On my behalf, my wife, Mrs. Kanchan Ponnanna, participated in the annual festival celebrations of Kapala Colony at Yavakapadi in Madikeri Taluk, 19/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಯಾವಕಪಾಡಿಯ ಕಾಪಾಳ ಕಾಲೋನಿಯ ವಾರ್ಷಿಕ ಹಬ್ಬಕ್ಕೆ ನನ್ನ ಪರವಾಗಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣರವರು ವಾರ್ಷಿಕ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಡಿನ ಸುಖ-ಶಾಂತಿ ಗಾಗಿ ಪ್ರಾರ್ಥಿಸಿದರು.

On the occasion of the annual celebration to be held at the Bengaluru City Civil Court, 19/04/2025
ದಿನಾಂಕ 29-04-2025 ರಂದು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನಡೆಯುವ ವಾರ್ಷಿಕೋತ್ಸವದ ಪ್ರಯುಕ್ತ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ನೀಡಿದ ಆಮಂತ್ರಣವನ್ನು ಸ್ವೀಕರಿಸಿ ಶುಭ ಕೋರಿದೆ.

Heartfelt thanks to the leaders of the Bangalore Kodava Samaja for unanimously deciding and submitting a petition to the Honourable Chief Minister on behalf of the Bangalore Kodava Samaja, 18/04/2025
ಬೆಂಗಳೂರು ಕೊಡವ ಸಮಾಜದದಿಂದ ಸರ್ವಾನುಮತದ ನಿರ್ಣಯ ಮಾಡಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬೆಂಗಳೂರು ಕೊಡವ ಸಮಾಜದ ಮುಖಂಡರಿಗೆ ಹೃತ್ಪೂರ್ವಕ ಧನ್ಯವಾದಗಳು.

On the occasion of participating and offering best wishes at the Bethri Mukkateera Inter-family Kodava Football Festival organized in Aravathooklu village of Ponnampet taluk, 18/04/2025
ಪೊನ್ನಂಪೇಟೆ ತಾಲೂಕಿನ ಅರವತ್ತೂಕ್ಲು ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಭೇತ್ರಿ ಮುಕ್ಕಾಟೀರ ಅಂತರ್ ಕುಟುಂಬ ಕೊಡವ ಫುಟ್ಬಾಲ್ ಹಬ್ಬದಲ್ಲಿ ಭಾಗವಹಿಸಿ ಶುಭ ಕೋರಿದ್ದ ಸಂದರ್ಭ

Let us remember the message Jesus Christ spread to the world on the Holy Day of Good Friday, a symbol of forgiveness, sacrifice, compassion, humanity, 18/04/2025
ಕ್ಷಮೆ, ತ್ಯಾಗ, ಕರುಣೆ, ಮಾನವೀಯತೆಗಳ ಸಂಕೇತವಾಗಿರುವ ಗುಡ್ ಫ್ರೈಡೆಯ ಪವಿತ್ರ ದಿನದಂದು ಯೇಸು ಕ್ರಿಸ್ತನು ಜಗತ್ತಿಗೆ ಸಾರಿದ ಸಂದೇಶವನ್ನು ಸ್ಮರಿಸೋಣ.
