Meeting with Ponnampet Thashildar regarding Pauthi Katha and Jodupatti temple, 26/05/2022
ಪೊನ್ನಂಪೇಟೆ ಮಾನ್ಯ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಇನ್ನೂ ಬಾಕಿ ಉಳಿದಿರುವ ಪೌತಿ ಖಾತಾಗಳನ್ನು ಪೂರ್ಣಗೊಳಿಸಲು ಅವರಿಗೆ ಒತ್ತಾಯ ಮಾಡಲಾಯಿತು. ಪೌತಿ ಖಾತೆ ನಿಯಮಗಳನ್ನು ಸರಳೀಕರಿಸಿರುವುದರ ಉಪಯೋಗ ಜನ ಸಾಮಾನ್ಯರಿಗೆ ಆಗಬೇಕು. ಬಾಕಿ ಉಳಿದಿರುವ ಎಲ್ಲಾ ಖಾತಾಗಳ ಕೆಲಸಗಳು ಆದಷ್ಟು ಬೇಗ ಮುಗಿಸುವಂತೆ ಅವರಿಗೆ ಮನವರಿಕೆ ಮಾಡಲಾಯಿತು. ಇದೇ ಸಂಧರ್ಭದಲ್ಲಿ ಜೋಡುಪಟ್ಟಿ ದೇವಾಲಯದ RTC ಯನ್ನು ಮಾಡಿಕೊಡುವಂತೆ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಕೊಡಲಾಗಿದೆ. ಆದಷ್ಟು ಬೇಗ ದೇವಾಲಯದ ಭಕ್ತರ ಮನವಿ ಪೂರ್ಣಗೊಳ್ಳುವ ಭರವಸೆ ಇದೆ. #Kodagu #Coorg #Virajpet #Ponnampet #Kushalnagar #Madikeri #Jodupatti #PoutiKatha
Inauguration of developmental works in Sampaje , 24/05/2022
ಸಂಪಾಜೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ಮತ್ತು ಕೆಪಿಸಿಸಿಯ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಅವರು ಪಾಲ್ಗೊಂಡಿದ್ದರು. ಕೊಡಗಿನಲ್ಲಿ ಆಗಬೇಕಿರುವ ಹಲವಾರು ಮೂಲಭೂತ ಸೌಕರ್ಯಗಳ ಕೆಲಸಗಳು, ಅಭಿವೃದ್ಧಿ ಕಾಮಗಾರಿಗಳು, ಸಾಮಾನ್ಯ ಜನರ ಸಮಸ್ಯೆ, ಬೆಳೆಗಾರರ ಸಮಸ್ಯೆ, ಪಕ್ಷದ ಸಂಘಟನೆ ಇನ್ನು ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿ ಅವರೊಂದಿಗೆ ಚರ್ಚಿಸುವ ಅವಕಾಶವೂ ಈ ಸಂದರ್ಭದಲ್ಲಿ ಒದಗಿಬಂತು. ಜಿಲ್ಲೆಯ ಅಭಿವೃದ್ದಿ ಬಗ್ಗೆ ಅವರಿಬ್ಬರಿಗೂ ಇರುವ ಕಾಳಜಿಗೆ ನನ್ನ ಧನ್ಯವಾದಗಳು. #Kodagu #Coorg #Virajpet #Ponnampet #Kushalnagar #Madikeri #Sampaje
Inauguration of Sahara Club Cricket finals in Chennayanakote, 23/05/2022
ಚೆನ್ನಯ್ಯನಕೋಟೆಯಲ್ಲಿ ಸಹಾರ ಕ್ಲಬ್'ನ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಉದ್ಘಾಟನೆ ಮಾಡಿ ಪ್ರಶಸ್ತಿ ವಿತರಣೆ ಮಾಡಿದೆ. ಈ ಸಂದರ್ಭದಲ್ಲಿ ಒಂದು ಅದ್ಭುತವಾದ ಕ್ರಿಕೆಟ್ ಪಂದ್ಯವನ್ನು ವೀಕ್ಷಣೆ ಮಾಡುವ ಅವಕಾಶ ಒದಗಿಬಂತು. ಬಹಳ ಅಚ್ಚುಕಟ್ಟಾಗಿ ಕ್ಲಬ್'ನ ಯುವಕರು ಪಂದ್ಯಾವಳಿಯನ್ನು ಆಯೋಜಿಸಿದ್ದರು. ಅಷ್ಟೇ ಉತ್ಸಾಹ ಮತ್ತು ಕ್ರೀಡಾ ಮನೋಭಾವದಿಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕ್ರೀಡೆಗಳ ಉದ್ದೇಶ ಕೇವಲ ದೇಹದಂಡನೆಯಲ್ಲ. ಮನೋಲ್ಲಾಸ, ಪರಸ್ಪರ ಸಹಕಾರ, ಒಗ್ಗಟ್ಟು, ಜೀವನದಲ್ಲಿ ಬೇಕಾದ ಶಿಸ್ತು, ಸಂಯಮ ಎಲ್ಲವನ್ನು ಅದು ಕಲಿಸುತ್ತದೆ. ಪಂದ್ಯಾವಳಿಯ ಆಯೋಜಕರಿಗೂ, ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ನನ್ನ ಅಭಿನಂದನೆಗಳು. #Kodagu #Coorg #Virajpet #Ponnampet #Madikeri #Kushalnagar #Sports #Cricket #Channayanakote #Forest #Jungle
Meeting with representatives of forest department workers , 22/05/2022
ಕರ್ನಾಟಕ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘದ ಅಧ್ಯಕ್ಷರಾದ ಎ.ಎಂ. ನಾಗರಾಜ ಅವರು ನನ್ನನ್ನು ಭೇಟಿಮಾಡಿ ಇಲಾಖೆಯ ನೌಕರರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು. ಅವರಿಗೆ ಅಗತ್ಯವಿರುವ ಕಾನೂನು ಹೋರಾಟದಲ್ಲಿ ಅವರ ಜೊತೆಯಿದ್ದು ಸಹಕರಿಸುವ ಭರವಸೆಯನ್ನು ಅವರಿಗೆ ನೀಡಿದ್ದೇನೆ. ಅರಣ್ಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳು, ಸಂಕಷ್ಟಗಳ ಬಗ್ಗೆ ನನಗೆ ಮನವರಿಕೆಯಾಗಿದೆ. ಅರಣ್ಯ ಸಂಪತ್ತನ್ನು ಜೋಪಾನ ಮಾಡುವ ಕಾಯಕದಲ್ಲಿ ತೊಡಗಿರುವ ದಿನಗೂಲಿ ನೌಕರರಿಗೆ ಸಾಕಷ್ಟು ಮೂಲಭೂತ ಸೌಕರ್ಯಗಳ ಅವಶ್ಯಕತೆ ಕೂಡ ಇದೆ. ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಮಾಡಬಹುದಾದ ಸಹಾಯಕ್ಕೆ ನಾನು ಸದಾ ಸಿದ್ಧನಿದ್ದೇನೆ ಎಂದು ನಾಗರಾಜ ಅವರಿಗೆ ತಿಳಿಸಿದ್ದೇನೆ. #Kodagu #Coorg #Virajpet #Ponnampet #Madikeri #Kushalnagar #Forest #Jungle
Visit to Perur Sri Igguthappa temple, 20/05/2022
ಪೇರೂರು ಶ್ರೀ ಈಶ್ವರ ಇಗುತ್ತಪ್ಪ ದೇವಸ್ಥಾನದ ಅಷ್ಟಬಂದ ಬ್ರಹ್ಮ ಕಲಶೋತ್ಸವದಲ್ಲಿ ಭಾಗಿಯಾದ ಸಂದರ್ಭ. ಭಕ್ತರೊಂದಿಗೆ ದೇವರ ಆಶೀರ್ವಾದ ಪಡೆದು ದೇವರ ಪ್ರಸಾದ ಸ್ವೀಕರಿಸಿದೆ.
ಇದೇ ಸಂಧರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ದೇವರ ಆಶೀರ್ವಾದದಿಂದ ನನ್ನ ಸಹಾಯ ಹಸ್ತ ನೀಡುವ ಸೌಭಾಗ್ಯ ನನ್ನದಾಯಿತು. ಇದೆಲ್ಲಾ ಇಗುತ್ತಪ್ಪ ದೇವರು ನನ್ನ ಕೈಯಲ್ಲಿ ಮಾಡಿಸಿದ್ದು ಎನ್ನುವುದು ನನ್ನ ಭಾವನೆ.
ಎಲ್ಲಾ ಜನರ ಮೇಲೆ ಇಗುತ್ತಪ್ಪ ದೇವರ ಆಶೀರ್ವಾದ ಇರಲೆಂದು ಪ್ರಾರ್ಥಿಸಿದೆ. ದಿನಾಂಕ 15 ಮೇ ದಿನ ನಡೆದ ವಿವಿಧ ಪೂಜಾ ಕಾರ್ಯಕ್ರಮಗಳು ಭಕ್ತರ ಕಣ್ಣು ತುಂಬಿದವು. ದೇವಸ್ಥಾನದ ಆಡಳಿತ ಮಂಡಳಿಗೂ, ಸ್ಥಳೀಯರಿಗೂ, ಭಕ್ತಾದಿಗಳಿಗೂ ನನ್ನ ನಮನಗಳು.
#Igguthappa #Kodagu #Coorg #Virajpet #Perur #Ponnmpet #Kushalnagar #Madikeri