Participated in a felicitation program organized by Pigmi Collectors Association of Madikeri, 26/09/2021

ಮಡಿಕೇರಿಯ ಪಿಗ್ಮಿ ಕಲೆಕ್ಟರ್ಸ್ ಅಸ್ಸೋಸಿಯೇಷನ್ ನವರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡಿದ್ದೆ. ಈಗಿನ ಪರಿಸ್ಥಿತಿಯಲ್ಲಿ ಸಂಘಟನೆಯ ಅನಿವಾರ್ಯತೆ ಬಗ್ಗೆ ಮಾತನಾಡಿದೆ. ನನ್ನನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಅಸೋಸಿಯೇಷನ್'ನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ನನ್ನ ಧನ್ಯವಾದಗಳು.

 
 

Participated in the condolence meeting on the death of Chembu village panchayat member Smt. Kamala, 26/09/2021

ಚೆಂಬು ಗ್ರಾ.ಪಂ ಸದಸ್ಯೆ ಶ್ರೀಮತಿ ಕಮಲ ಅವರ ನಿಧನದ ಸಂತಾಪ ಸಭೆಯಲ್ಲಿ ಶನಿವಾರ ಪಾಲ್ಗೊಂಡು ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಲಾಯಿತು. ಮೃತರ ಅಂತ್ಯಕ್ರಿಯೆ ಹಾಗೂ ಅವರ ಮಗಳ ಶಾಲಾ ವಿದ್ಯಾಭ್ಯಾಸದ ಹೊಣೆಯನ್ನು ಕಾಂಗ್ರೆಸ್ ಪಕ್ಷ ಮತ್ತು ಮುಖಂಡರು ವಹಿಸಿಕೊಂಡಿದ್ದೇವೆ.

 
 

The state-level competition of shooting coconut and coconut organized by Iron Site Shooters, 26/09/2021

ಐರನ್ ಸೈಟ್ ಶೂಟರ್ಸ್ ಸಂಸ್ಥೆಯವರು ಕೈಲ್ ಪೋಳ್ದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ತೋಕ್ ನಮ್ಮೆ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ರಾಜ್ಯ ಮಟ್ಟದ ಸ್ಪರ್ಧೆಯನ್ನು ಮಾಯಮೂಡಿಯಲ್ಲಿ ಇಂದು ಭಾನುವಾರ ಉದ್ಘಾಟಿಸುವ ಸದಾವಕಾಶ ಒದಗಿಬಂತು.
ಈ ಸಂದರ್ಭದಲ್ಲಿ, ಈ ರೀತಿಯ ನಮ್ಮ ಸಂಸ್ಕೃತಿಯನ್ನು ಕಾಪಾಡಿ ಬೆಳೆಸುವ ಅವಶ್ಯಕತೆ ಬಗ್ಗೆ ಮಾತನಾಡಿದೆ. ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಬಂದೂಕು ಪರವಾನಗಿಯಲ್ಲಿ ವಿನಾಯತಿ ದೊರೆಯಲು ಕಾರಣ ನಮ್ಮ ವಿಶಿಷ್ಟ ಸಂಪ್ರದಾಯಗಳು ಮತ್ತು ಸಂಸ್ಕೃತಿ ಎನ್ನುವುದನ್ನು ವಿವರಿಸಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಇನ್ನು ಹೆಚ್ಚು ಮತ್ತು ವಿವಿಧ ಸ್ಥಳಗಳಲ್ಲಿ ಆಯೋಜಿಸುವ ಅವಶ್ಯಕತೆ ಬಗ್ಗೆ ಮಾತನಾಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಐರನ್ ಸೈಟ್ ಶೂಟರ್ಸ್ಬಸಂಸ್ಥೆಯ ಆಪಟ್ಟಿರ ಆರ್.ಅಯ್ಯಪ್ಪ, ಅಂತಾರಾಷ್ಟ್ರೀಯ ಆಟಗಾರರಾದ ಮಾದಂಡ ಪಿ.ತಿಮ್ಮಯ್ಯ, ಕರ್ನಲ್ ಬಿ.ಕೆ.ಸುಬ್ರಮಣಿ,
ಅಪ್ಪಟ್ಟೀರ ಟಾಟು ಮೋನಪ್ಪ, ಕಾಳಪಂಡ ಸಿ.ಸುಧೀರ್, ಕಾಳಪಂಡ ಟಿ.ಟಿಪ್ಪು ಬಿದ್ದಪ್ಪ, ಶ್ರೀಮತಿ ಬಲ್ಲನಮಾಡ ರೀಟಾ ಅಪ್ಪಯ್ಯ, ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಮತ್ತು ಇತರ ಗಣ್ಯರು ಹಾಗೂ ಕ್ರೀಡಾಳುಗಳು ಹಾಜರಿದ್ದರು.
ನಂತರ ವಿಜೇತರಿಗೆ ಬಹುಮಾನ ವಿತರಿಸಿದ ಚೆಪ್ಪುಡೀರ ಕಿರಣ್ ಅಯ್ಯಪ್ಪ, ಬಾನಂಡ ಎನ್.ಪೃತ್ಯು, ಮಚ್ಚಮಾಡ ಅನೀಶ್ ಮಾದಪ್ಪ, ಅರಮಣಮಾಡ ಇಂದಿರಾ ಮೋಹನ್, ಸಣ್ಣುವಂಡ ಎ.ಪ್ರಸಾದ್ ಅಚ್ಚಯ್ಯ ಮತ್ತು ಬಹುಮಾನಗಳನ್ನು ಪ್ರಯೋಜಿಸಿದ ಕುಟುಂಬಗಳಿಗೂ, ಇತರ ಗಣ್ಯರು, ಕ್ರೀಡಾಪಟುಗಳು ಹಾಗೂ ಆಯೋಜಕರಿಗೆ ಶುಭ ಹಾರೈಕೆಗಳು.
 
 

The Supreme Court has given a historic verdict, 22/09/2021

ಕೊಡವರು ಮತ್ತು ಜಮ್ಮಾ ಭೂಮಿ ಹಿಡುವಳಿದಾರರಿಗೆ ಇರುವ ಕೋವಿ ವಿನಾಯಿತಿ ಪ್ರಶ್ನಿಸಿದ ಅರ್ಜಿಯನ್ನು ತಿರಸ್ಕರಿಸಿ ಉಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. 170 ವರ್ಷಕ್ಕೂ ಹೆಚ್ಚು ಕಾಲದಿಂದ ಇರುವ ಈ ವಿನಾಯಿತಿಯ ಮಾನ್ಯತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ನ್ಯಾಯಾಲಯಕ್ಕೆ ಮತ್ತು ಕಾನೂನು ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
 
The High Court has upheld the notification exempting Kodavas and Jamma land holders from obtaining licence for a gun. The PIL filed challenging the said notification has been dismissed. Congratulations to all and gratitude to the lawyers and persons involved in the legal battle.
 
 

My stand in the Covi license exemption case, 17/09/2021

ಕೋವಿ ಪರವಾನಗಿ ವಿನಾಯತಿ ಪ್ರಕರಣದಲ್ಲಿ ಇದು ನನ್ನ ನಿಲುವು.