Remembering poet, philosopher and social reformer Sri Kanakadasa on his birth anniversary, 11/11/2022

Remembering poet, philosopher and social reformer Sri #Kanakadasa on his birth anniversary. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ. ಎಲ್ಲರಿಗೂ, ದಾಸ ಶ್ರೇಷ್ಠ ಕನಕದಾಸ ಜಯಂತಿಯ ಶುಭಾಶಯಗಳು.
 
#KanakaDasaJayanti
 
 
img
 

The High Court of Karnataka has set aside the lower court order regarding blocking of the Party's Twitter accounts - AS Ponnanna, 08/11/2022

The High Court of Karnataka has set aside the lower court order regarding blocking of the Party's Twitter accounts - AS Ponnanna ಚಲನಚಿತ್ರ ಸಂಗೀತದ ಕೃತಿಸ್ವಾಮ್ಯ ಕುರಿತು ಕೆಳಗಿನ ನ್ಯಾಯಾಲಯ ನೀಡಿದ್ದ ಆದೇಶವನ್ನು ಪಕ್ಷದ ಪರವಾಗಿ ಇಂದು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ - ಎ.ಎಸ್.ಪೊನ್ನಣ್ಣ
 
#Twitter #BharatJodoYatra #KarnatakaHighCourt #INC #bantwitter #@CNNNews18 @ANI @barandbench
 
 
img
 

Family hockey tournament in Ponnampet, 07/11/2022

ಪೊನ್ನಂಪೇಟೆಯಲ್ಲಿ ಕುಟುಂಬ ಹಾಕಿ ಪಂದ್ಯಾವಳಿ
 
ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ಶ್ರೀ ಪಾಂಡಂಡ ಕುಟ್ಟಪ್ಪ ಸ್ಮಾರಕ ಹಾಕಿ ಪಂದ್ಯಾವಳಿ ವೀಕ್ಷಿಸಲು ಭೇಟಿ ನೀಡಿದ ಸಂದರ್ಭ. ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯಗಳನ್ನು ವೀಕ್ಷಿಸುವುದೇ ರೋಮಾಂಚನ ತರುತ್ತದೆ. ಹಲವಾರು ಕುಟುಂಬಗಳ ತಂಡಗಳ ಪೈಪೋಟಿಯಿಂದ ಕೂಡಿದ ಹಣಾಹಣಿ ನಮ್ಮ ಪರಂಪರೆಗಳನ್ನು ಉಳಿಸಿ ಬೆಳಸುವ ಒಂದು ಮುಖ್ಯ ಸಾಧನವಾಗಿದೆ.
 
ರಾಜ್ಯ ಹಾಗೂ ದೇಶದ ಹಾಕಿ ತಂಡಗಳಿಗೆ ಹಲವಾರು ಹಾಕಿಪಟುಗಳನ್ನು ಕೊಟ್ಟ ನಮ್ಮ ಕೊಡಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಆಟಗಾರರನ್ನು ರೂಪಿಸಿದೆ. ಇದಕ್ಕೆ ಮೂಲ, ಈ ರೀತಿಯ ಕುಟುಂಬ ಪಂದ್ಯಾವಳಿಗಳು.
 
ಈ ಪಂದ್ಯಾವಳಿಗಳನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಡೆಸಿದ ಆಯೋಜಕರಿಗೂ, ನಮ್ಮ ಸಂಪ್ರದಾಯಗಳನ್ನು ಮುಂದುವರೆಸುತ್ತ ಕ್ರೀಡಾ ಮನೋಭಾವದಿಂದ ಇದರಲ್ಲಿ ಪಾಲ್ಗೊಂಡ ಎಲ್ಲಾ ಕುಟುಂಬಗಳ ತಂಡಗಳಿಗೂ, ಕ್ರೀಡಾಪಟುಗಳಿಗೂ ಹಾರ್ದಿಕ ಅಭಿನಂದನೆಗಳು.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #Nalnad #Hockey #FamilyHockey #ASPonnanna
 
 
img
 

Restoration of temples in Hudikeri, 06/11/2022

Restoration of temples in Hudikeri. ಹುದಿಕೇರಿಯಲ್ಲಿ ದೇವಸ್ಥಾನಗಳ ಜೀರ್ಣೋದ್ದಾರ

ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿರುವ ಹುದಿಕೇರಿ ಪಂಚಾಯ್ತಿ ವ್ಯಾಪ್ತಿಯ ಬೇಗೂರು ಗ್ರಾಮದ ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರೊಂದಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ವಿವರ ಪಡೆದೆ. ಈ ಬಗ್ಗೆ ಮುಂದಿನ ದಿನದಲ್ಲಿ ನನ್ನ ಕೈಲಾದ ಮಟ್ಟಿಗೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದ್ದೇನೆ.

ಅದೇ ರೀತಿ, ಬೃಹದಾಕಾರದ ಮರ ಬಿದ್ದು ಹಾನಿಗೊಳಗಾಗಿರುವ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೆ ಇರುವ ಬೇಗೂರು ಚೇನಿವಾಡ ಗ್ರಾಮದ ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯದ ವಿವರ ಪಡೆದೆ.ಸ್ಥಳದಲ್ಲಿಯೇ ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರಿಗೆ ನನ್ನ ಕಡೆಯಿಂದ ದುರಸ್ತಿ ಕೆಲಸಕ್ಕೆ ನನ್ನ ಕೈಲಾದ ಹಣವನ್ನು ನೀಡಿದ್ದೇನೆ. ಆದಷ್ಟು ಬೇಗ ದುರಸ್ತಿ ಕಾರ್ಯ ಪೂರ್ಣಗೊಂದು ದೇವಸ್ಥಾನ ತನ್ನ ಹಿಂದಿನ ಸ್ಥಿತಿಗೆ ತಲುಪಲಿ. ಎರಡೂ ಕಡೆ ದೇವರ ದರ್ಶನ ಪಡೆದು ಕೊಡಗಿನ ಒಳಿತಿಗೆ ಪ್ರಾರ್ಥಿಸಿದೆ.

#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #Nalnad #Students #Scholarship #ASPonnanna #Ponnanna

 


Felicitating meritorious students, 03/11/2022

Felicitating meritorious students. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ವಿರಾಜಪೇಟೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ.
 
ನಾವು ಶಾಲೆ ಕಾಲೇಜುಗಳಲ್ಲಿ ಕಳೆಯುವ ವರ್ಷಗಳು ನಮ್ಮ ಜೀವನವನ್ನು ರೂಪಿಸುವ ಅತಿಮುಖ್ಯ ಘಟ್ಟ. ಈ ಸಮಯವನ್ನು ಆದಷ್ಟು ಸದುಪಯೋಗ ಮಾಡಿಕೊಂಡು ನಮ್ಮ ಜೀವನ ಮಾತ್ರವಲ್ಲದೆ, ನಮ್ಮ ಕುಟುಂಬ ಹಾಗು ಸಮಾಜಕ್ಕೆ ಒಳ್ಳೆಯ ಕೊಡುಗೆ ನಾವು ಕೊಡಬಹುದು.
 
ಪ್ರತಿಭಾ ಪುರಸ್ಕಾರ 2022 ಆಯೋಜಕರಿಗೂ, ಸನ್ಮಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸುತ್ತೇನೆ.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #Chennayyanakote #Nalnad #Students #Scholarship #ASPonnanna #Ponnanna
 
 
img
img
img
img