Hon'ble Chief Minister Shri Siddaramaiah, Deputy Chief Minister Shri D K Shivakumar, Ministers Shri Priyank Kharge, Bhairati Suresh, Lakshmi Hebbalkar, T at the Bridge to Bangalore Technical Summit program held in New Delhi. Participated with B Jayachandr, 02/08/2025

ನವ ದೆಹಲಿಯಲ್ಲಿ ನಡೆದ ಬ್ರಿಡ್ಜ್ ಟು ಬೆಂಗಳೂರು ತಾಂತ್ರಿಕ ಶೃಂಗಸಭೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್, ಸಚಿವರುಗಳಾದ ಶ್ರೀ ಪ್ರಿಯಾಂಕ್ ಖರ್ಗೆ, ಭೈರತಿ ಸುರೇಶ್, ಲಕ್ಷ್ಮಿ ಹೆಬ್ಬಾಳ್ಕರ್, ಟಿ.ಬಿ ಜಯಚಂದ್ರ, ದೇಶ ವಿದೇಶಗಳ ಪ್ರಮುಖ ಮಾಹಿತಿ-ತಂತ್ರಜ್ಞಾನ ಕಂಪನಿಗಳ ಮುಖ್ಯಸ್ಥರು, ವಿವಿಧ ದೇಶದ ರಾಯಭಾರಿಗಳು, ಹಿರಿಯ ಅಧಿಕಾರಿಗಳ ಜೊತೆ ಭಾಗವಹಿಸಲಾಯಿತು.
 
 
 
 
 
 

Honorable Chief Minister Sri Siddaramaiah held a special meeting with Kodagu District In-charge Ministers and MLAs at his office in Vidhana Soudha. Explained to the Honorable Chief Minister about the development, grants and problems of Kodagu district., 30/07/2025

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಇಂದು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳೊಂದಿಗೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ವಿಶೇಷ ಸಭೆ ನಡೆಸಿದರು. ಕೊಡಗು ಜಿಲ್ಲೆಯ ಅಭಿವೃದ್ಧಿ, ಅನುದಾನ ಹಾಗೂ ಸಮಸ್ಯೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ವಿವರಿಸಲಾಯಿತು.
 
 
 
 
 
 

Happy Nagara Panchami to all the people of the state, 29/07/2025

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು.
 
 
 
 
 
 

5th year pressure meeting of Kgatnad Kodava Sangha residing in Bangalore, was held today at Haradasa Appaneravanda Appaccha Kavi Sabhavan. On the occasion of participating as the chief guest of this program and wished good luck., 29/07/2025

ಬೆಂಗಳೂರಿನಲ್ಲಿ ವಾಸವಿರುವ ಕ್‌ಗ್ಗಟ್‌ನಾಡ್ ಕೊಡವ ಸಂಘದ 5 ನೇ ವರ್ಷದ ಒತ್ತೋರ್ಮೆ ಕೂಟ, ಬೆಂಗಳೂರು ಕೊಡವ ಸಮಾಜದ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಭವನದಲ್ಲಿ ಇಂದು ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದ ಸಂದರ್ಭ.
 
 
 
 
 
 
 
 
 
 
 

Kargil Vijay Diwas program organized by Kodagu Journalists Association (R) and Rotary Misty Hills jointly organized and paid tribute to soldiers and paid tribute to soldiers., 29/07/2025

ಕೊಡಗು ಪತ್ರಕರ್ತರ ಸಂಘ (ರಿ) ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಮತ್ತು ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ವೀರ ಯೋಧರಿಗೆ ಗೌರವಾರ್ಪಣೆ ಮಾಡಲಾಯಿತು.