The nomination of Sri Jayram Ramesh and Sri Mansoor Khan, 01/06/2022

The nomination of Sri Jayram Ramesh and Sri Mansoor Khan, official candidates of the Indian National Congress for the forthcoming Rajya Sabha was found to be in order and accepted by the returning officer. Wishing the two gentlemen the best of luck.
 
ಮುಂಬರುವ ರಾಜ್ಯಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳಾದ ಶ್ರೀ ಜಯರಾಮ್ ರಮೇಶ್ ಮತ್ತು ಮನ್ಸೂರ್ ಖಾನ್ ಅವರ ನಾಮಪಾತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾ ಅಧಿಕಾರಿಗಳು ಖಾತ್ರಿ ಮಾಡಿದ್ದಾರೆ. ಈ ಇಬ್ಬರು ಸಜ್ಜನ ರಾಜಕಾರಣಿಗಳಿಗೆ ನನ್ನ ಅಭಿನಂದನೆ ಮತ್ತು ಶುಭಾಶಯಗಳು.
 
#Karnataka #RajyaSabha #Kodagu #Coorg #Madikeri #Ponnampet #Kushalnagar #Virajpet
 
 
img
 

Moments with Sri Jayram Ramesh, 01/06/2022

In discussion regarding filing of nomination for Rajya Sabha. A learned and thorough gentleman Sri Jayram Ramesh.
 
ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿ, ಸಭ್ಯ ಸಜ್ಜನ ಹಾಗೂ ರಾಜ್ಯಸಭೆಗೆ ಅತ್ಯಂತ ಸೂಕ್ತ ಅಭ್ಯರ್ಥಿಯಾದ ಶ್ರೀ ಜೈರಾಮ್ ರಮೇಶ್ ರವರೊಂದಿಗೆ ನಾಮಪತ್ರ ಸಲ್ಲಿಕೆ ಕುರಿತು ಮಾತುಕತೆ ನಡೆಸಿದ ಸಂದರ್ಭ.
 
 
img
 

Meeting with Kodava Baashika Samaj representatives, 31/05/2022

ಕೊಡವ ಭಾಷಿಕ ಸಮಾಜದ ಹಲವಾರು ಪ್ರಮುಖರು, ಮತ್ತು ಆ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ದೀರ್ಘವಾದ ಸಮಾಲೋಚನೆ ನಡೆಸಿದೆ.
 
ಈ ಸಂಧರ್ಭದಲ್ಲಿ ಹಲವಾರು ವಿಷಯಗಳು, ವಿಚಾರಗಳು ಅವರೊಂದಿಗೆ ಚರ್ಚಿಸಾಲಾಯಿತು. ಬಾಷಿಕ ಸಮಾಜದ ಒಳಿತಿಗೆ ಆಗಬೇಕಾದ ಕಾರ್ಯಗಳ ಬಗ್ಗೆ, ಮುಂದಿನ ದಿನಗಳಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು.
 
ವಿರಾಜಪೇಟೆಯಲ್ಲಿ ನಡೆದ ಈ ಸಭೆಯಲ್ಲಿ ಭಾಗವಹಿಸಿದ ಬಾಷಿಕ ಸಮಾಜದ ಎಲ್ಲಾ ಹಿರಿಯರಿಗೆ, ಮುಖಂಡರಿಗೆ, ಪ್ರಮುಖರಿಗೆ ವಂದನೆಗಳು. ಅವರು ಕೊಟ್ಟ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಕ್ಕೆ ನಾನು ಆಭಾರಿಯಾಗಿದ್ದೇನೆ.
 
#Kodagu #Coorg #Virajpet #Madikeri #Kushalnagar #Ponnampet
 
 
img
 

20th Kodava Cricket Namme Porkuvanda Cup, 30/05/2022

ಇಪ್ಪತ್ತನೇ ಕೊಡವ ಕ್ರಿಕೆಟ್ ನಮ್ಮೆ ಪೋರ್ಕುವಂಡ ಕಪ್ ಫೈನಲ್ಸ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಧರ್ಭ.
 
ಕೊಡಗಿನ ಖಾಸಗಿ ಕ್ರೀಡಾ ಪಂದ್ಯಾವಳಿಗಳಲ್ಲಿ ಒಂದು ಮುಖ್ಯ ಸ್ಥಾನ ಪಡೆದಿರುವ ಪಂದ್ಯಾವಳಿ ಇದು. ಈ ವರ್ಷದ ಫೈನಲ್ಸ್ ಪಂದ್ಯಾವಳಿ ಅತಿ ಹೆಚ್ಚು ಮಳೆ ಬಂದ ಸಂದರ್ಭದಲ್ಲೂ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಿಭಾಯಿಸಿದ ಆಯೋಜಕರಿಗೆ ನನ್ನ ಅಭಿನಂದನೆಗಳು.
 
ಕ್ರೀಡೆ ಕೊಡಗಿನ ಸಂಸ್ಕೃತಿಯ ಅವಿಭಾಜ್ಯ ಅಂಗ. ಇದನ್ನು ಬೆಳೆಸಿ ಪ್ರೋತ್ಸಾಹಿಸುತ್ತಿರುವ ಎಲ್ಲರೂ ಅಭಿನಂದನಾರ್ಹರು. ಕೂಟದಲ್ಲಿ ಪಾಲ್ಗೊಂಡ ಮತ್ತು ಕ್ರೀಡಾ ಮನೋಭಾವ ತೋರಿದ ಎಲ್ಲಾ ಕ್ರೀಡಾಪಟುಗಳಿಗೂ ಕೂಡ ಅಭಿನಂದನೆಗಳು.
 
#Kodagu #Coorg #Virajpet #Ponnampet #Kushalnagar #Madikeri #Jodupatti #PoutiKatha
 
 
img
 

Champions League Cricket at Gonnikoppal, 27/05/2022

ಗೋಣಿಕೊಪ್ಪಲುವಿನಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯ ವೀಕ್ಷಿಸಲು ಮತ್ತು ಪ್ರಶಸ್ತಿ ವಿತರಿಸಲು ಭೇಟಿ ಕೊಟ್ಟ ಸಂಧರ್ಭ.
 
ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿ ನಿರ್ವಹಣೆ ಮಾಡಿದ ಆಯೋಜಕರಿಗೆ ನನ್ನ ಅಭಿನಂದನೆಗಳು. ಅದೇ ರೀತಿ ಪಂದ್ಯಗಳಲ್ಲಿ ಸ್ಪರ್ದಾ ಮನೋಭಾವದಿಂದ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೂ ನನ್ನ ಅಭಿನಂದನೆಗಳು.
 
ಅತಿ ಹೆಚ್ಚು ಕ್ರೀಡಾ ಪಂದ್ಯವಳಿಗಳನ್ನು ಆಯೋಜಿಸುವ ಕೊಡುಗು ಜಿಲ್ಲೆ ಅತಿ ಹೆಚ್ಚು ಕ್ರೀಡಾಪಟುಗಳನ್ನು ಕೊಡುಗೆಯಾಗಿ ಕೊಟ್ಟಿದೆ. ಹಾಕಿ, ಫುಟ್ಬಾಲ್, ಕ್ರಿಕೆಟ್ ಯಾವುದೇ ಕ್ರೀಡೆಯಾಗಲಿ, ಕೊಡಗು ಜಿಲ್ಲೆಯ ಕ್ರೀಡಾಪಟುಗಳಿಗೆ ಈ ರೀತಿಯ ಪಂದ್ಯಾವಳಿಗಳಿಂದ ಪ್ರೋತ್ಸಾಹ ದೊರೆತಿದೆ.
 
ಪಂದ್ಯಾವಳಿಯ ವೇದಿಕೆಯಲ್ಲೇ ನನ್ನನು ಸನ್ಮಾನಿಸಿದ ಆಯೋಜಕರಿಗೆ ಮತ್ತೊಮ್ಮೆ ಧನ್ಯವಾದಗಳು.
 
#Kodagu #Coorg #Madikeri #Kushalnagar #Ponnampet #Virajpet #Gonikoppal #Cricket #Sports
 
 
img