The Legends Kabaddi tournament in Virajpet, 07/02/2023

The Legends Kabaddi tournament in Virajpet. ತೋರದಲ್ಲಿ ಕಬಡ್ಡಿ ಪಂದ್ಯಾವಳಿಯ ಉದ್ಘಾಟನೆ
 
ವಿರಾಜಪೇಟೆಯ ತೋರ ಗ್ರಾಮದಲ್ಲಿ ದಿ ಲೆಜೆಂಡ್ಸ್ ಸಂಸ್ಥೆಯವರು ಆಯೋಜಿಸಿದ್ದ ಮೂರನೇ ವರ್ಷದ ಟಿ.ಕೆ.ಪಿ.ಎಲ್ ಕಬಡ್ಡಿ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಆಟಗಾರರಿಗೆ ಮತ್ತು ಆಯೋಜಕರಿಗೆ ಶುಭ ಕೋರಿದೆ.
 
ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಈ ರೀತಿಯ ಪಂದ್ಯಾವಳಿಯನ್ನು ಉತ್ತೇಜಿಸುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಂಗಣ ಸೌಕರ್ಯಗಳನ್ನು ಒದಗಿಸುವುದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದೆ. ದೇಶದಲ್ಲೇ ಕ್ರೀಡೆಗೆ ಹೆಸರುವಾಸಿಯಾದ ಕೊಡಗು ಈ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಕ್ರೀಡಾ ಸೌಕರ್ಯಗಳನ್ನು ಗ್ರಾಮೀಣ ಮಟ್ಟದಲ್ಲೇ ಕಟ್ಟಬೇಕು ಎನ್ನುವುದು ನನ್ನ ಅಚಲ ವಾದ.
 
ಬಹಳ ಸ್ಪರ್ದಾತ್ಮಕವಾಗಿ ನಡೆದ ಕ್ರೀಡಾಕೂಟವನ್ನು ಆಯೋಜಿಸಿದ್ದ ದಿ ಲೆಜೆಂಡ್ಸ್ ಆಯೋಜಕರಿಗೂ ಮತ್ತು ಪಾಲ್ಗೊಂಡ ಎಲ್ಲಾ ಆಟಗಾರರಿಗೂ ನನ್ನ ಅಭಿನಂದನೆ ಮತ್ತು ಶುಭಾಶಯಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kotekoppa
 
 
img
 

AS Ponnanna's social work in January 2023, 07/02/2023

AS Ponnanna's social work in January 2023. ಜನವರಿ ತಿಂಗಳಲ್ಲಿ ಎ.ಎಸ್.ಪೊನ್ನಣ್ಣ ಅವರ ಸಾಮಾಜಿಕ ಕಾರ್ಯಕ್ರಮಗಳು
 
ಕಳೆದ ಕಾಲು ಶತಮಾನ ವಕೀಲಿ ವೃತ್ತಿಯಲ್ಲಿ ರಾಜ್ಯದ, ರಾಷ್ಟ್ರದ ಗಮನ ಸೆಳೆಯುವಂತ ನ್ಯಾಯಾಂಗ ಪ್ರಕರಣಗಳನ್ನು ನಿಭಾಯಿಸಿದ ಅಜ್ಜಿಕುಟ್ಟೀರ ಸುಬ್ಬಯ್ಯ ಪೊನ್ನಣ್ಣ (ಎ.ಎಸ್.ಪೊನ್ನಣ್ಣ) ಸದಾ ಸಮಾಜಮುಖಿಯಾಗಿ ಯೋಚಿಸುವವರು. ತಮ್ಮ ಮೂಲವನ್ನು ಎಂದೂ ಮರೆಯದ ಅವರು ಕಳೆದ ಹಲವಾರು ವರ್ಷಗಳಿಂದ ಕೊಡಗಿನಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕೀಯ ಪ್ರವೇಶಕ್ಕೂ ಮುಂಚಿನಿಂದಲೂ ಅವರ ಸಮಾಜ ಸೇವೆ ಅನಿರತವಾಗಿ ನಡೆದಿದೆ. ಈ ವರ್ಷ ಜನವರಿ ತಿಂಗಳೊಂದರಲ್ಲೇ ಕೊಡಗಿನಾದ್ಯಂತ ಅವರ ಸಮಾಜಮುಖಿ ಕೆಲಸಗಳ ಒಂದು ಕಿರು ನೋಟ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kotekoppa
 
 
 

Remembering the legend Lata Mangeshkar, 06/02/2023

Remembering the legend Lata Mangeshkar. ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಸವಿ ನೆನಪು.
 
ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ತಮ್ಮ ಹಾಡುಗಳ ಮೂಲಕ ಸದಾ ನಮ್ಮೆಲ್ಲರ ನೆನಪಿನಲ್ಲಿ ಜೀವಂತ ಇರುವ ಸರ್ವಶ್ರೇಷ್ಠ ಕಲಾವಿದೆ. ಅವರು ಬದುಕಿದ್ದಾಗಲೂ ಜೀವಂತ ದಂತಕಥೆಯಾಗಿದ್ದವರು. ನಂತರವೂ ಹಲವಾರು ಪೀಳಿಗೆಯ ಸಂಗೀತ ರಸಿಕರನ್ನು ರಂಜಿಸುತ್ತಿದ್ದಾರೆ. ನಿಜ ಅರ್ಥದಲ್ಲಿ ಭಾರತ ರತ್ನವಾಗಿದ್ದ ಅವರ ಪುಣ್ಯಸ್ಮರಣೆಯ ದಿನ ಅವರ ಕೋಟ್ಯಂತರ ಅಭಿಮಾನಿಗಳೊಂದಿಗೆ ಅವರನ್ನು ನೆನೆಯುತಿದ್ದೇನೆ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Chiniwada #Gonikoppa #Shivakeri #Chennayyanakote #Pollibetta #Devapura #Amangeri #Kunda #KodavaSong
 
 
img
 

National-level Football tournament inaugurated, 06/02/2023

National-level Football tournament inaugurated. ರಾಷ್ಟ್ರಮಟ್ಟದ ಫುಟ್ಬಾಲ್ಲ ಪಂದ್ಯಾವಳಿ ಉದ್ಘಾಟನೆ
 
ಕೋಟೆಕೊಪ್ಪದ ವಿ.ವೈ.ಸಿ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ರಾಷ್ಟಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ, ಕ್ರೀಡಾಪಟುಗಳು ಮತ್ತು ಆಯೋಜಕರನ್ನು ಉದ್ದೇಶಿಸಿ ಮಾತನಾಡಿದೆ. ಸತತವಾಗಿ ಮೂರನೇ ವರ್ಷ ಈ ಪಂದ್ಯಾವಳಿಯನ್ನು ಆಯೋಜಿಸಿರುವುದು ಹೆಮ್ಮೆಯ ವಿಚಾರ.
 
ಮೂರು ದಿನಗಳ ಕಾಲ ದೇವನಗೇರಿ ಶಾಲಾ ಮೈದಾನದಲ್ಲಿ ನಡೆದ ಈ ಪಂದ್ಯಾವಳಿಯನ್ನು ವೀಕ್ಷಿಸಲು ಸೇರಿದ್ದ ಜನ ಸಮೂಹ ಇದರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಸ್ಪರ್ದಾತ್ಮಕ ಪಂದ್ಯಗಳಲ್ಲಿ ಕ್ರೀಡಾಮನೋಭಾವದಿಂದ ಪಾಲ್ಗೊಂಡ ತಂಡಗಳ ಪ್ರದರ್ಶನ ವೀಕ್ಷಿಸಿದ್ದು ಸಂತಸ ತಂದಿದೆ.
 
ಬಹಳ ಶ್ರದ್ಧೆಯಿಂದ ಪಂದ್ಯಾವಳಿಯನ್ನು ಆಯೋಜಿಸಿದ್ದ ಕ್ಲಬ್ ನ ಆಯೋಜಕ ಸದಸ್ಯರಿಗೂ, ಪಾಲ್ಗೊಂಡ ಕ್ರೀಡಾಪಟುಗಳು ಹಾಗೂ ಪ್ರೇಕ್ಷಕರಿಗೂ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kotekoppa
 
 
img
 

Inaugurated the Srimangala Friends Cup Cricket Tournament, 05/02/2023

Inaugurated the Srimangala Friends Cup Cricket Tournament. ಶ್ರೀಮಂಗಲದಲ್ಲಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
 
ಕೊಡಗಿನ ಶ್ರೀಮಂತ ಕ್ರೀಡಾ ಪರಂಪರೆಯನ್ನು ಮುಂದುವರೆಸುತ್ತಿರುವ ಹಲವಾರು ಕ್ರೀಡಾ ಕಾರ್ಯಕ್ರಮಗಳಲ್ಲಿ ಶ್ರೀಮಂಗಲ ಫ್ರೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿ ಕೂಡ ಒಂದು. ಈ ಪಂದ್ಯಾವಳಿಯನ್ನು ಉದ್ಘಾಟಿಸಿ, ಆಯೋಜಕರು ಹಾಗೂ ಕ್ರೀಡಾಪಟುಗಳೊಂದಿಗೆ ಬೆರೆತು ಮಾತನಾಡಿ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಒದಗಿ ಬಂತು.
 
ಸ್ವಯಂ ಪ್ರೇರಣೆಯಿಂದ ಸ್ಥಳೀಯ ಯುವಕರು ಆಯೋಜಿಸುವ ಇಂತಹ ಕ್ರೀಡಾಕೂಟಗಳಿಗೆ ಆಡಳಿತದಿಂದ ಕ್ರೀಡಾ ಮೂಲಸೌಕರ್ಯ ಒದಗಿಸುವ ಕೆಲಸ ಆಗಬೇಕಿದೆ. ಕೊಡಗು ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನ ಉಳಿಸಿಕೊಳ್ಳಲು ಇದು ಬಹಳ ಮುಖ್ಯವಾದ ವಿಚಾರ. ಇದಕ್ಕೆ ನಾನು ಬದ್ಧನಾಗಿದ್ದೇನೆ.
 
ಕ್ರೀಡಾಕೂಟವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದ ಬಳಗದ ಆಯೋಜಕರಿಗೂ, ಪಂದ್ಯಾವಳಿಯಲ್ಲಿ ಕ್ರೀಡಾಮನೋಭಾವದಿಂದ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ, ಪಂದ್ಯಗಳನ್ನು ವೀಕ್ಷಿಸಿದ ಕ್ರೀಡಾಭಿಮಾನಿಗಳಿಗೂ ಅಭಿನಂದನೆ ಮತ್ತು ಶುಭ ಹಾರೈಕೆಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Forest #Garbage
 
 
img