I am extremely happy that I was honored at the annual function of the Ajjikutteera family, 10/10/2021
ಅಜ್ಜಿಕುಟ್ಟೀರ ಕುಟುಂಬದ ವಾರ್ಷಿಕ ಮಹಾಸಭೆಯಂದು ನನ್ನನ್ನು ಸನ್ಮಾನಿಸಿದ್ದು ನನಗೆ ಅತೀವ ಸಂತೋಷವನ್ನು ಉಂಟು ಮಾಡಿದೆ. ನನ್ನದೇ ಕುಟುಂಬ ನನ್ನನ್ನು ಗುರುತಿಸಿರುವುದಕ್ಕಿಂತ ದೊಡ್ಡ ಸನ್ಮಾನ ಮತ್ತೊಂದಿಲ್ಲ. ಕುಟುಂಬದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಕುಟುಂಬದ ಎಲ್ಲಾ ಹಿರಿಯರು ಹಾಗೂ ಸದಸ್ಯರಿಗೆ ನಾನು ಆಭಾರಿಯಾಗಿದ್ದೇನೆ.
Tributes to the Father of the Nation, Mahatma Gandhi on his 152nd birth anniversary, 02/10/2021
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 152ನೇ ಜನ್ಮ ದಿನಾಚರಣೆಯ ಶುಭಾಶಯಗಳು.
"You may never know what results come of your actions, but if you do nothing, there will be no results." Tributes to the Father of the Nation, Mahatma Gandhi on his 152nd birth anniversary. #GandhiJayanti #ಗಾಂಧಿಜಯಂತಿ
Press release on Tok Namme and coconut shooting competition, 29/09/2021
ಮಾಯಮುಡಿಯಲ್ಲಿ ಐರನ್ ಸೈಟ್ ಶೂಟರ್ಸ್ ಆಯೋಜಿಸಿದ್ದ ಕೈಲ್ ಪೋಳ್ದ್ ಹಬ್ಬದ ಅಂಗವಾಗಿ ತೋಕ್ ನಮ್ಮೆ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಬಗ್ಗೆ ಪತ್ರಿಕಾ ವರದಿ. ಕೋವಿ ಹಕ್ಕು ಮತ್ತು ಇದರ ಬಗ್ಗೆ ಉಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಈ ಸಂದರ್ಭದಲ್ಲಿ ವಿವರಿಸಿದ್ದೆ. ಧನ್ಯವಾದಳು Andolana
Participated in a felicitation program organized by Pigmi Collectors Association of Madikeri, 26/09/2021
ಮಡಿಕೇರಿಯ ಪಿಗ್ಮಿ ಕಲೆಕ್ಟರ್ಸ್ ಅಸ್ಸೋಸಿಯೇಷನ್ ನವರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡಿದ್ದೆ. ಈಗಿನ ಪರಿಸ್ಥಿತಿಯಲ್ಲಿ ಸಂಘಟನೆಯ ಅನಿವಾರ್ಯತೆ ಬಗ್ಗೆ ಮಾತನಾಡಿದೆ. ನನ್ನನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಅಸೋಸಿಯೇಷನ್'ನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ನನ್ನ ಧನ್ಯವಾದಗಳು.
Participated in the condolence meeting on the death of Chembu village panchayat member Smt. Kamala, 26/09/2021
ಚೆಂಬು ಗ್ರಾ.ಪಂ ಸದಸ್ಯೆ ಶ್ರೀಮತಿ ಕಮಲ ಅವರ ನಿಧನದ ಸಂತಾಪ ಸಭೆಯಲ್ಲಿ ಶನಿವಾರ ಪಾಲ್ಗೊಂಡು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಲಾಯಿತು. ಮೃತರ ಅಂತ್ಯಕ್ರಿಯೆ ಹಾಗೂ ಅವರ ಮಗಳ ಶಾಲಾ ವಿದ್ಯಾಭ್ಯಾಸದ ಹೊಣೆಯನ್ನು ಕಾಂಗ್ರೆಸ್ ಪಕ್ಷ ಮತ್ತು ಮುಖಂಡರು ವಹಿಸಿಕೊಂಡಿದ್ದೇವೆ.