Honoured to inaugurate the finals of the Erava community Cricket tournament, 03/03/2022

ಎರವ ಸಮುದಾಯದ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯವನ್ನು ಉದ್ಘಾಟಿಸಲು ಆಯೋಜಕರು ನನ್ನನ್ನು ಆಮಂತ್ರಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಸಂತಸ ತಂದಿದೆ.
 
ನಮ್ಮ ದೇಶದಲ್ಲಿರುವ ಎಲ್ಲಾ ಕಾಲ್ಪನಿಕ ಭೇದಭಾವಗಳು, ಜಾತಿ-ಧರ್ಮ, ಆಸ್ತಿ-ಅಂತಸ್ತಿನ ಅಂತರಗಳನ್ನು ಕೂಡ ಭೇದಿಸುವಂತಹ ಶಕ್ತಿ ಕ್ರೀಡೆಗಿದೆ. ಅದರಲ್ಲೂ ನಮ್ಮ ದೇಶದಲ್ಲಿ ಕ್ರಿಕೆಟ್ ಕ್ರೀಡೆಗೆ ಇನ್ನಷ್ಟು ಶಕ್ತಿ ಇದೆ. ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಾ ಜನ ಬೆರೆಲ್ಲವನ್ನು ಮರೆತು ಭಾಗವಹಿಸುತ್ತಾರೆ.
 
ಮುಂದಿನ ದಿನಗಳಲ್ಲಿ ಕ್ರೀಡೆಯ ಮೂಲಕ ನಮ್ಮಲ್ಲಿರುವ ಎಲ್ಲ ಅಂತರಗಳನ್ನು ತೊಡೆದು ಹಾಕಿ, ದೇಶದ ಅಭಿವೃದ್ಧಿಗೆ ಒಂದಾಗಿ ದುಡಿಯುವಂತಹ ಸಂಧರ್ಭ ಒದಗಲಿ ಎಂದು ತಾಯಿ ಕಾವೇರಿಯಲ್ಲಿ ಪ್ರಾರ್ಥಿಸುತ್ತೇನೆ.
 
ಈ ಕ್ರೀಡಾಕೂಟವನ್ನು ಅಯ್ಯೊಜಿಸಿದ್ದ ಮತ್ತು ನನ್ನನು ಅತ್ಯಂತ ಪ್ರೀತಿಯಿಂದ, ಗೌರವದಿಂದ ಮತ್ತು ಆತ್ಮೀಯತೆಯಿಂದ ಬರಮಾಡಿಕೊಂಡ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಮತ್ತು ಧನ್ಯವಾದಳನ್ನು ಸಲ್ಲಿಸುತ್ತೇನೆ.
 
 
img
img
img
img
img
img
 

My condolences to the family and friends of Naveen, the Karnataka student who was killed in Ukraine, 02/03/2022

My condolences to the family and friends of Naveen, the Karnataka student who was killed in Ukraine. My heart goes out to the young medical student who life has been cut short by war. We have to redouble our efforts to bring back all Indians safely back to India.
 
ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್, ಉಕ್ರೇನ್ ನಲ್ಲಿ ಸಾವನ್ನಪ್ಪಿರುವುದು ಆಘಾತದ ಸುದ್ದಿ. ಉಕ್ರೇನ್ ನಲ್ಲಿ ಇನ್ನು ಸಿಲುಕಿರುವ ಭಾರತೀಯರನ್ನು ಕ್ಷೇಮವಾಗಿ ಕರೆತರುವ ಬಗ್ಗೆ ಸರ್ಕಾರದಿಂದ ಇನ್ನಷ್ಟು ತೀವ್ರಗತಿಯ ಕಾರ್ಯಗಳು ಆಗಬೇಕಿದೆ. ನವೀನ್ ಕುಟುಂಬದ ದುಃಖದಲ್ಲಿ ಭಾರತೀಯರೆಲ್ಲರು ಭಾಗಿಯಾಗಿದ್ದೇವೆ.
 
 
img
 

Membership drive at Virajpet block, 01/03/2022

ಕೊಡಗಿನ ವಿರಾಜಪೇಟೆಯಲ್ಲಿ ನಮ್ಮ ಪಕ್ಷದ ತತ್ವ ಸಿದ್ದಾಂತಗಳನ್ನು ಅನುಸರಿಸುವ ಮತ್ತು ಪಕ್ಷಕ್ಕೆ ದುಡಿಯುವ ಹುಮ್ಮಸ್ಸು ಇರುವವರನ್ನು ಪಕ್ಷಕ್ಕೆ ಸೇರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನದ ಅವಶ್ಯಕತೆ ಬಗ್ಗೆ ಮಾತನಾಡಿದೆ. ಪಕ್ಷದ ಸಿದ್ಧಾಂತಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸುವ ಬಗ್ಗೆ ಮತ್ತು ಪಕ್ಷದಲ್ಲಿ ಇರುವವರ ಹೊಣೆಗಾರಿಕೆಗಳ ಬಗ್ಗೆ ಮಾತನಾಡಿದೆ. ಪಕ್ಷದ ಬಗ್ಗೆ ನಿಷ್ಠೆ, ಸೈದ್ಧಾಂತಿಕ ಬದ್ಧತೆಯ ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟದ ಅವಶ್ಯಕತೆ ಬಗ್ಗೆ ವಿವರಿಸಿದೆ.
 
 
img
img
img
img
 

Membership drive at Ponnampet and Napoklu, 28/02/2022

ಕೊಡಗಿನ ಪೊನ್ನಂಪೇಟೆ ಮತ್ತು ನಾಪೋಕ್ಲುಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿ ಪಕ್ಷದ ಸಿದ್ಧಾಂತಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸುವ ಬಗ್ಗೆ ಮತ್ತು ಪಕ್ಷದಲ್ಲಿ ಇರುವವರ ಹೊಣೆಗಾರಿಕೆಗಳ ಬಗ್ಗೆ ಮಾತನಾಡಿದೆ. ಪಕ್ಷದ ಬಗ್ಗೆ ನಿಷ್ಠೆ, ಸೈದ್ಧಾಂತಿಕ ಬದ್ಧತೆಯ ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟದ ಅವಶ್ಯಕತೆ ಬಗ್ಗೆ ವಿವರಿಸಿದೆ.
 
 
img
img
img
img
img
img
 

Final darshan of Altaf Ahmed, a soldier of Virajapete of Kodagu who recently died in Kashmir, 27/02/2022

ಇತ್ತೀಚಿಗೆ ಕಾಶ್ಮೀರದಲ್ಲಿ ವೀರಮರಣವನ್ನು ಹೊಂದಿದ ಕೊಡಗಿನ ವಿರಾಜಪೇಟೆಯ ಯೋಧ ಅಲ್ತಾಫ್ ಅಹಮದ್ ರವರ ಅಂತಿಮ ದರ್ಶನವನ್ನು ಶನಿವಾರ ಪಡೆದು, ವೀರಯೋಧನ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದೆ. ಅವರ ಮನೆಯವರಿಗೆ ಸಾಂತ್ವನ ಹೇಳಿ ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅವರ ಆತ್ಮಕ್ಕೆ ಶಾಂತಿ ಕೋರಿದೆ. ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ವಿರಾಜಪೇಟೆಗೆ ರಸ್ತೆಯ ಮೂಲಕ ಆಗಮಿಸಿದ ಯೋಧನ ಪ್ರಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಾವಿರಾರು ಜನರು ಪಡೆದಿದ್ದು ಕೊಡಗಿನ ವೀರಪರಂಪರೆಗೆ ಸಾಕ್ಷಿಯಾಗಿತ್ತು. ????????
 
 
img
img
img
img
img
img