Vindictive arrests of party workers, 22/09/2022

ಮಧ್ಯರಾತ್ರಿ ಕಾರ್ಯಾಚರಣೆ ಮಾಡಿ ನಮ್ಮ ಪಕ್ಷದ ಕಾನೂನು ವಿಭಾಗದ ಕಾರ್ಯದರ್ಶಿ ಸಂಜಯ್ ಯಾದವ್ ಸೇರಿದಂತೆ ಐವರನ್ನು ಅವರ ಮನೆಗೆ ಹೋಗಿ ವಶಕ್ಕೆ ಪಡೆದ ಪೊಲೀಸರ ಸೇಡಿನ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
 
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅನಿವಾರ್ಯ. ಪೇಸಿಎಂ ಪೋಸ್ಟ್‌ರ್ ಕೂಡ ಆಡಳಿತ ಪಕ್ಷದ ಭ್ರಷ್ಟಾಚಾರದ ವಿರುದ್ದದ ಒಂದು ಹೋರಾಟ. ಪೋಸ್ಟರ್ ಅಂಟಿಸಿದ್ದಕ್ಕೆ ಪೋಲಿಸರು ಸರ್ಕಾರದ ಪರವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಾವು ಕಾನೂನು ಮೂಲಕವೇ ಉತ್ತರಿಸುತ್ತೇವೆ.
 
ಈ ಸಂಬಂಧ ಕಾನೂನಾತ್ಮಕ ವಿಚಾರಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ ಖರ್ಗೆ ಅವರೊಂದಿಗೆ ಸಮಾಲೋಚನೆ ನಡೆಸಿದೆ.
 
ನಂತರ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ಡಿ ಕೆ ಶಿವಕುಮಾರ್ ಅವರ ಜೊತೆ ತೆರಳಿ, ನಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸ್ ಕಾರ್ಯದ ವಿರುದ್ಧ ತೆಗೆದುಕೊಳ್ಳಬೇಕಾದ ಕಾನೂನು ಕ್ರಮ ಶುರು ಮಾಡಿದ್ದೇವೆ. ನಮ್ಮ ಪಕ್ಷದ ಕಾರ್ಯಕರ್ತರ ಪರ ನಾವು ಸದಾ ನಿಲ್ಲುತ್ತೇವೆ. ಇದು ಜನಪರವಾದ, ಭ್ರಷ್ಟಾಚಾರದ ವಿರುದ್ಧದ ಹೋರಾಟ.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Teerthodbhava #Kailpodh #40% #40PerCent #PayCM
 
 
img
img
 

Kailpodh in Bengaluru. ಬೆಂಗಳೂರಿನಲ್ಲಿ ಕೈಲ್‌ ಪೋಳ್ದ್, 19/09/2022

ಶ್ರೀ ಕಾವೇರಿ ಕೊಡವ ಸಂಘ, ಬೆಂಗಳೂರು, ಇವರ ವತಿಯಿಂದ ಭಾರಿ ಸಂಭ್ರಮದ ಕೈಲ್‌ ಪೋಳ್ದ್ ಆಚರಣೆ ಮಾಡಲಾಯಿತು. ನಾವು ಎಲ್ಲೇ ಇದ್ದರೂ, ನಮ್ಮ ಆಚರಣೆಗಳನ್ನು, ನಮ್ಮ ಹಬ್ಬಗಳನ್ನು ಸಂಭ್ರಮಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬಹುದು.
 
ವಾಣಿಜ್ಯೋದ್ಯಮಿ ಛಾಯಾ ನಂಜಪ್ಪ ರಾಜಪ್ಪ ಅವರೂ ಕೂಡ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ನನ್ನನು ಆಮಂತ್ರಿಸಿ ಬಹಳ ಅದ್ದೂರಿ ಹಾಗೂ ಅಚ್ಚುಕಟ್ಟಾಗಿ ಸಮಾರಂಭವನ್ನು ಆಯೋಜಿಸಿದ್ದ ಸಂಘದ ಅಧ್ಯಕ್ಷರಾದ ಚೊಟ್ಟಂಗಡ ಎಂ.ಗಣಪತಿ, ಕಾರ್ಯದರ್ಶಿಗಳಾದ ಅನ್ನಲಾಮಡ ವಿನೋದ್ ಉತ್ತಯ್ಯ, ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Teerthodbhava #Kailpodh
 
 
img
 

Theerthodbhava at Talakaveri ತಲಕಾವೇರಿ ತೀರ್ಥೋದ್ಭವ, 17/09/2022

ಈ ವರ್ಷ ತಲಕಾವೇರಿ ತೀರ್ಥೋದ್ಭವದ ಮುಹೂರ್ತ ಅಕ್ಟೋಬರ್ 17ರಂದು ಮೇಷ ಲಗ್ನದಲ್ಲಿ ಸಂಜೆ 7.21 ಕ್ಕೆ ನಿಗದಿಯಾಗಿರುವುದು ಬಹಳ ಸಂತಸ ತಂದಿದೆ.
 
ತಾಯಿ ಕಾವೇರಿಯ ಆಶೀರ್ವಾದ ನಾಡಿನ ಸಮಸ್ತ ಜನರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ. ಜೀವನದಿಯಾಗಿ ನಮಗೆ ಸಕಲವನ್ನು ಕಲ್ಪಿಸಿರುವ ತಾಯಿಯ ಆಶೀರ್ವಾದ ಪಡೆಯೋಣ. ಎಲ್ಲರೂ ಆ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗೋಣ.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Teerthodbhava
 
 
img
 

Ganesha fest at Shivakeri. ಶಿವಕೇರಿಯಲ್ಲಿ ಗಣೇಶೋತ್ಸವ, 14/09/2022

ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರೀ ವಿನಾಯಕ ಯುವ ಸಮಿತಿಯ ವತಿಯಿಂದ ಸುಂದರವಾದ ಗಣೇಶೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಲ್ಲಿಗೆ ಭೇಟಿಕೊಟ್ಟು ದೇವರಿಗೆ ಪ್ರಾರ್ಥನೆ ಸಲಿಸಿ ಆಯೋಜಕರಿಗೆ ಶುಭ ಕೋರಿದೆ.
 
ಸ್ಥಳೀಯರನ್ನು ಒಗ್ಗೂಡಿಸಿ ಗಣೇಶೋತ್ಸವ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ಈಗ ನಮ್ಮ ಸಂಸ್ಕೃತಿಯನ್ನು ಬೆಳೆಸಲು, ಯುವಕರನ್ನು ಪ್ರೇರೇಪಿಸಲು, ಸಮಾಜದಲ್ಲಿನ ಒಡಕುಗಳನ್ನು ಬೆಸೆಯಲು ಬಳಸಬೇಕಿದೆ.
 
ನನ್ನನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡು, ಸನ್ಮಾನ ಕೂಡ ಮಾಡಿದ ವಿನಾಯಕ ಯುವ ಸಮಿತಿಗೆ ಧನ್ಯವಾದಗಳು. ನಿಮ್ಮ ಸಾಮಾಜಿಕ ಕಳಕಳಿಯ ಕೆಲಸಗಳು ಮುಂದುವರೆಯಲಿ ಎಂದು ಆಶಿಸುತ್ತೇನೆ.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri
 
 
img
 

Involvement of BJP MLA in PSI scam, 13/09/2022

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಶಾಸಕ
 
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಲಂಚ ಪಡೆದಿರುವುದಾಗಿ ತಾವೇ ಒಪ್ಪಿಕೊಂಡರು ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರ ವಿರುದ್ಧ ಇಂದು ನಮ್ಮ ಪಕ್ಷದ ಪತ್ರಿಕಾ ಗೋಷ್ಠಿ ಏರ್ಪಡಿಸಲಾಗಿತ್ತು.
 
ಕೆ.ಪಿ.ಸಿ.ಸಿ ಸಂವಹನ ಮತ್ತು ಜಾಲತಾಣ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ್‌ ಖರ್ಗೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಅವರಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಘಟನೆಯ ಕಾನೂನು ಅಂಶಗಳನ್ನು ವಿವರಿಸಿದೆ.
 
ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ದಢೇಸೂಗೂರು ಮಾಡಿರುವ ಹೇಳಿಕೆ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಲೋಕಾಯುಕ್ತರು ಕೂಡ ಕಾನೂನು ಕ್ರಮ ಜರುಗಿಸಬಹುದು. ಲೋಕಪಾಲ್ ಮಸೂದೆಯಲ್ಲಿ ಲೋಕಪಾಲರು ಕೂಡ ಇವರನ್ನು ಶಾಸಕ ಸ್ಥಾನದಿಂದ ಅನರ್ಹ ಗೊಳಿಸಬಹುದಾಗಿದೆ.
 
ಭ್ರಷ್ಟಾಚಾರ ಕಣ್ಣಮುಂದೆ ಇದ್ದರು, ಸಾಕ್ಷಿ ಹೊರಬಂದು 10 ದಿನಗಳಾದರೂ ಯಾವುದೇ ಕ್ರಮ ಜರುಗಿಸದೆ ಇರುವುದು ಆಡಳಿತ ಇದರಲ್ಲಿ ಶಾಮೀಲಾಗಿರುವುದನ್ನು ಸೂಚಿಸುತ್ತದೆ.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Gandhinagar #PSIScam #Corruption #40%