Interview in Samyukta Karnataka, 23/04/2022
ಕೊಡವರಿಗೆ ಬುಡಕಟ್ಟು ಸ್ಥಾನಮಾನ ಪಡೆಯುವ ಬಗ್ಗೆ ನಡೆಯುತ್ತಿರುವ ಕಾನೂನು ಹೋರಾಟದ ಬಗ್ಗೆ ಕೆಲ ತಿಂಗಳ ಹಿಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಯು-ಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನ.
ಉಚ್ಚ ನ್ಯಾಯಾಲಯದ ತೀರ್ಪು ಹೋರಾಟದಲ್ಲಿ ಮೊದಲ ಹೆಜ್ಜೆ ಮಾತ್ರ. ಈ ವಿಷಯದಲ್ಲಿ ಮಾಡಬೇಕಾದ ಕೆಲಸ ಸಾಕಷ್ಟು ಇದೆ. ಇದರ ಜೊತೆಗೆ ಕೊಡಗಿನ ಜನತೆ ಎದುರಿಸುತ್ತಿರುವ ಇತರೇ ಸಮಸ್ಯೆಗಳ ಬಗ್ಗೆ ಕೂಡ ನನ್ನ ಅಭಿಪ್ರಾಯ ಹಂಚಿಕೊಂಡಿದ್ದೇನೆ.
#Coorg #Kodagu #Madikeri #Virajpet #Ponnampet #Memories
Condolences to families of accident victims, 21/04/2022
ಪಾಲಿಬೆಟ್ಟದ ಆರು ಮಂದಿ ಪ್ರಯಾಣಿಕರು ಹುಣಸೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಸುದ್ದಿ ತೀವ್ರ ಆಘಾತ ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ಆ ದೇವರು ಕರುಣಿಸಲೆಂದು ಬೇಡಿಕೊಳ್ಳುತ್ತೇನೆ. ಅವರ ಈ ನೋವ್ವಿನಲ್ಲಿ ನಾನು ಭಾಗಿಯಾಗಿದ್ದೇನೆ.
Visit to Mooteri Sri Bhagavathi temple, 20/04/2022
ಮೂಟೇರಿ ಶ್ರೀ ಭಗವತಿ ದೇವಸ್ಥಾನ, ಈಸ್ಟ್ ಕೊಳಕೇರಿ ನಾಪೋಕ್ಲುಯ ಇಲ್ಲಿನ ಮೂಟೇರಿ ಭಗವತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಮತ್ತು ಆಡಳಿತ ಮಂಡಳಿ ಪುನರ್ ಪ್ರತಿಷ್ಟೆ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಹಮ್ಮಿಕೊಂಡಿದ್ದು, ಆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿಗೆ ನನ್ನ ಧನ್ಯವಾದಗಳು. ಶ್ರೀ ಭಗವತಿ ದೇವರ ಆಶೀರ್ವಾದ ಎಲ್ಲರ ಮೇಲು ಇರಲಿ ಎಂದು ಬೇಡಿಕೊಳ್ಳುತ್ತೇನೆ.
#Kodagu #Coorg #Napoklu #Ponnampet #Virajpet #Madikeri #Kushalnagar
Kabaddi tournament in Kushalnagar, 20/04/2022
ಕೊಡಗಿನ ಕುಶಾಲನಗರದಲ್ಲಿ ಸತತ ನಾಲ್ಕನೇ ವರ್ಷ ಆಯೋಜಿಸಿದ್ದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯವಳಿಯ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂತು.
ಯೂಥ್ ಫ್ರೆಂಡ್ಸ್ ಸಂಘ, ಕುಶಾಲನಗರ, ಇವರು ಬಹಳ ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಭಾಗವಹಿಸಿದ ತಂಡಗಳು ಕೂಡ ವೃತ್ತಿಪರರಂತೆ ಪಂದ್ಯಗಳನ್ನು ಆಡಿದರು. ಪಂದ್ಯಗಳನ್ನು ವೀಕ್ಷಣೆ ಮಾಡಿದ್ದು ಒಂದು ಒಳ್ಳೆ ಅನುಭವವಾಯಿತು.
ಕೊಡಗು ಜಿಲ್ಲೆಯಲ್ಲಿ ಈ ರೀತಿಯ ಪಂದ್ಯಾವಳಿಗಳಿಗೆ ಬಹಳ ಮಹತ್ವವಿದೆ. ಪಂದ್ಯಾವಳಿಯ ಆಯೋಜಕರಿಗೂ, ಭಾಗವಹಿಸಿದ ತಂಡಗಳಿಗೂ ಮತ್ತು ಪ್ರಶಸ್ತಿಗಳನ್ನು ಗೆದ್ದವರಿಗೂ ಅಭಿನಂದನೆಗಳು.
#Kodagu #Coorg #Madikeri #Virajpet #Ponnampet #Kushalnagar
Visit to Hundi's Shree Muthappa Temple, 19/04/2022
ಮಲ್ದಾರೆಯ ಹುಂಡಿ ಗ್ರಾಮದಲ್ಲಿರುವ ಶ್ರೀ ಮುತ್ತಪ್ಪ ದೇವಾಲಯ ಪುನಶ್ಚೇತನವಾಗುತ್ತಿರುವುದು ಬಹಳ ಸಂತಸದ ವಿಷಯ. ದೇವಾಲಯಕ್ಕೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆಯುವ ಅವಕಾಶ ಒದಗಿ ಬಂತು. ಈ ಸಂದರ್ಭದಲ್ಲಿ ಅಲ್ಲಿನ ಸೇವಾ ಟ್ರಸ್ಟ್ ನ ಸದಸ್ಯರ ಜೊತೆ ಮತ್ತು ಸ್ಥಳೀಯ ಭಕ್ತಾದಿಗಳ ಜೊತೆ ದೇವಾಲಯದ ಪುನಶ್ಚೇತನದ ಕಾರ್ಯದ ಬಗ್ಗೆ ಮಾತನಾಡಿದೆ. ವೈಯಕ್ತಿಕವಾಗಿ ನಾನು ಮಾಡಬಹುದಾದ ದೇವರ ಸೇವೆಯನ್ನು ಮಾಡಿದ್ದೇನೆ. ಶ್ರೀ ಮುತ್ತಪ್ಪ ದೇವರ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಆಶಿಸುತ್ತೇನೆ.
#Kodagu #Coorg #Madikeri #Virajpet #Ponnampet #Maldare #Hundi