Addressing Pragati Auto Drivers and Owners Association, APMC, Gonikoppa, 28/01/2022

Best wishes to Pragati Auto Drivers and Owners Association, APMC, Gonikoppa. ಗೋಣಿಕೊಪ್ಪಲು ಎಪಿಎಂಸಿ ಆವರಣದಲ್ಲಿ ನೂತನವಾಗಿ ಸ್ಥಾಪನೆಯಾದ ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಉದ್ಘಾಟನೆಯನ್ನು ಹಲವು ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ನೆರವೇರಿಸಿದ ಸಂದರ್ಭ. ಸಂಘದ ಅಧ್ಯಕ್ಷರಾದ ಎಂ.ಎನ್.ಪ್ರಕಾಶ್, ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ನನ್ನ ಅಭಿನಂದನೆಗಳು.
 
 
img
img
img
img
 

Visit to Sampaje, 27/01/2022

During my visit to Sampaje, I prayed at the Panchalingeshwara Temple and Chedavu Koragajja Daivasthana.
ಸಂಪಾಜೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಚೆಡಾವು ಕೊರಗಜ್ಜ ದೈವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದೆ. ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಜೊತೆಗಿದ್ದರು.
 
asp
asp
asp
asp
asp
asp

With locals of Virajapete, Birunani Panchayat, Kotiyala, Badagarakeri village, 18/01/2022

ವಿರಾಜಪೇಟೆಯ, ಬಿರುನಾನಿ ಪಂಚಾಯತ್, ಕೋಟಿಯಾಲ, ಬಾಡಗರಕೇರಿ ಗ್ರಾಮದ ಸ್ಥಳೀಯರು ಕುಡಿಯುವ ನೀರಿನ ಅಭಾವದಿಂದ ಸಂಕಷ್ಟದಲ್ಲಿದ್ದು, ಸಮಸ್ಯೆ ಬಗೆಹರಿಸಲು ನನ್ನಲ್ಲಿ ಕೇಳಿಕೊಂಡಿದ್ದರು. ಡಿಸೆಂಬರ್ 29 ನೇ ತಾರೀಕು ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿ ಬೋರ್'ವೆಲ್ ನಿಂದ ಕುಡಿಯುವ ನೀರು ಒದಗಿಸುವ ಭರವಸೆ ಕೊಟ್ಟಿದ್ದೆ.
ಮೊನ್ನೆ ಜನವರಿ 16ಕ್ಕೆ, ಬೋರ್'ವೆಲ್ ಕೊರೆಯುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆದೃಷ್ಟ ಕೈಕೊಟ್ಟಿದೆ. 350 ಅಡಿ ಕೊರೆದರು ನೀರು ಸಿಕ್ಕಿಲ್ಲ. ಸ್ಥಳೀಯ ಜನರು ಎದೆಗುಂದಬಾರದು. ತಾಯಿ ಕಾವೇರಿ ಎಂದಿಗೂ ತನ್ನ ಮಕ್ಕಳನ್ನು ಕಾಪಾಡುತ್ತಾಳೆ ಎಂಬ ನಂಬಿಕೆ ಇರಲಿ. ????????
 
img
img
img
img
img
 

2021 Chowri Cup Football and Hockey tournaments in Murnadu, 02/01/2022

ಇಂದು ಮೂರ್ನಾಡುವಿನಲ್ಲಿ 2021 ಸಾಲಿನ ಚೌರೀರ ಕಪ್ ಫುಟ್ಬಾಲ್ ಮತ್ತು ಹಾಕಿ ಪಂದ್ಯಾವಳಿಗಳ ಸಮಾರಂಭದಲ್ಲಿ ಪಾಲ್ಗೊಂಡು ಆಯೋಜಕರಿಗೂ, ಕ್ರೀಡಾಪಟುಗಳಿಗೂ ಶುಭ ಕೋರಿದೆ. ಚೌರೀರ ಕುಟುಂಬದವರು ಆಯೋಜಿಸಿರುವ ಕ್ರೀಡಾಕೂಟದಲ್ಲಿ 90 ಹಾಕಿ ತಂಡಗಳು ಹಾಗೂ ಐವತಕ್ಕೂ ಹೆಚ್ಚು ಫೂಟ್'ಬಾಲ್ ತಂಡಗಳು ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ. ಕೊಡಗು ಎಂದಿಗೂ ಕ್ರೀಡಾ ಪ್ರೋತ್ಸಾಹಕ್ಕೆ ಹೆಸರುವಾಸಿ. ಕೊಡಗಿನ ಸಂಸ್ಕೃತಿಯಲ್ಲೇ ಕ್ರೀಡೆ ಬೆರೆತುಹೋಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಅನೇಕ ಕೊಡಗಿನ ಕ್ರೀಡಾಪಟುಗಳು ಈ ರೀತಿಯ ಪಂದ್ಯಾವಳಿಗಳಿಂದಲೇ ಬೆಳೆದಿದ್ದು. ಈ ರೀತಿಯ ಕ್ರೀಡಾಕೂಟಗಳ ಆಯೋಜನೆಯಿಂದಲೇ ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ. ಕ್ರೀಡಾಪಟುಗಳಿಗೂ, ಆಯೋಜಕರಿಗೂ ಮತ್ತೊಮ್ಮೆ ನನ್ನ ಅಭಿನಂದನೆಗಳು.
 
ಭಾನುವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ನನಗೆ ಚೌರೀರ ಕುಟುಂಬದ ಅಧ್ಯಕ್ಷರಾದ ಚೌರೀರ ಕೆ.ಪೂವಯ್ಯ, ಅಂತಾರಾಷ್ಟ್ರೀಯ ಕ್ರೀಡಾಪಟು ತೀತಮಡ ಅರ್ಜುನ್ ದೇವಯ್ಯ, ಒಲಂಪಿಯನ್ ಅಂಜಪರವಂಡ ಬಿ.ಸುಬ್ಬಯ್ಯ, ಎಂ.ಎಲ್.ಸಿ ಮಂಡೇಪಂಡ ಸುಜಾ ಕುಶಾಲಪ್ಪ ಹಾಗೂ ಕೊಡವ ಮಕ್ಕಳ ಕೂಟದ ಅಧ್ಯಕ್ಷರಾದ ಬೊಳ್ಳಾಜೀರ ಅಯ್ಯಪ್ಪ ಅವರೊಂದಿಗೆ ವೇದಿಕೆ ಕಲ್ಪಿಸಿದ ಆಯೋಜಕರಿಗೆ ಧನ್ಯವಾದಗಳು.
 
 
img
img
img
img
img
img
img
img
img
img
img
img
img
img
img
 

Visited Ejuru Colony of Hathur Zone of Ponnampet Block, 30/12/2021

ಪೊನ್ನಂಪೇಟೆ ಬ್ಲಾಕ್'ನ ಹಾತೂರು ವಲಯ ಕುಂದ ಈಜೂರು ಕಾಲೋನಿಗೆ ಭೇಟಿಕೊಟ್ಟು ಸ್ಥಳೀಯ ಜನರ ಜೊತೆ ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಈ ಭೇಟಿಯ ವೇಳೆ, ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥರಾದ ಧರ್ಮಜ ಉತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಖಂಡರಾದ ಯಶ್ವಿನ್, ಕೊಲ್ಲೀರ ಬೋಪಣ್ಣ, ಕಾಡೆಮಾಡ ಕುಸುಮ, ಬಾನಂಡ ಪೃಥ್ವಿ, ಮುಕ್ಕಾಟೀರ ಸಂದೀಪ್, ಕೊಕ್ಕಂದ ರೋಷನ್, ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು, ಪ್ರತಿನಿಧಿಗಳು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು. ಈಜೂರು ಕಾಲೋನಿಯ ಜನರಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ಎಲ್ಲಾರೂ ಕಾರ್ಯೋನ್ಮುಖರಾಗಿದ್ದಾರೆ.
 
 
img
img
img
img
img