Visited the Ponnampet taluk office, listened to the grievances of the public, and instructed the concerned department officials to take necessary action, 24/04/2025

ಪೊನ್ನಂಪೇಟೆಯ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರನ್ನು ಅವರ ಅಹವಾಲುಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿಲಾಯಿತು.
 
img
 

Tribute to Senior Congress Leader Mr. Mittu Changappa, 24/04/2025

ಹಿರಿಯ ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಮಾಜಿ ಉಪಾಧ್ಯಕ್ಷರು, ಉದ್ಯಮಿ, ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿದ್ದ ಹಿರಿಯ ಮುತ್ಸದಿ ರಾಜಕಾರಣಿ ಶ್ರೀ ಮಿಟ್ಟು ಚಂಗಪ್ಪರವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತೀವ ದುಃಖ ಉಂಟಾಗಿದೆ. ಇವರ ಅಗಲಿಕೆಯು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ.
ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಅಪಾರ ಬಂಧು ಬಳಗಕ್ಕೆ, ಅಭಿಮಾನಿ ವರ್ಗಕ್ಕೆ ಮತ್ತು ಕುಟುಂಬದವರಿಗೆ ಆ ಸರ್ವಶಕ್ತ ಭಗವಂತ ಕರುಣಿಸಲಿ ಮತ್ತು ಮೃತರ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
 
img
 

A blessed occasion of visiting the famous Baraguru Rashe Jadala Devara festival at Gonigadde, Naalkeri village in Ponnampet taluk, 24/04/2025

ಪೊನ್ನಂಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದ ಗೋಣಿಗದ್ದೆಯ ಪ್ರಸಿದ್ಧ ಬರಗೂರು ರಾಶೆ ಜಾದಲ ದೇವರ ಉತ್ಸವಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಶುಭ ಸಂದರ್ಭ.
 
img
 

Panchayati Raj: Empowering Villages, Empowering India, 24/04/2025

ಮಹಾತ್ಮಾ ಗಾಂಧಿಯವರ 'ಗ್ರಾಮ ಸ್ವರಾಜ್ಯ' ಅಥವಾ ಸ್ಥಳೀಯ ಸರ್ಕಾರದ ಕನಸು ಸಾಕಾರಗೊಳಿಸಿದ್ದು 'ಪಂಚಾಯತ್ ರಾಜ್' ವ್ಯವಸ್ಥೆ.ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 73ನೇ ತಿದ್ದುಪಡಿಯ ಮೂಲಕ ಅಧಿಕಾರ ವಿಕೇಂದ್ರೀಕರಣದ ಕ್ರಾಂತಿಕಾರಕ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ತಂದು ದೇಶದ ಕಟ್ಟ ಕಡೆಯ ಪ್ರಜೆಯ ಕೈಗೂ ಅಧಿಕಾರ ನೀಡಿದರು.
 
img
 

On the birth anniversary of Dr. Rajkumar, the legendary actor and singer of Kannada cinema and recipient of the Dadasaheb Phalke Award, I offer my respectful tributes to him, 24/04/2025

ಕನ್ನಡ ಚಿತ್ರ ಲೋಕದ ಖ್ಯಾತ ನಟ ಮತ್ತು ಗಾಯಕ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜಕುಮಾ‌ರ್
ಅವರ ಜನ್ಮಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳು.
 
img