Bhoomi Pooja Held for New Hockey Turf in Ponnampete, 15/09/2026

ಪೊನ್ನಂಪೇಟೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಹಾಕಿ ಟರ್ಫ್ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನನ್ನೊಂದಿಗೆ ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷರಾದ ಶ್ರೀ ಅಜ್ಜಿಕುಟ್ಟಿರ ನರೇನ್ ಎಸ್ ಕಾರ್ಯಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಧ್ಯಕ್ಷರಾದ ಚಪ್ಪಡಿರ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಬ್ಲಾಕ್ ಮಹಿಳಾ ಅಧ್ಯಕ್ಷರಾದ ಆಶಾ ಪೂಣಚ್ಚ, ಹಿರಿಯರಾದ ಮುಕಳೇರ ಕುಶಾಲಪ್ಪ, ವಾಸು ಕುಟ್ಟಪ್ಪ, ಒಲಂಪಿಯನ್ ಬಾಳೇಯಾಡ ಸುಬ್ರಮಣಿ , ಚೆಪ್ಪುಡೀರ ಪೂಣಚ್ಚ, ಅಜ್ಜಿಕುಟ್ಟಿರ ಕುಟುಂಬದ ಸರ್ವ ಸದಸ್ಯರು, ಅಧಿಕಾರಿ ವರ್ಗದವರು, ಪಕ್ಷದ ಮುಖಂಡರು ,ಕಾರ್ಯಕರ್ತರು ಉಪಸ್ಥಿತರಿದ್ದು ಈ ಶುಭ ಸಮಾರಂಭಕ್ಕೆ ಸಾಕ್ಷಿಯಾದರು.
 

Kaveri Dasara Committee Holds Gonikoppa Preliminary Meeting, 15/09/2026

ಕಾವೇರಿ ದಸರಾ ಸಮಿತಿ ಗೋಣಿಕೊಪ್ಪ ಇದರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮುಂಬರುವ ದಸರಾ ಆಚರಣೆಯ ಬಗ್ಗೆ ಚರ್ಚಿಸಿದೆ. ಈ ಸಮಿತಿಯ ಅಧ್ಯಕ್ಷನಾಗಿರುವ ನಾನು, ಈ ಬಾರಿಯ ದಸರಾ ಆಚರಣೆಯಲ್ಲಿ ಕೈಗೊಳ್ಳಬೇಕಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಈ ಉತ್ಸವವನ್ನು ಮತ್ತಷ್ಟು ಅದ್ದೂರಿಯಾಗಿ ನಡೆಸುವ ಕುರಿತು ಸಮಿತಿಯ ಸದಸ್ಯರೊಂದಿಗೆ ಹಾಗೂ ಕಾರ್ಯಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಅವರೊಂದಿಗೆ ಚರ್ಚಿಸಿದ ಸಂದರ್ಭ.

 


Engineers’ Day Celebrated in Honour of Sir M. Visvesvaraya, 15/09/2026

ನಾಡಿನ ಸಮಸ್ತ ಅಭಿಯಂತರರಿಗೆ
ಭಾರತ ರತ್ನ, ನಾಡಿನ ಹೆಮ್ಮೆಯ ಮೇಧಾವಿ, ವಿದ್ವಾಂಸ, ರಾಜನೀತಿಜ್ಞ, ಮೈಸೂರಿನ ದಿವಾನರಾಗಿದ್ದ ಹಾಗು ಆಧುನಿಕ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ
ಸರ್ ಎಂ. ವಿಶ್ವೇಶ್ವರಯ್ಯರವರ
ಜನ್ಮದಿನದ ಗೌರವಾರ್ಥ ಆಚರಿಸುವ
ಇಂಜಿನಿಯರ್‌ಗಳ ದಿನಾಚರಣೆಯ ಶುಭಾಶಯಗಳು''
 

International Democracy Day: Uphold Freedom, Equality and Brotherhood, 15/09/2026

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವೇ ಪ್ರಜಾಪ್ರಭುತ್ವದ ಜೀವಾಳ. ಪ್ರತಿಯೊಬ್ಬರಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಸಮಾನ ಅವಕಾಶವನ್ನು ನೀಡುವ ಸಂವಿಧಾನವನ್ನು ಗೌರವಿಸೋಣ, ಸದೃಢ ಭಾರತವನ್ನು ಕಟ್ಟೋಣ.
 

Ponnanna Participates in Grand Ganeshotsava Celebrations Across Ponnampete, 14/09/2026

ಪೊನ್ನಂಪೇಟೆ ತಾಲೂಕು ಟಿ ಶೆಟ್ಟಿಗೇರಿ, ಚೀಪೆಕೊಲ್ಲಿ, ಶ್ರೀಮಂಗಲ ಭಾಗಗಳಲ್ಲಿ ಅದ್ದೂರಿಯಿಂದ ಹಾಗೂ ಅತ್ಯಂತ ಭಕ್ತಿ ಭಾವದಿಂದ ಆಚರಿಸುತ್ತಿರುವ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ ನಾಡಿನ ಶಾಂತಿ ಸುಭಿಕ್ಷೆಗಾಗಿ ಬೇಡಿಕೊಳ್ಳಲಾಯಿತು.