರು ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಆಚರಣೆಯನ್ನು ಮುಂದುವರೆಸಿಕೊಂಡು ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಿದೆ. ನಮ್ಮ ಮುಂದಿನ ಪೀಳಿಗೆಗಳಿಗೆ ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಪರಿಚಯಿಸುವ ಕರ್ತವ್ಯ ಮತ್ತು ಹೊಣೆಗಾರಿಕೆ ನಮ್ಮ ಮೇಲಿದೆ. ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ಅತೀ ಹೆಚ್ಚು ಪ್ರೀತಿ ವಿಶ್ವಾಸದಿಂದ ಕಂಡಂಥ ಎಲ್ಲಾ ಹಿರಿಯರಿಗೆ, ಗ್ರಾಮಸ್ಥರಿಗೆ ಮತ್ತು ನನ್ನ ಎಲ್ಲಾ ಸ್ನೇಹಿತರಿಗೆ ನನ್ನ ಆತ್ಮೀಯವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.










Visited the community building being constructed at Mayamudi Madikebedu, 12/11/2021
ಮಾಯಮುಡಿಯ ಮಡಿಕೇಬೇಡು ಗ್ರಾಮಸ್ಥರ ಕೋರಿಕೆಯ ಮೇರೆಗೆ ಅಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನವನ್ನು ವೀಕ್ಷಣೆ ಮಾಡಿದೆ. ಸರ್ಕಾರ ನೀಡಿರುವ ಅನುದಾನ ಇನ್ನು ಕೂಡ ಬಿಡುಗಡೆಯಾಗದ ಕಾರಣ ಕಟ್ಟಡದ ಕಾಮಗಾರಿ ಸ್ಥಗಿತಗೊಂಡಿದೆ. ಸರ್ಕಾರದ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದೇನೆ.






Joint press conference on bitcoin scam with former minister Priyank Kharge, 12/11/2021
ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜೊತೆ ಬಿಟ್ ಕಾಯಿನ್ ಹಗರಣದ ಬಗ್ಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಬಿಟ್ಕಾಯಿನ್ ಹಗರಣ ಕರ್ನಾಟಕ ರಾಜ್ಯ ಕಂಡ ಅತಿ ದೊಡ್ಡ ಹಗರಣ. ಭಾರತದ ಅತಿ ದೊಡ್ಡ ಬಿಟ್ಕಾಯಿನ್ ಹಗರಣ. ಜನರ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಲೇಬೇಕು. ಪೊಲೀಸ್ ಇಲಾಖೆ ಮತ್ತು ಸರ್ಕಾರದ ದಾಖಲೆಗಳ ಆಧಾರದ ಮೇಲೆ ನಾವು ಕೇಳಿರುವ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಲಿ.




Heartfelt congratulations to Padmashree Shri M. P. Ganesh, 08/11/2021
ಕೊಡಗಿನ ಹೆಮ್ಮೆಯ ಪುತ್ರ, ಭಾರತ ಹಾಕಿ ತಂಡದ ಮಾಜಿ ನಾಯಕ, ಒಲಂಪಿಕ್ಸ್ ಪದಕ ವಿಜೇತ, ಅರ್ಜುನ ಪ್ರಶಸ್ತಿ ಪುರಸ್ಕೃತ, ಶ್ರೀ ಎಂ.ಪಿ.ಗಣೇಶ್ ಅವರಿಗೆ ಇಂದು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ದಿನ. ಎಂ.ಪಿ.ಗಣೇಶ್ ಅವರಿಗೆ ನಲ್ಮೆಯ ಅಭಿನಂದನೆಗಳು ????????????

Inauguration of the newly established Savita Samaja Sangha at Gonikoppaluvi of Ponnampet Taluk, 07/11/2021
ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲುವಿನಲ್ಲಿ ನೂತನವಾಗಿ ಸ್ಥಾಪಿಸಿರುವ ಸವಿತಾ ಸಮಾಜ ಸಂಘದ ಉದ್ಘಾಟನೆಯಲ್ಲಿ ಪಾಲ್ಗೊಂಡ ಕ್ಷಣ. ಸವಿತಾ ಸಮಾಜದ ಮುಖಂಡರು, ಹಿರಿಯರು ಹಾಗೂ ಹಿತೈಷಿಗಳು ಪಾಲ್ಗೊಂಡ ಸಭೆಯಲ್ಲಿ ಸಮಾಜದ ಏಳಿಗೆಗೆ ಬೇಕಾದ ಬೆಂಬಲ ನೀಡುವುದಾಗಿ ತಿಳಿಸಿದೆ. ನೂತನ ಸಂಘಕ್ಕೆ ನನ್ನ ಅಭಿನಂದನೆಗಳು.





