Visit to the Sri Kadasiddeshwara Mutt in Tiptur, 10/06/2022
ತಿಪಟೂರಿನ ನೊಣವಿನಕೆರೆಯ ಶ್ರೀ ಕಾಡ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ಪೂಜೆ ಸಲ್ಲಿಸಿ ಕಿರಿಯ ಶ್ರೀಗಳಿಂದ ಆಶೀರ್ವಾದ ಪಡೆದೆ.
ಕರ್ನಾಟಕದ ಆಧ್ಯಾತ್ಮ ಹಾಗೂ ಸಮಾಜಿಕೆ ಕ್ಷೇತ್ರಕ್ಕೆ ಮಠದ ಕೊಡುಗೆ ಅನನ್ಯವಾದುದು. ಕ್ಷೇತ್ರದಲ್ಲಿ ಇರುವ ಪ್ರತಿ ಕ್ಷಣವೂ ಧನ್ಯತಾ ಭಾವನೆ ಕೊಡುತ್ತದೆ.
ಕಿರಿಯ ಶ್ರೀಗಳ ಜೊತೆ ಕೆಲ ಸಮಯ ವಿಚಾರ ವಿನಿಮಯ ನಡೆಸಿದೆ. ಇಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಬಗ್ಗೆಯೂ ವಿಚಾರಿಸಿದೆ.
#Kodagu #Coorg #Madikeri #Ponnmpet #Kishalnagar #Virajpet #Nonavinakere #KadaSiddeshwara #Tiptur #Temple
A soldier never retires. Honoured to be part of the annual meet of ex-soldiers at Shettigeri, 09/06/2022
ಸೈನಿಕರಿಗೆ ವಿಶ್ರಾಂತಿ ಇಲ್ಲ. ಸೈನಿಕರಿಗೆ ನಿವೃತ್ತಿ ಇಲ್ಲ. ಸೈನಿಕರಿಗೆ ಸಾವಿಲ್ಲ. ಶೆಟ್ಟಿಗೇರಿಯಲ್ಲಿ ಮಾಜಿ ಸೈನಿಕರ ಸಂಘದ ವಾರ್ಷಿಕ ಸಭೆಗೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದಕ್ಕೆ ನನಗೆ ಹೆಮ್ಮೆ ಇದೆ. ಅನಾದಿ ಕಾಲದ ಕೊಡಗಿನ ವೀರ ಪರಂಪರೆಯನ್ನು ಮುನ್ನಡೆಸುತ್ತಿರುವ ನಮ್ಮ ಯೋಧರು ಎಂದೆಂದಿಗೂ ನಮಗೆ ಆದರ್ಶ.
ಈ ಸಂಧರ್ಭದಲ್ಲಿ ಮಾತನಾಡುತ್ತಾ, ಸೈನಿಕರು ತಮ್ಮ ಜೀವನಪೂರ್ತಿ ಸೈನಿಕರಾಗಿಯೇ ಉಳಿಯುತ್ತಾರೆ, ಅವರು ಎಂದೂ ಮಾಜಿ ಆಗಲಿಕ್ಕೆ ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿದೆ.
ಸಭೆಗೆ ನನ್ನನ್ನು ಕರೆಸಿಕೊಂಡ ಆಯೋಜಕರಿಗೂ, ಪಾಲ್ಗೊಂಡಿದ್ದ ನಮ್ಮ ಹೆಮ್ಮೆಯ ಸೈನಿಕರಿಗೂ ನನ್ನ ಧನ್ಯವಾದಗಳು ಮತ್ತು ಅಭಿನಂದನೆಗಳು.
#Kodagu #Coorg #Virajpet #Madikeri #Kushalnagar #Ponnampet #Shettigeri #Army #IndianArmy #Soldier
Bail plea of NSUI members arrested by Police on false charges, 08/06/2022
ಕರ್ನಾಟಕ ಶಿಕ್ಷಣ ಸಚಿವರ ಮನೆಯ ಎದುರು ಪ್ರತಿಭಟನೆ ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟ ಎನ್‌ಎಸ್‌ಯುಐ ಕಾರ್ಯಕರ್ತರಿಗೆ ಜಾಮೀನು ನೀಡುವಂತೆ ಕೋರಿ ತಿಪಟೂರು ಘನ ನ್ಯಾಯಾಲಯದಲ್ಲಿ, ಮಂಗಳವಾರ ವಾದ ಮಂಡಿಸಿದೆ.
ಪ್ರಜಾಪ್ರಭುತ್ವದ ಬುನಾದಿ ಅಡಿ, ಆಡಳಿತ ಪಕ್ಷವನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಇಂದು ಅಧಿಕಾರದಲ್ಲಿರುವ ಪಕ್ಷದ ನಾಯಕರು ಕೂಡ ಪ್ರತಿಭಟನೆಗಳ ಮೂಲಕವೇ ಬೆಳೆದವರು. ಈ ಪ್ರಕರಣದಲ್ಲಿ, ವಿದ್ಯಾರ್ಥಿಗಳ ಹೋರಾಟವನ್ನು ರಾಜಕೀಯ ದುರುದ್ದೇಶದಿಂದ ಸುಳ್ಳು ಮೊಕದ್ದಮೆ ದಾಖಲು ಮಾಡಿ ಜೈಲಿಗೆ ಕಳುಹಿಸಲಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ಜಾಮೀನು ನೀಡುವಂತೆ ವಾದ ಮಂಡಿಸಿದೆ.
ವಾದವನ್ನು ಆಲಿಸಿದ ಘನ ನ್ಯಾಯಾಲಯ 8 ಜೂನ್'ಗೆ ಜಾಮೀನು ಆದೇಶ ಕಾಯ್ದಿರಿಸಿದೆ.
ವಿಚಾರಣೆ ವೇಳೆ ಪಕ್ಷದ ಕಾನೂನು ವಿಭಾಗದ ಉಪಾಧ್ಯಕ್ಷ ಎಸ್.ಎ. ಅಹ್ಮದ್, ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್, ಕಾರ್ಯದರ್ಶಿ ಶತಾಬಿಶ್ ಶಿವಣ್ಣ ಹಾಗೂ ವಕೀಲ ವಸಂತ್ ಉಪಸ್ಥಿತರಿದ್ದರು.
#Kodagu #Coorg #Madikeri #Virajpet #Kushalnagar #Ponnampet #Tumakuru #Karnataka #NSUI #Education #Protest #FalseCase #IllegalArrest #LegalCell
Media reports on former PM Rajiv Gandhi's anniversary remembrance programme, 06/06/2022
ಮಾಜಿ ಪ್ರಧಾನಮಂತ್ರಿ ಶ್ರೀ ರಾಜೀವ್ ಗಾಂಧಿ ಅವರ 31ನೇ ಪುಣ್ಯ ಸ್ಮರಣೆ ಅಂಗವಾಗಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿ ಪಕ್ಷದಲ್ಲಿ ಯಾವುದೇ ಆಂತರಿಕ ಸಮಸ್ಯೆ ಇದ್ದರು ಅದನ್ನು ಬದಿಗೊತ್ತಿ ಪಕ್ಷದ ಸಂಘಟನೆಯಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ ಬಗ್ಗೆ ಮಾತನಾಡಿದೆ.
ಯಾವುದೇ ಕಾರ್ಯಕರ್ತ ಅಥವಾ ವ್ಯಕ್ತಿ ನಿಷ್ಠೆಯಿಂದ ಪಕ್ಷದ ಕೆಲಸ ಮಾಡಿದಲ್ಲಿ, ಪಕ್ಷವು ಅವರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತದೆ ಎನ್ನುವ ಮಾತನ್ನು ತಿಳಿಸಿದೆ.
ರಾಜೀವ್ ಗಾಂಧಿಯವರು ಪ್ರಧಾನಿಯಾಗಿ ದೇಶದ ಪ್ರಗತಿಗೆ ಕೊಟ್ಟ ಕೊಡುಗೆಯನ್ನು ಈ ಸಂಧರ್ಭದಲ್ಲಿ ಸ್ಮರಿಸಿದೆ. ಮಾಹಿತಿ ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಭಾರತಕ್ಕೆ ಅವರ ಕೊಡುಗೆ ಪ್ರಾಥಃಸ್ಮರಣೀಯ.
ಕಾರ್ಯಕ್ರಮದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಪಾಲ್ಗೊಂಡಿದ್ದರು.
#Kodagu #Coorg #Virajpet #Madikeri #Kushalnagar #Ponnampet
Inauguration of Kolakeri grama Bhagwati temple's diamond jubilee hall, 05/06/2022
ಕೊಳಕೆರಿ ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಜ್ರ ಮಹೋತ್ಸವ ಸಭಾಂಗಣದ ಉದ್ಘಾಟನೆ ಮಾಡುವ ಅವಕಾಶ ನನಗೆ ಆ ದೇವರ ಕೃಪೆಯಿಂದ ಒದಗಿಬಂತು.
ಈ ಪುಣ್ಯದ ಕೆಲಸದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಮಾಡಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿ, ಮುಖಂಡರು ಹಾಗೂ ಭಕ್ತಾದಿಗಳಿಗೆ ವಂದನೆಗಳು. ದೇವರ ಇಚ್ಛೆಯಂತೆ ನನ್ನ ಕೈಯಲ್ಲಿ ಈ ಕಾರ್ಯವಾದುದ್ದು ನನ್ನ ಪುಣ್ಯ.
ನೂತನ ಸಭಾಂಗಣದಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತಹ ಚಟುವಟಿಕೆಗಳು ನಡೆಯುವುದು ಸಂತಸದ ವಿಷಯವಾಗಿದೆ. ದೇವರ ಕೃಪೆ ಎಲ್ಲರ ಮೇಲಿರಲಿ ಎಂದು ಮತ್ತೊಮ್ಮೆ ಪ್ರಾರ್ಥಿಸುವೆ
#Kodagu #Coorg #Virajpet #Madikeri #Kushalnagar #Ponnampet #Kolakeri