Met the Kodagu District Collector to discuss the court order to transfer revenue department lands and revenue entries to the forest department, 24/10/2021

ಶನಿವಾರ ಒಂದು ನಿಯೋಗದೊಂದಿಗೆ ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಈಗ ನಡೆಯುತ್ತಿರುವಕಂದಾಯ ಇಲಾಖೆಯ ಜಾಗಗಳ ಸರ್ವೇ ಕಾರ್ಯ ಹಾಗೂ ರೆವೆನ್ಯೂ ನಮೂದನೆಗಳನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಬೇಕು ಎನ್ನುವ ನ್ಯಾಯಾಲಯದ ಆದೇಶದ ಬಗ್ಗೆ ಚರ್ಚೆ ನಡೆಸಿದೆವು. ಈ ವಿಷಯದಲ್ಲಿ ನ್ಯಾಯಾಲಯದ ತೀರ್ಪು ಜನರ ಹಿತದಲ್ಲಿ ಇಲ್ಲ. ಇದಕ್ಕೆ ಕಾರಣ ಸರ್ಕಾರ ವಿಷಯದ ಎಲ್ಲಾ ಮಾಹಿತಿಯನ್ನು ನ್ಯಾಯಾಲಯಕ್ಕೆ ಒದಗಿಸದೆ ಇರುವುದು. ಆದ ಕಾರಣ, ಸರ್ಕಾರ ವಿಷಯವಾಗಿ ಪುನರ್-ಪರಿಶೀಲನಾ ಅರ್ಜಿ (Review Petition) ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು ಕೂಡ ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕಾರಣ ಅವರು ಸರ್ಕಾರಕ್ಕೆ ಮನವರಿಕೆ ಮಾಡಿ ಪುನರ್-ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು ಎಂದು ಒತ್ತಾಯ ಮಾಡಿದ್ದೇವೆ. C ಮತ್ತು D ಜಾಗಗಳನ್ನು ಅರಣ್ಯ ಇಲಾಖೆಗೆ ವರ್ಗಾವಣೆಯಾಗಿದ್ದನ್ನು ಹಿಂಪಡೆದು ಆದೇಶ ಮಾಡಲಾಗಿತ್ತು. ಇದನ್ನು ಕೋರ್ಟ್ ಮುಂದೆ ಪ್ರಸ್ತಾಪಿಸಿಲ್ಲ. ಎರಡನೆಯದಾಗಿ ಈ ಹಿಂದಿನ ಜಿಲ್ಲಾಧಿಕಾರಿಗಳು ಲ್ಯಾಂಡ್ ರೆವೆನ್ಯೂ ಕಾಯ್ದೆ ಪ್ರಕಾರ ಈ ಜಮೀನುಗಳನ್ನು ಅರಣ್ಯ ಎಂದು ನಮೂದಿಸುವ ಬದಲು ಲ್ಯಾಂಡ್ ಬ್ಯಾಂಕ್ ಎಂದು ನಮೂದಿಸಬೇಕೆಂದು ಆದೇಶ ಮಾಡಿದ್ದರು. ಇದನ್ನೂ ಕೂಡ ಸರ್ಕಾರ ನ್ಯಾಯಾಲಯದ ಮುಂದೆ ತಿಳಿಸಲು ವಿಫಲವಾಗಿದೆ. ಇದರೊಂದಿಗೆ ಸಾವಿರಾರು ಸಣ್ಣ ಹಿಡುವಳಿದಾರರಿಗೆ ಒಂದು ನೋಟಿಸ್ ಕೂಡ ಜಾರಿಮಾಡದೆ, ಕಾನೂನಿನ ಅನೇಕ ಅಂಶಗಳನ್ನು ಕೋರ್ಟ್ ಗಮನಕ್ಕೆ ತರದೆ, ಅವರೆಲ್ಲರನ್ನೂ ಸಂಕಷ್ಟಕ್ಕೆ ದೂಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ನಮ್ಮ ಅರ್ಜಿಯಲ್ಲಿ ಇನ್ನು ಹಲವು ವಿಷಯಗಳನ್ನು ಮನವರಿಕೆ ಮಾಡಿ ಪುನರ್-ಪರಿಶೀಲನಾ ಅರ್ಜಿ ಶೀಘ್ರ ಸಲ್ಲಿಸುವಂತೆ ಒತ್ತಾಯ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಈ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ಧನ್ಯವಾದಗಳು. ನಮ್ಮ ನಿಯೋಗದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜಾ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್, ಸೂರಜ್ ಹೊಸೂರ್, ಸ್ಥಳೀಯ ಹಿರಿಯರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಎಲ್ಲರಿಗೂ ಧನ್ಯವಾದಗಳು.
 
 
img
 

Participated in the state level coconut shooting competition organised by Nalnad Planters Recreation Association in Napoklu, 24/10/2021

ನಾಲ್ನಾಡ್ ಪ್ಲಾಂಟರ್ಸ್ ರೇಕ್ರಿಯೇಷನ್ ಅಸ್ಸೊಸಿಯೇಶನ್ ಅವರು ನಪೋಕ್ಲು ವಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡಿದ್ದೆ. ನಮ್ಮ ಕೊಡಗಿನ ಸಾಂಪ್ರದಾಯಿಕ ಕ್ರೀಡೆಗಳನ್ನು ಪ್ರೋತ್ಸಾಹ ಮಾಡುತ್ತಿರುವ ಆಯೋಜಕರಿಗೂ, ಸ್ಪರ್ಧೆಯಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೂ, ವಿಜೇತರಿಗೂ ಅಭಿನಂದನೆಗಳು.
 
 
img
img
img
img
img
img
img
img
img
 

Offered pooja to goddess Durga Parameshwari in my native village Bellur in Virajpet, 18/10/2021

ವಿರಾಜಪೇಟೆಯ ನನ್ನ ಸ್ವಂತ ಊರಾದ ಬೆಳ್ಳೂರು ಗ್ರಾಮದ ದುರ್ಗಾಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಲು ಗ್ರಾಮದ ಹಿರಿಯರು ನನ್ನನು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಮುಖ್ಯಸ್ಥರು, ಹಿರಿಯರು ಮತ್ತು ಪ್ರಮುಖರ ಜೊತೆ ಸೇರಿ ತಾಯಿಯ ಪೂಜೆ ಮಾಡಿ ಆಶೀರ್ವಾದ ಪಡೆದೆ ???????? The people of my native village Bellur in Virajpet invited me to offer pooja to goddess Durga Parameshwari. I paid my obeisances and prayed to the deity in the presence of village elders, heads and prominent persons who participated in the pooja rituals.
 
 
img
img
img
img
img
img
img
img
img
img
 

Visited Talakaveri of Bhagamandala on the occasion of Kaveri Theerthodbhava, 12/10/2021

ಇನ್ನು ಕೆಲವೇ ದಿನಗಳಲ್ಲಿ ಜರುಗಲಿರುವ ಕೊಡಗಿನ ಅತ್ಯಂತ ಪವಿತ್ರ ಹಬ್ಬವಾದ ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲದ ತಲಕಾವೇರಿಗೆ ಭೇಟಿ ನೀಡಿ ಅಲ್ಲಿನ ಸಿದ್ಧತಾ ಕಾರ್ಯಗಳ ಬಗ್ಗೆ ದೇವಾಲಯ ವ್ಯವಸ್ಥಾಪಕ ಅಧಿಕಾರಿಗಳಿಂದ ಮಾಹಿತಿ ಪಡೆದೆ. ಇದೇ ಸಂದರ್ಭದಲ್ಲಿ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದೆ. ಭಕ್ತರಿಗೆ ಅನಗತ್ಯ ಅಡೆತಡೆ ಒಡ್ಡದೆ ಎಲ್ಲರಿಗೂ ತೀರ್ಥೋದ್ಭವದಲ್ಲಿ ಪಾಲ್ಗೊಳ್ಳುವ ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದ್ದೇನೆ. ????????

 
 

A program organized by Karnataka Dalit Sangharsha Samiti, Kodagu district to felicitate Covid Warriors, 11/10/2021

ಕೋವಿಡ್ ಸಂದರ್ಭದಲ್ಲಿ ಜನರಿಗೆ ನೆರವಾದ ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸುವ ಅವಕಾಶ ಒದಗಿಸಿಕೊಟ್ಟ ಸಮಿತಿಯ ಎಲ್ಲರಿಗೂ ಧನ್ಯವಾದಗಳು. ದ.ಸ.ಸ ದ ಸದಸ್ಯತ್ವ ಅಭಿಯಾನವೂ ಹಮ್ಮಿಕೊಳ್ಳಲಾಗಿತ್ತು. ಎಲ್ಲರಿಗೂ ಅಭಿನಂದನೆಗಳು.