Medical equipment for Kodagu hospital, 16/11/2022
Medical equipment for Kodagu hospital. ಕೊಡಗಿನ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳ ಕೊಡುಗೆ
ಅಮ್ಮತ್ತಿಯ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ ಹಾಸ್ಪಿಟಲ್'ನಲ್ಲಿ ನೂತನವಾಗಿ ನಿರ್ಮಾಣವಾದ ಡಯಾಲಿಸಿಸ್ ಮತ್ತು ದಂತ ಚಿಕಿತ್ಸಾ ಘಟಕಗಳ ಉದ್ಘಾಟನೆಯಲ್ಲಿ ಪಾಲ್ಗೊಂಡ ಸಂದರ್ಭ. ಈ ಘಟಕಕ್ಕೆ ವೈದ್ಯಕೀಯ ಉಪಕರಣ ಒಂದನ್ನು ಕೊಡುಗೆಯಾಗಿ ಕೊಡಲಾಗಿದೆ.
ಜನರಿಗೆ ವೈದ್ಯಕೀಯ ಸೌಲಭ್ಯಗಳ ಅಗತ್ಯ ಹಿಂದೆಂದಿಗಿಂತಲೂ ಈಗ ಅವಶ್ಯಕತೆ ಹೆಚ್ಚಾಗಿದೆ. ಎಲ್ಲರೂ ಕೈಜೋಡಿಸಿದರೆ ಸೌಲಭ್ಯಗಳನ್ನು ಕಲ್ಪಿಸಬಹುದು. ಡಯಾಲಿಸಿಸ್ ಘಟಕವನ್ನು ಉದ್ಘಾಟನೆ ಮಾಡಿ ಆಸ್ಪತ್ರೆಯ ಟ್ರಸ್ಟ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ, ಇತರ ದಾನಿಗಳಾದ ಶ್ರೀ ಪೂರ್ಣಚಂದ್ರ ರಾವ್ (Heavenly Hills Resort), ಕೆ.ಎ. ಕುಶಾಲಪ್ಪ (Rebuild Kodagu) ಮತ್ತು ಕೊಡಂದೆರ ಸುಬ್ಬಯ್ಯ (East End Group) ಜೊತೆಗಿದ್ದರು. ಟ್ರಸ್ಟಿಗಳಾದ ಡಾ| ಎಂ.ಎಂ.ಚಂಗಪ್ಪ, ಡಾ|ಪಿ.ಜಿ.ಚಂಗಪ್ಪ, ವೈದ್ಯಾಧಿಕಾರಿ ಡಾ| ಚಂದ್ರು ಮುಂತಾದವರು ಹಾಜರಿದ್ದರು. ಎಲ್ಲಾ ದಾನಿಗಳಿಗೂ ಅಭಿನಂದನೆಗಳು. ಜನಸೇವೆಯಲ್ಲಿ ಟ್ರಸ್ಟ್ ನಡೆಸುತ್ತಿರುವ ಟ್ರಸ್ಟಿಗಳಿಗೂ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಎಲ್ಲರಿಗೂ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Ammathi #Begur #Chiniwada #Gonikoppal #Shivakeri #Talakaveri #Chennayyanakote #CHIC #CheshireHomes #Pollibetta
Children's Day with children, 15/11/2022
Children's Day with children. ಮಕ್ಕಳ ಜೊತೆ ಮಕ್ಕಳ ದಿನಾಚರಣೆ
ಚಿಕ್ ಸಂಸ್ಥೆಯವರು (Cheshire Homes India Coorg - CHIC) ಪಾಲಿಬೆಟ್ಟದಲ್ಲಿ ನಡೆಸುವ ಉಚಿತ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅವರ ಜೊತೆ ಸಂಭ್ರಮಿಸುವ ಅವಕಾಶ ಒದಗಿ ಬಂತು. ಈ ಮಕ್ಕಳ ಮುಖದಲ್ಲಿ ಒಂದು ಚೂರು ಸಂತೋಷವನ್ನು ಹೆಚ್ಚು ಮಾಡುವ ಪ್ರಯತ್ನ ಮಾಡಿದ್ದೇನೆ.
ಸ್ವಯಂಸೇವಕರು ನಡೆಸುವ ಈ ಸಂಸ್ಥೆ ಮಕ್ಕಳ ಜೀವನದಲ್ಲಿ ವಿಶ್ವಾಸ ಮತ್ತು ಚೇತನ ತುಂಬಿಸುವ ಕಾರ್ಯ ಮಾಡುತ್ತಿರುವುದು ನೋಡಿ ಬಹಳ ಸಂತೋಷವಾಯಿತು. ಮುಂದಿನ ದಿನಗಳಲ್ಲಿ ಇವರ ಕಾರ್ಯ ಚಟುವಟಿಕೆಗಳು ಇನ್ನಷ್ಟು ಜನರ-ಮಕ್ಕಳ ಬಾಳಲ್ಲಿ ಬೆಳಕನ್ನು ತರಲಿ ಎಂದು ಹಾರೈಸಿದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #CHIC #CheshireHomes #Pollibetta

Wishing every child and the child in everyone a happy ChildrensDay2022, 14/11/2022
Wishing every child and the child in everyone a happy #ChildrensDay2022.
ಎಲ್ಲಾ ಮಕ್ಕಳಿಗೂ, ಮಕ್ಕಳಿನ ಮನಸ್ಸಿನ ಎಲ್ಲರಿಗೂ #ಮಕ್ಕಳ_ದಿನಾಚರಣೆಯ ಶುಭಾಶಯಗಳು.

Grant for Gowda Samaja, 13/11/2022
Grant for Gowda Samaja. ಗೌಡ ಸಮಾಜಕ್ಕೆ ಅನುದಾನ
ನಾಪೋಕ್ಲು ಬ್ಲಾಕ್'ನ ಭಾಗಮಂಡಲ ವಲಯದಲ್ಲಿ ತಲೆ ಎತ್ತಲಿರುವ ಗೌಡ ಸಮಾಜಕ್ಕೆ ಬೆಳಗಾವಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಎಂ.ನಾಗರಾಜು ರವರು ನನ್ನ ಕೋರಿಕೆ ಮೇರೆಗೆ ಶಾಸಕರ ನಿಧಿಯಿಂದ 3 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ಗೌಡ ಸಮಾಜಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮಾನ್ಯ ಎಂ.ನಾಗರಾಜು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಮಾಜವನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಿರುವ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸುತ್ತೇನೆ.
ಈ ಸಂದರ್ಭದಲ್ಲಿ, ಕೆದಂಬಾಡಿ ಟಿ ರಮೇಶ್, ಕುದುಪಜೆ ಕೆ ಪ್ರಕಾಶ್, ನಿಡ್ಯೆಮತಿ ವಿ ದಾಮೋದರ, ನಿಡ್ಯೆಮತಿ ಎಂ ರವಿಶಲ, ದೇವಂಗೋಡಿ ಎನ್ ಹರ್ಷ ಜೊತೆಗಿದ್ದರು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #GowdaSamaja

Donation of laptop and printer to the association of specially-abled people, 12/11/2022
Donation of laptop and printer to the association of specially-abled people. ದಿವ್ಯಾಂಗರ ಒಕ್ಕೂಟಕ್ಕೆ ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್ ವಿತರಣೆ
ಕೆಲ ದಿನಗಳ ಹಿಂದೆ ಪೊನ್ನಂಪೇಟೆಯ ದಿವ್ಯಾಂಗರ ಒಕ್ಕೂಟಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಕಚೇರಿಗೆ ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್ ಅವಶ್ಯಕತೆಯ ಬಗ್ಗೆ ತಿಳಿಯಿತು.
ಈ ಸಲುವಾಗಿ ಮತ್ತೆ ಅಲ್ಲಿಗೆ ಭೇಟಿ ಕೊಟ್ಟು ಒಕ್ಕೂಟಕ್ಕೆ ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್'ಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ದಿವ್ಯಾಂಗರ ಒಳಿತಿಗೆ ದುಡಿಯುತ್ತಿರುವ ಈ ಸಂಸ್ಥೆಗೆ ಇನ್ನಷ್ಟು ಬಲ ಬಂದು ಮತ್ತಷ್ಟು ಸಮಾಜಸೇವೆ ಅವರಿಂದ ಆಗಲಿ ಎಂದು ಹಾರೈಸುತ್ತೇನೆ. ಅವರ ಸಮಾಜಮುಖಿ ಕೆಲಸಗಳಿಗೆ ಸದಾ ನನ್ನ ಬೆಂಬಲವಿರಲಿದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #SpeciallyAbled
