Visited Lakkunda Paisari, Ponnampet taluk Kanur village panchayat, Virajpet assembly constituency and observed the development of basic facilities there and requested various demands., 07/08/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಕಾನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ, ಲಕ್ಕುಂದ ಪೈಸಾರಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯದ ಅಭಿವೃದ್ಧಿಯ ವೀಕ್ಷಣೆ ಮಾಡಿ ವಿವಿಧ ಬೇಡಿಕೆಗಳ ಮನವಿಯನ್ನು ಸ್ವೀಕರಿಸಲಾಯಿತು/div>
My wife Mrs. Kanchan participated as the chief guest in the Kakkada Namme program held at Madikeri Kodava Samaja Pommakkada Koota and Madikeri Kodava Samaja. Kodava Samaja Pommakkada Kuttam symbol broch (decorative jewellery used to strip saree) jewellery, 04/08/2025
ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಮಡಿಕೇರಿ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ನಡೆದ, ಕಕ್ಕಡ ನಮ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ರವರು ಭಾಗವಹಿಸಿದರು. ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಚಿಹ್ನೆ ಇರುವ ಬ್ರೋಚ್ (ಸೀರೆ ಸಿಕ್ಕಿಸಲು ಬಳಸುವ ಅಲಂಕಾರಿಕ ಆಭರಣ) ಆಭರಣವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ನನ್ನ ಶ್ರೀಮತಿ ರವರು , ನಮ್ಮ ಪೂರ್ವಿಕರು ನಮಗೆ ಬದುಕಿನ ಶಿಸ್ತಿನ ಜೊತೆಗೆ ಆಹಾರ ಪದ್ದತಿಯಲ್ಲಿಯೂ ಕೂಡ ಶಿಸ್ತನ್ನು ಬಳುವಳಿಯಾಗಿ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನ ಪರಿಸರ ಹಾಗೂ ಹವಾಗುಣಕ್ಕನ್ನುಸಾರವಾಗಿ, ಕಾಲಕಾಲಕ್ಕೆ ವಿವಿಧ ಬಗೆಯ ಆಹಾರ ಬಳಕೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ತಿಳಿದುಕೊಂಡಿದ್ದರು ಎಂದರೆ, ಅವರ ಜಾಣ್ಮೆ ಹಾಗೂ ವೈಜ್ಞಾನಿಕ ಚಿಂತನೆಯನ್ನು ನಾವು ಮೆಚ್ಚಲೇ ಬೇಕು. ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ವೈವಿಧ್ಯಮಯ ಆಹಾರ ಬಳಕೆ ಮಾಡುತ್ತಿದ್ದು, ಇವುಗಳನ್ನು ಕಕ್ಕಡ ನಮ್ಮೆಯಲ್ಲಿ ಪ್ರದರ್ಶನಮಾಡಿ ನಮ್ಮ ಪರಂಪರೆಯನ್ನು ಮುಂದಿನ ಪೀಳಗೆಗೆ ಶಾಶ್ವತವಾಗಿ ಉಳಿಸಲು ಪೊಮ್ಮಕ್ಕಡ ಕೂಟದ ಪ್ರಯತ್ನ ಶ್ಲಾಘನೀಯ ಹಾಗೂ ಅತ್ಯಂತ ಸಮಯೋಚಿತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
Happy Kakkada/Aati 18 to all the people of the state. Nad's Majanak Kakkada 18th day's Nallame., 03/08/2025
ನಾಡಿನ ಸಮಸ್ತ ಜನತೆಗೆ ಕಕ್ಕಡ/ಆಟಿ 18ರ ಶುಭಾಶಯಗಳು. ನಾಡ್ ರ ಮಾಜನಕ್ ಕಕ್ಕಡ 18ನೇ ನಾಳ್ ರ ನಲ್ಲಾಮೆ.
To the great politician Karnataka has seen, the great success of five guarantees, the poor-bad, the religious-dalit hope, the thinker of social justice, the greatest economist, the popular Chief Minister Honorable Shri Siddaramaiah Happy birthday to you., 03/08/2025
ಕರ್ನಾಟಕ ರಾಜ್ಯ ಕಂಡ ಮೇರು ರಾಜಕಾರಣಿ, ಪಂಚ ಗ್ಯಾರಂಟಿಗಳ ಅದ್ಭುತ ಯಶಸ್ಸಿನ ರೂವಾರಿ, ಬಡವ-ಬಲ್ಲಿದ, ದೀನ~ದಲಿತರ ಆಶಾಕಿರಣ, ಸಾಮಾಜಿಕ ನ್ಯಾಯದ ಚಿಂತಕ, ಶ್ರೇಷ್ಠ ಆರ್ಥಿಕ ತಜ್ಞ, ಅಪಾರ ಜನಮನ್ನಣೆಯುಳ್ಳ ಜನಪ್ರಿಯ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರಿಗೆ ಜನ್ಮದಿನದ ಶುಭಾಶಯಗಳು.
Annual conference was held by the Department of Law-Human Rights and Information of All India Congress Committee at Science Bhavan, New Delhi. The conference was overwhelmed, a long discussion on the rights of the constitution, protection of the constitut, 03/08/2025
ನವದೆಹಲಿಯ ವಿಜ್ಞಾನ ಭವನದಲ್ಲಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾನೂನು-ಮಾನವ ಹಕ್ಕು ಮತ್ತು ಮಾಹಿತಿ ಇಲಾಖೆಯ ವತಿಯಿಂದ ವಾರ್ಷಿಕ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಅತಿ ಯಶಸ್ಸಾಗಿ, ಸಂವಿಧಾನದ ಹಕ್ಕುಗಳು, ಸಂವಿಧಾನದ ರಕ್ಷಣೆ ಹಾಗೂ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ ವಿಚಾರವಾಗಿ ಸುಧೀರ್ಘವಾದ ಚರ್ಚೆ ನಡೆಸಲಾಯಿತು. ಸಮಾವೇಶದ ವೇದಿಕೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ, ಸಂಸದರಾದ ಶ್ರೀಮತಿ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರೊಂದಿಗೆ ಭಾಗವಹಿಸಲಾಯಿತು