He promised to withdraw from the election campaign and work for the party candidate, 27/04/2018

ಚುನಾವಣಾ ಅಕಾಡದಿಂದ ಹಿಂದೆ ಸರಿದು ಪಕ್ಷದ ಅಭ್ಯರ್ಥಿಗಾಗಿ ದುಡಿಯುವ ಭರವಸೆ. ಕಾಂಗ್ರೆಸ್ ನಾಯಕಿ ಹಾಗು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪನವರನ್ನು ಇಂದು ಭೇಟಿ ಮಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಪದ್ಮಿನಿ ಪೊನ್ನಪ್ಪ ನಾಮಪತ್ರ ಹಿಂಪಡೆಯುವ ಭರವಸೆ ನೀಡಿದ್ದು ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಅವರು ತಿಳಿಸಿದ್ದಾರೆ
 
 
img
 

Pre-election 2018 meeting of booth, zone and block level workers was held, 22/04/2018

ಕೊಡಗು ಜಿಲ್ಲಾ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ವತಿಯಿಂದ 2018ರ ಚುನಾವಣಾ ಪೂರ್ವಭಾವಿ ಬೂತ್,ವಲಯ,ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಕಲ್ ರಮಾನಾಥ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು..ಈ ಸಭೆಯಲ್ಲಿ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅರುಣ್ ಮಾಚಯ್ಯ ರವರು ಪಾಲ್ಗೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದರು..
 
 
img
 

The government has sanctioned a grant of Rs.50 crore for road development in Kodagu district., 04/03/2018

ಕೊಡಗು ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ ರೂ.50 ಕೋಟಿ ಅನುದಾನಕ್ಕೆ ಸರಕಾರ ಮಂಜೂರಾತಿ ನೀಡಿದೆ. ಈ ಅನುದಾನ ಮಂಜೂರು ಮಾಡಲು ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಕದ್ದಣಿಯಂಡ ಹರೀಶ್ ಬೋಪಣ್ಣನವರಿಗೆ ಕೃತಜ್ಞತೆಗಳು…
 
 
img
 

Napanda Muttappa participated and laid the foundation stone of the Sabha Bhavan to be constructed in the Kanna_Balamurri temple premises, 22/02/2018

ಕೊಡಗು ಜಿಲ್ಲೆಯ ಮೂರ್ನಾಡಿನ #ಕಣ್ಣ_ಬಲಮುರಿ ದೇವಾಲಯದ ಚಂಡಿಕಾಯಾಗದಲ್ಲಿ ರಾಜ್ಯ ಐ.ಎನ್. ಟಿ.ಯು.ಸಿ.ಉಪಾಧ್ಯಕ್ಷರಾದ ನಾಪಂಡ ಮುಟ್ಟಪ್ಪರವರು ಪಾಲ್ಗೊಂಡು ದೇವಾಲಯದ ಆವರಣದಲ್ಲಿ ನಿರ್ಮಾಣವಾಗಲಿರುವ ಸಭಾ ಭವನ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
 
 
img
 

Shri Veena Acchaiah, Member of the Karnataka Legislative Council, laid the foundation stone for works worth about 64 lakhs, 29/12/2017

ಕೊಡಗು ಜಿಲ್ಲೆಯ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 64 ಲಕ್ಷದ ಕಾಮಗಾರಿಗಳಿಗೆ ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ವೀಣಾ ಅಚ್ಚಯ್ಯನವರು ಶಿಲಾನ್ಯಾಸವನ್ನು ನೆರವೇರಿಸಿದರು.
 
 
img