Thanks to the Forest Dept's efforts in preventing waste dumping, 03/02/2023

Thanks to the Forest Dept's efforts in preventing waste dumping. ಅರಣ್ಯ ಇಲಾಖೆಯ ಮೆಚ್ಚುವಂತ ಕಾರ್ಯ
 
ಕೊಡಗಿನ ಕಾಡುಗಳಲ್ಲಿ ಕೇರಳ ರಾಜ್ಯದಿಂದ ಅಕ್ರಮವಾಗಿ ತಂದು ಬಿಸಾಡುತ್ತಿದ್ದ ಕಸವನ್ನು ತಡೆದು ಅಪರಾಧಿಗಳನ್ನು ಬಂದಿಸಿದ ಬ್ರಹ್ಮಗಿರಿ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಡ್ಯಾನ್ಸಿ ದೇಚಮ್ಮ, ಮಾಕುಟ್ಟ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಸುಹಾನಾ ಮತ್ತು ಇತರೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಅಭಿನಂದನೆಗಳು.
 
ಅರಣ್ಯದ ಒಳಗೆ ಭಾರಿ ಪ್ರಮಾಣದಲ್ಲಿ ಕಸವನ್ನು ವಿಸರ್ಜನೆ ಮಾಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಅರಣ್ಯ ಮತ್ತು ಕಾಡು ಪ್ರಾಣಿಗಳಿಗೆ ಮಾತ್ರವಲ್ಲದೆ, ಪರಿಸರ ಹಾನಿಯಿಂದ ಪ್ರತಿಯೊಬ್ಬರಿಗೂ ತೊಂದರೆ ತಪ್ಪಿದ್ದಲ್ಲ. ಈ ರೀತಿಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ.
 
ಸಿಬ್ಬಂದಿ ಕೊರತೆ, ಪರ ರಾಜ್ಯಗಳಿಂದ ಬರುವ ಎಲ್ಲಾ ವಾಹನಗಳ ತಪಾಸಣೆ ನಡೆಸದಿರುವುದೇ ಇದಕ್ಕೆ ಕಾರಣವಾಗಿದೆ. ಕೊಡಗಿನ ಕಾಡುಗಳು ಸೂಕ್ಷ್ಮ ಪ್ರದೇಶಗಳು. ಇಲ್ಲಿನ ಮಳೆ, ನದಿ, ನೀರು, ಕಾಡು ಕೋಟ್ಯಂತರ ಜನರನ್ನು ಸಲಹುತ್ತದೆ. ಇದನ್ನು ಕಾಪಾಡುವುದು ಕೇವಲ ಕೊಡಗಿನ ಜನರ ಅಥವಾ ಅರಣ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಕರ್ನಾಟಕ ರಾಜ್ಯ ಸರ್ಕಾರ ಕೇರಳದ ಮೇಲೆ ಪ್ರಭಾವ ಬೀರಿ ಅಲ್ಲಿಂದ ಕಸ ಬರದಂತೆ ತಡೆಯಬೇಕು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Forest #Garbage
 
 
img
 

Tailors Association programme at Gonikoppa, 01/02/2023

Tailors Association programme at Gonikoppa. ಗೋಣಿಕೊಪ್ಪದಲ್ಲಿ ಟೈಲರ್ಸ್ ಅಸೋಸಿಯೇಷನ್ ಸಭೆ
 
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಅವರ ಗೋಣಿಕೊಪ್ಪ ವಲಯದ ಸಭೆಯ್ಲಲಿ ಭಾಗವಹಿಸಿ ಸಮಾಜದ ಹಿತಕ್ಕಾಗಿ ಒಗ್ಗೂಡಿರುವ ಅವರಿಗೆ ಅಭಿನಂದಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
 
ಸಂಘಟನೆ ಎಂಬುದು ನಮಗೆ ಸಂವಿಧಾನ ಕೊಟ್ಟಿರುವ ಹಕ್ಕು. ಯಾವುದೇ ವೃತ್ತಿಪರ ಸಂಘಟನೆಗಳು ಸಂಘಟಿತವಾಗಿ ತಮಗೆ ಅವಶ್ಯಕತೆಯಿರುವ ಸವಲತ್ತುಗಳನ್ನು ಕೇಳಿದರೆ ಆಡಳಿತ ಅದಕ್ಕೆ ಸ್ಪಂದಿಸುತ್ತದೆ. ಟೈಲರಿಂಗ್ ವೃತ್ತಿಯಲ್ಲಿ ನಿರತರಾಗಿರುವವರು ಈ ರೀತಿ ಸಂಘಟಿತರಾಗಿರುವುದು ಒಳ್ಳೆಯ ಬೆಳವಣಿಗೆ. ಸಂಘಟನೆಯ ಕಾನೂನು ರೀತಿಯ ಬೇಡಿಕೆಗಳು, ಹಕ್ಕೊತ್ತಾಯಗಳಿಗೆ ನನ್ನ ಸಂಪೂರ್ಣ ಬೆಂಬಲ ಸೂಚಿಸಿದ್ದೇನೆ.
 
ಕಾರ್ಯಕ್ರಮಕ್ಕೆ ನನ್ನನು ಆಹ್ವಾನಿಸಿ ಸಂಘಟನೆಯ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ನನ್ನ ಧನ್ಯವಾದಗಳು ಮತ್ತು ಅಭಿನಂದನೆಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Chiniwada #Gonikoppa #Shivakeri #Chennayyanakote #Pollibetta #Devapura #Amangeri #Kunda #KodavaSong
 
 
img
 

Inaugurated the Mekeri Premier Legue Season 3, 31/01/2023

Inaugurated the Mekeri Premier Legue Season 3. ಮೇಕೇರಿ ಕಪ್ ಕ್ರಿಕೆಟ್ ಪಂದ್ಯಾವಳಿ
 
ಮೇಕೇರಿ ಕ್ರಿಕೆಟರ್ಸ್ ಅವರು ಆಯೋಜಿಸಿದ್ದ ಮೂರನೇ ವರ್ಷದ ಮೇಕೇರಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಆಯೋಜಕರು ಮತ್ತು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದೆ.
 
ಕೊಡಗಿಗೆ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಹೆಸರು ತಂದುಕೊಡುವಲ್ಲಿ ಸ್ಥಳೀಯ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸಿವೆ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ಕ್ರೀಡಾಪಟುಗಳು ಇಲ್ಲಿನ ಸ್ಥಳೀಯ ಪಂದ್ಯಾವಳಿಗಳಿಂದ ಬೆಳಕಿಗೆ ಬಂದವರು. ಈ ಪಂದ್ಯಾವಳಿಯ ಆಯೋಜಕರಿಗೂ ಹಾಗೂ ಪಾಲ್ಗೊಂಡ ಕ್ರೀಡಾಪಟುಗಳಿಗೂ ಮತ್ತೊಮ್ಮೆ ಅಭಿನಂದನೆಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong
 
 
img
 

Participated in Balyeda Cup logo launch, 30/01/2023

Participated in Balyeda Cup logo launch. ಬಾಳೆಯಡ ಕ್ರಿಕೆಟ್ ನಮ್ಮೆ ಲಾಂಛನ ಬಿಡುಗಡೆ
 
ಇದೇ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಯಲಿರುವ 21ನೇ ವರ್ಷದ ಕೊಡವ ಕೌಟುಂಬಿಕ ಬಾಳೆಯಡ ಕ್ರಿಕೆಟ್ ನಮ್ಮೆ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭ. ಕ್ರೀಡಾ ಕ್ಷೇತ್ರದಲ್ಲಿ ಕೊಡಗು ಒಂದು ಪ್ರಬಲ ಶಕ್ತಿಯಾಗಿರುವುದಕ್ಕೆ ಕಾರಣ ಇಂತಹ ಕೌಟುಂಬಿಕ ಕ್ರೀಡಾಕೂಟಗಳು. ಸತತವಾಗಿ ಈ ಕ್ರಿಕೆಟ್ ನಮ್ಮೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಬಾಳೆಯಡ ಕುಟುಂಬಕ್ಕೆ ಮನಪೂರ್ವಕ ಅಭಿನಂದಿಸಿದೆ. ಸುಂದರವಾದ ಲಾಂಛನ ವಿನ್ಯಾಸ ಮಾಡಿರುವ ಬಾಳೆಯಡ ಅನೀಶ್ ಅವರಿಗೆ ಶುಭಾಶಯಗಳು.
 
ಕೌಟುಂಬಿಕ ಕ್ರೀಡಾಕೂಟಗಳಿಗೆ ಆಡಳಿತ ವ್ಯವಸ್ಥೆಯಿಂದ ಕೂಡ ಬೆಂಬಲದ ಅವಶ್ಯಕತೆ ಇದೆ. ಹಾಕಿ ಕ್ರೀಡೆಯಲ್ಲಿ ಪ್ರಬಲ ಶಕ್ತಿಯಾದ ಕೊಡಗಿಗೆ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ತಂಡಗಳಲ್ಲಿ ಪ್ರಾತಿನಿಧ್ಯ ಕಾಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಹುಡುಕಿ ಸರಿಪಡಿಸಬೇಕಿದೆ. ಗ್ರಾಮ ಮಟ್ಟದಲ್ಲೂ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ ಪಡಿಸಬೇಕಾದ ಅವಶ್ಯಕತೆ ಬಗ್ಗೆ ಅಭಿಪ್ರಾಯ ಹಂಚಿಕೊಂಡೆ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong
 
 
img
 

Fond remembrance of Field Marshal KM Cariappa, 28/01/2023

Fond remembrance of Field Marshal KM Cariappa. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಜನ್ಮದಿನದ ಸವಿ ನೆನಪು
 
ಭಾರತ ದೇಶಕಂಡ ಅಪ್ರತಿಮ ವೀರ ಸೇನಾನಿಗಳಲ್ಲಿ ಅಗ್ರಗಣ್ಯರು ಕೊಡಗಿನ ವರಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರು. ಭಾರತ ಸೇನೆಯ ಪ್ರಥಮ ದಂಡನಾಯಕರಾಗಿ, ಮಹಾದಂಡನಾಯಕ (ಫೀಲ್ಡ್ ಮಾರ್ಷಲ್) ಪದವಿಯನ್ನು ಅಲಂಕರಿಸಿದ ಮೊದಲಿಗರಾಗಿ ದೇಶದ ಜನರ ಮನಸ್ಸಿನಲ್ಲಿ ಸದಾಕಾಲ ಸ್ಥಿರವಾಗಿ ನಿಂತಿದ್ದಾರೆ. ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.
 
#FieldMarshal #KMKariappa #Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong
 
 
img