Condolence meet for senior leader K.C Raja, 08/02/2022

Condolence meet for senior leader K.C Raja ಕೆಲವು ದಿನಗಳ ಹಿಂದೆ ನಮ್ಮನ್ನು ಅಗಲಿದ, ಕೆ.ಸಿ ರಾಜ ಎಂದು ಎಲ್ಲರಿಗೂ ಚಿರಪರಿಚಿತರಾದಂತಹ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಂತಾಪ ಸಭೆಯಲ್ಲಿ ಭಾಗವಹಿಸಿ, ಪಕ್ಷಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಮತ್ತು ಅವರ ಅಕಾಲಿಗ ಅಗಲಿಕೆಯಿಂದ ಪಕ್ಷಕ್ಕೆ ಆಗಿರುವ ನಷ್ಟವನ್ನು ಸ್ಮರಿಸಿದೆ. ಅವರ ಕುಟುಂಬಕ್ಕೆ, ಅವರ ಸ್ನೇಹಿತರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಬೆಂಬಲಿಗರಿಗೆ ಅವರ ಅಕಾಲಿಕ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಕಾವೇರಿ ಹಾಗೂ ಇಗ್ಗುತಪ್ಪ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದೆ.
 
 
img
img
img
img
 

Madanda Thimmaiah assuming office as Virajpet town president of the party, 07/02/2022

Madanda Thimmaiah assuming office as Virajpet town president of the party ನೂತನವಾಗಿ ವಿರಾಜಪೇಟೆ ಪಟ್ಟಣ ಅಧ್ಯಕ್ಷರಾಗಿ ಮಾದಂಡ ತಿಮ್ಮಯ್ಯ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ, ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡಿ, ಅವರಿಗೆ ಸಂಪೂರ್ಣ ಬೆಂಬಲ ಹಾಗೂ ಸಹಕಾರದ ಆಶ್ವಾಸನೆಯನ್ನು ಕೊಟ್ಟು, ಪಕ್ಷವನ್ನು ಸದೃಢವಾಗಿ ಕಟ್ಟುವಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎನ್ನುವ ಸಲಹೆಯನ್ನು ಕೂಡ ನೀಡಿದೆ. ಹದಿನಾಲ್ಕು ಅಂತಾರಾಷ್ಟ್ರೀಯ ರಗ್ಬಿ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ ತಿಮ್ಮಯ್ಯ ಅವರು ತಮ್ಮ ಎಲ್ಲಾ ಕೌಶಲ್ಯ ಹಾಗೂ ಅನುಭವಗಳನ್ನು ಬಳಸಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತಾರೆ ಎನ್ನುವ ಭರವಸೆ ಇದೆ.
 
 
img
img
img
img
 

Humble tributes to India's nightingale, Bharat Ratna LataMangeshkar, 06/02/2022

ಗಾನ ಕೋಗಿಲೆ #ಲತಾಮಂಗೇಶ್ಕರ್ ಅವರ ನಿಧನದ ಸುದ್ದಿ ಆಘಾತ ತಂದಿದೆ. ಹಲವು ಪೀಳಿಗೆಗಳ ಸಂಗೀತ ರಸಿಕರಿಗೆ ತಮ್ಮ ಹಾಡುಗಳ ಮಾಂತ್ರಿಕತೆಯಿಂದ ಮೋಡಿಮಾಡಿದ ಭಾರತ ರತ್ನಕ್ಕೆ ನನ್ನ ಅಶ್ರುನಮನಗಳು. My humble tributes to India's nightingale, Bharat Ratna #LataMangeshkar. She will forever live in our hearts through her songs ????????
 
 
img
 

Inauguration of the new party office in Ponnampet, Kodagu, 06/02/2022

Inauguration of the new party office in Ponnampet, Kodagu, on Saturday.
 
ಹೊಸದಾಗಿ ಕಾಂಗ್ರೆಸ್ ಪಕ್ಷದ ಪೊನ್ನಂಪೇಟ್ ಬ್ಲಾಕ್'ನ ವಲಯ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಭಾಗವಹಿಸಿದ ಸಂದರ್ಭ. ಈ ಭಾಗದ ಕಾಂಗ್ರೆಸ್ ಪಕ್ಷದ ಅತಿ ಹಿರಿಯ ನಾಯಕರಾದಂತಹ ಮನೆಯಪಂಡ ವಿಠಲ್ ಅಪ್ಪಯ್ಯ ಉದ್ಘಾಟಿಸಿದರು.
ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯರು, ಹಿರಿಯ ನಾಯಕರು, ಈ ಕಾರ್ಯಕ್ರಮದಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಿದರು. ಕಾಂಗ್ರೆಸ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಎಲ್ಲರು ಜೊತೆ ಸೇರಿ, ಹಿರಿಯರ ಮಾರ್ಗದರ್ಶನದಲ್ಲಿ, ಯುವಕರ ಸಹಯೋಗದೊಂದಿಗೆ, ಕಟ್ಟುವಂತ ದೃಢ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
 
 

Gonikoppa Premier League cricket tournament by Youth Wing, 29/01/2022

Gonikoppa Premier League cricket tournament by Youth Wing
7 Star ಯೂತ್ ವಿಂಗ್, ಗೋಣಿಕೊಪ್ಪ ಅವರು ಆಯೋಜಿಸಿದ್ದ 6ನೇ ವರ್ಷದ ಗೋಣಿಕೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಾರಂಭದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳು ಹಾಗೂ ಆಯೋಜಕರಿಗೆ ಶುಭಕೋರಿದ ಸಂಧರ್ಭ. ಕೊಡಗು ಜಿಲ್ಲೆಯಿಂದ ಸಾಕಷ್ಟು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ. ಸ್ಥಳೀಯವಾಗಿ ಆಯೋಜಿಸುವ ಈ ರೀತಿಯ ಪಂದ್ಯಾವಳಿಗಳಿಂದ ಇನ್ನಷ್ಟು ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ಪಂದ್ಯಾವಳಿ ಆಯೋಜಕರು, ಜಿ.ಪಿ.ಎಲ್ ಕುಟುಂಬ ಮತ್ತು ಪ್ಲಾಗೊಂಡ ಎಲ್ಲಾ ಕ್ರೀಡಾಪ್ರೇಮಿಗಳಿಗೂ ಅಭಿನಂದನೆಗಳು.
 
img
img