Onam celebrations. ಓಣಂ ಆಚರಣೆ , 12/09/2022
ಚನ್ನಯ್ಯನ ಕೋಟೆಯಲ್ಲಿ ಹಿಂದೂ ಮಲಯಾಳಿ ಸಮಿತಿಯ ವತಿಯಿಂದ ಓಣಂ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಎಲ್ಲರಿಗೂ ಶುಭ ಕೋರಿದೆ.
ಕೇರಳ ರಾಜ್ಯದ ನಾಡ ಹಬ್ಬವಾದ ಓಣಂ ಜಾತಿ ಧರ್ಮವನ್ನು ಮೀರಿ ಎಲ್ಲರೂ ಆಚರಿಸುವ ಹಬ್ಬ. ಈಗ ದಕ್ಷಿಣ ಭಾರತದ ಇತರ ಕಡೆಗಳಲ್ಲೂ ಜನ ಇಷ್ಟಪಟ್ಟು ಮಾಡುವ ಒಂದು ಹಬ್ಬವಾಗಿ ಬೆಳೆದು ಬಂದಿದೆ.
ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಯೋಜನೆ ಮಾಡಿದ್ದ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಗಳು. ನಮ್ಮ ಸಾಂಸ್ಕೃತಿಕ ಪರಂಪರೆಗಳನ್ನು ಮುನ್ನಡೆಸಿಕೊಂಡು ಹೋಗುವ ಅವರ ಪ್ರಜ್ಞೆ ಶ್ಲಾಘನೀಯ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Gandhinagar #GowriGanesha #GaneshaChaturti #Onam

168th Anniversary Celebrations of Sri Narayana Guru , 11/09/2022
168ನೇ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಕೊಡಗಿನ ಸಿದ್ದಾಪುರದಲ್ಲಿ, ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ವತಿಯಿಂದ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ನಾರಾಯಣ ಗುರುಗಳು ತೋರಿದ ಮಾರ್ಗದ ಬಗ್ಗೆ ಕೆಲವು ಮಾತನಾಡಿದೆ.
ಪ್ರಪಂಚದ ಎಲ್ಲಾ ಮನುಷ್ಯರಿಗೂ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಪ್ರತಿಪಾದನೆ ಮಾಡಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಶ್ರೀ ನಾರಾಯಣ ಗುರುಗಳ ಸಂದೇಶ ಹಿಂದೆಂದಿಗಿಂತಲೂ ಈಗ ಪ್ರಸ್ತುತ.
ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ಶ್ರೀ ನಾರಾಯಣ ಗುರುಗಳ ಬದುಕು, ಆದರ್ಶಗಳು ಸ್ಪೂರ್ತಿಯಾಗಿದ್ದವು. ನಾರಾಯಣ ಗುರುಗಳ ಸಮಾನತೆಯ ಸಮಾಜ ಮತ್ತು ಜಾತ್ಯಾತೀತತೆಯ ಸಂದೇಶವೇ ನಮ್ಮ ಭಾರತದ ಸಂವಿಧಾನದ ಮೂಲ ಬುನಾದಿಯಾಗಿದೆ.
ಎಲ್ಲಾ ಜನರನ್ನು, ಎಲ್ಲಾ ಜಾತಿಗಳನ್ನು, ಎಲ್ಲಾ ಧರ್ಮಗಳನ್ನು, ಎಲ್ಲಾ ದಾರ್ಶನಿಕಗಳನ್ನು ಸಮನಾಗಿ ಕಾಣುವ ಅವರ ವಚನವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎನ್ನುವ ಮಾತನ್ನು ಹೇಳಿದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Gandhinagar #GowriGanesha #GaneshaChaturti #NarayanaGuru #SriNarayanaGuru

Ganesha festival at Gandhinagar, Virajpet, 10/09/2022
ವಿರಾಜಪೇಟೆಯ ಗಾಂಧಿನಗರದಲ್ಲಿ, ಶ್ರೀ ಗಣಪತಿ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಗೌರಿ-ಗಣೇಶ ಉತ್ಸವದಲ್ಲಿ ಪಾಲ್ಗೊಂಡ ಸಂಧರ್ಭ.
ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಗಿ ನೂರು ವರ್ಷ ತುಂಬಿದೆ. ಈಗ ಅದು ನಮ್ಮನ್ನು ಸಾಮಾಜಿಕವಾಗಿ ಒಗ್ಗೂಡಿಸುವ ಒಂದು ಪರಂಪರೆಯಾಗಿ ಬೆಳೆದು ಬಂದಿದೆ. ಜನರ ಮನಸ್ಸುಗಳನ್ನು ಬೆಸೆಯುವ ಒಂದು ಸಾಧನವಾಗಿದೆ.
ಬಹಳ ಅಚ್ಚುಕಟ್ಟಾಗಿ ಗಣೇಶೋತ್ಸವವನ್ನು ಆಯೋಜನೆ ಮಾಡಿದ ಸಮಿತಿಯವರಿಗೆ ಅಭಿನಂದನೆ ಸಲ್ಲಿಸಿದೆ. ಉತ್ಸವದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ ಮಾಡಿದ್ದು ಶ್ಲಾಘನೀಯ.
ನಾಡಿನ ಹಲವು ಕಡೆ ನೈಸರ್ಗಿಕ ವಿಕೋಪದಿಂದ ಬಳಲುತ್ತಿರುವ ಜನರಿಗೆ ದೇವರ ಕೃಪೆಯಿಂದ ಒಳಿತಾಗಲಿ ಎಂದು ಬೇಡಿಕೊಂಡೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Gandhinagar #GowriGanesha #GaneshaChaturti

Inauguration of Inchara News Kodagu at Gonikoppal , 09/09/2022
ಗೋಣಿಕೊಪ್ಪದಲ್ಲಿ ನಡೆದ, ಇಂಚರ ಕೊಡಗು ಚಾನೆಲ್ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಎಲ್ಲರಿಗೂ ಶುಭ ಕೋರಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯದ ಬಗ್ಗೆ ಮಾತನಾಡಿದೆ. ನಿರ್ಭೀತವಾಗಿ ಸತ್ಯಶೋಧನೆಯ ಕೆಲಸ ಮಾಡುವುದೇ ಮಾಧ್ಯಮಗಳ ಮುಖ್ಯ ಕರ್ತವ್ಯವಾಗಿದೆ.
ಅರಮೇರಿ ಕಳಂಚೇರಿ ಮಠದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸೆಂಟ್ ಥಾಮಸ್ ಶಾಲೆಯ ಆಡಳಿತಾಧಿಕಾರಿ ಶ್ರೀ ಫ್ರಾನ್ಸಿಸ್ ಚಿರಕಲ್, ನಟರಾದ ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಸೇರಿದಂತೆ ಇತರ ಗಣ್ಯರ ಇದ್ದ ವೇದಿಕೆಯಲ್ಲಿ ಮಾತನಾಡಿ ಹೊಸ ವಾಹಿನಿಗೆ ಶುಭ ಹಾರೈಸಿದೆ.
ಚಾನೆಲ್'ನ ವ್ಯವಸ್ಥಾಪಕ ನಿರ್ದೇಶಕರಾದ ಡಿ. ನಾಗೇಶ್, ಚಾನೆಲ್'ನ ಸಂಸ್ಥಾಪಕರಾದ ನರಸಿಂಹಮೂರ್ತಿ, ಚಾನೆಲ್'ನ ಪತ್ರಕರ್ತರು, ಸಿಬ್ಬಂದಿ ವರ್ಗಕ್ಕು ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal

Addressing Kodagu District Lorry Drivers and Owners Association, 08/09/2022
ಕೊಡಗು ಜಿಲ್ಲಾ ಲಾರಿ ಚಾಲಕ ಹಾಗೂ ಮಾಲೀಕರ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದೆ.
ಯಾವುದೇ ವೃತ್ತಿಯಲ್ಲಿ ಇರುವವರು ಸಂಘಟಿತರಾಗುವುದು ಕಾನೂನಿನ ಪ್ರಕಾರ ನಮಗೆ ಸಂವಿಧಾನ ನೀಡಿರುವ ಹಕ್ಕು. ಸಂಘಟಿತರಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವುದು, ಹಕ್ಕುಗಳನ್ನು ಪ್ರತಿಪಾದಿಸುವುದು ಸುಲಭ, ಎಂಬ ಮಾತನ್ನು ಈ ಸಂದರ್ಭದಲ್ಲಿ ತಿಳಿಸಿದೆ.
ವ್ಯಾಪಾರಸ್ಥರು, ಸ್ವಯಂ ಉದ್ಯೋಗದಲ್ಲಿ ತೊಡಗಿರುವವರಿಗೆ ಸಾಕಷ್ಟು ಸವಾಲಿನ ದಿನಗಳು ಎದುರಾಗಿವೆ. ಆಡಳಿತ ಮತ್ತು ಸರ್ಕಾರಿ ಮಟ್ಟದಲ್ಲಿ ಇವುಗಳಿಗೆ ಪರಿಹಾರ ಪಡೆಯಲು ಸಂಘಟನೆಯ ಅವಶ್ಯಕತೆ ಬಗ್ಗೆ ವಿವರಿಸಿದೆ.
ಕಾರ್ಯಕ್ರಮಕ್ಕೆ ನನ್ನನು ಆಹ್ವಾನಿಸಿದ ಸಂಘದ ಪದಾಧಿಕಾರಿಗಳಿಗೂ, ಪ್ರೀತಿಯಿಂದ ಬರಮಾಡಿಕೊಂಡ ಎಲ್ಲಾ ಸದಸ್ಯರಿಗೂ, ಮತ್ತು ಸಂಘಟನೆಗೂ ಶುಭವಾಗಲಿ.
#Kailpodh #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Hudikeri #Sports #Mayamudi #GunFestival
