Meeting Party President Sri Mallikarjun Kharge, 02/11/2022
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾಗಿ ಅಧಿಕಾರ ವಹಿಸಿಕೊಂಡಿರುವ ನಮ್ಮ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಮಾಡಿ ಅಭಿನಂದಿಸಿದ ಸಂದರ್ಭ. ಅವರ ಸುದೀರ್ಘ ರಾಜಕೀಯ ಅನುಭವದ ಮಾರ್ಗದರ್ಶನದಲ್ಲಿ ಪಕ್ಷ ಇನ್ನಷ್ಟು ಬಲಿಷ್ಠ ಆಗುವುದರಲ್ಲಿ ಅನುಮಾನವಿಲ್ಲ. ಎಲ್ಲರಿಗೂ ಪ್ರೇರಣೆಯಂತಿರುವ ಶ್ರೀ ಖರ್ಗೆಯವರಿಗೆ ಮತ್ತೊಮ್ಮೆ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Nalnad #Chennayyanakote #Kharge #MallikarjunKharge

Wishing everyone a happy Rajyothsava, 01/11/2022
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆಸಿಕೊಳ್ಳುವ ನಮ್ಮ ನಾಡು ಎಲ್ಲಾ ಜನರ ನೆಮ್ಮದಿಯ ನೆಲೆಬೀಡಾಗಿ ಬೆಳಗಲಿ.
#ಕರ್ನಾಟಕರಾಜ್ಯೋತ್ಸವ #Kodagu #Madikeri #Virajpet #Ponnampet #Coorg #Rajyothsava #KarnatakaRajyothsava #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Nalnad #Chennayyanakote
Pledge to donate eyes and organs, 31/10/2022
Pledge to donate eyes and organs. ದಾನ ಮಾಡುವುದೇ ಮನುಷ್ಯತ್ವ
ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಮತ್ತು ಮಡಿಕೇರಿಯ ದಿ. ಪಂದ್ಯಂಡ ಆಶಾ ಗಣಪತಿ ಅವರುಗಳ ಸ್ಮರಣಾರ್ಥ ಅಂಗಾಂಗಗಳ ದಾನಮಾಡುವ ಪ್ರೇರೇಪಣಾ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭ.
ಈ ಕಾರ್ಯಕ್ರಮದಲ್ಲಿ 25 ಜನ ನೇತ್ರದಾನ ಮಾಡಲು ಮತ್ತು ಎಂಟು ಮಂದಿ ದೇಹದಾನ ಮಾಡಲು ನೋಂದಾಯಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ಸ್ಥಳದಲ್ಲೇ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 14 ಜನ ರಕ್ತದಾನ ಕೂಡ ಮಾಡಿದ್ದಾರೆ.
ದಾನ ಮಾಡುವುದು ಮನುಷ್ಯನ ಸಹಜ ಗುಣ. ಬದುಕಿದ್ದಾಗ ಹಣವಾಗಲಿ, ಸತ್ತ ನಂತರ ನಮ್ಮ ದೇಹದ ಅಂಗಾಂಗಗಳನ್ನಾಗಲಿ ದಾನ ಮಾಡುವುದು ಶ್ರೇಷ್ಠ ಗುಣ. ಇದೊಂದು ಪುಣ್ಯದ ಕೆಲಸವೆಂದೇ ನನ್ನ ಭಾವನೆ.
ಲಯನ್ಸ್ ಸಂಸ್ಥೆ ಸತತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಇವರ ಜೊತೆಗೂಡಿ ಮಡಿಕೇರಿಯಲ್ಲಿ ಆಯೋಜಿಸಿದ್ದ ಈ ಯಶಸ್ವಿ ಕಾರ್ಯಕ್ರಮಕ್ಕೆ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Nalnad #Chennayyanakote #EyeDonation #BloodDonation #DSS #LionsClub #PuneethRajkumar

Visit to Chennayanakote Panchayat, 28/10/2022
Visit to Chennayanakote Panchayat. ಚೆನ್ನಯ್ಯನಕೋಟೆ ಪಂಚಾಯತಿಗೆ ಭೇಟಿ
ಚೆನ್ನಯ್ಯನಕೋಟೆ ಪಂಚಾಯತಿಯ ಪ್ರದೇಶಕ್ಕೆ ಭೇಟಿಕೊಟ್ಟು ಸ್ಥಳೀಯ ಗ್ರಾಮಸ್ಥರ ಹಲವಾರು ಸಮಸ್ಯೆಗಳ ಬಗ್ಗೆ ಅವರ ಜೊತೆ ಚರ್ಚೆ ನಡೆಸಿದೆ. ಈ ಭೇಟಿಯವೇಳೆ ಸ್ಥಳದಲ್ಲೇ ಒಂದೆರಡು ಸಣ್ಣ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಸಂತಸ ಇದೆ.
ಜನರ ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸಲು ಇಚ್ಚಶಕ್ತಿ ಬೇಕು. ಸ್ಥಳೀಯ ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಜನರ ನಡುವೆ ಇದ್ದಾಗಲೇ, ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Nalnad #Chennayyanakote

State-level shooting competition, 26/10/2022
State-level shooting competition. ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆ
ನಾಲ್ನಾಡ್ ಪ್ಲಾಂಟರ್ಸ್ ರೇಕ್ರಿಯೇಷನ್ ಅಸ್ಸೊಸಿಯೇಶನ್ ಅವರು ಆಯೋಜಿಸಿದ್ದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಗಳ ಸಮಾರಂಭದಲ್ಲಿ ಪಾಲ್ಗೊಂಡು ಸ್ಪರ್ದಿಗಳನ್ನು ಉದ್ದೇಶಿಸಿ ಮಾತನಾಡಿದೆ.
ಈ ಸ್ಪರ್ಧೆಯಲ್ಲಿ ಸಾಕಷ್ಟು ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದು ಸಂತಸ ತಂದಿದೆ. ಕೊಡಗು ಸಾಂಪ್ರದಾಯಿಕ ಕ್ರೀಡೆಗಳಿಗೆ ಮತ್ತು ಆಚರಣೆಗಳಿಗೆ ಹೆಸರುವಾಸಿ. ಈ ರೀತಿಯ ಸ್ಪರ್ಧೆಗಳನ್ನು ಆಯೋಜನೆ ಮಾಡುವುದರಿಂದ ಈ ಪರಂಪರೆಯನ್ನು ನಾವು ಮುಂದುವರೆಸಲು ಸಹಾಯವಾಗುತ್ತದೆ. ಸ್ಪರ್ಧೆಯನ್ನು ಆಯೋಜಿಸಿದ್ದ ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಕ್ರೀಡಾಪಟುಗಳಿಗೂ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Nalnad #Shooting
